ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಕಾರ್ಗಿಲ್ ಯುದ್ಧದ ವೀರ ಯೋಧ ಧೋಂಡಿಬಾ ದೇಸಾಯಿ ಅವರ ಸ್ಮರಣಾರ್ಥವಾಗಿ ಬೆಳಗಾವಿಯ ಅನಗೋಳದಿಂದ ಖಾನಾಪುರ ತಾಲೂಕಿನ ಜಾಂಬೋಟಿ ವಡಗಾಂವವರೆಗೆ ಭವ್ಯ ಮೂರ್ತಿ ಮೆರವಣಿಗೆ ಜರುಗಿತು. ಮಾಜಿ ಶಾಸಕ ಅರವಿಂದ ಪಾಟೀಲ್ ಸೇರಿದಂತೆ ಹಲವು ಗಣ್ಯರು ಹಾಗೂ ಮಾಜಿ ಸೈನಿಕರು ವೀರಯೋಧನ ತ್ಯಾಗಕ್ಕೆ ಮನದುಂಬಿ ಕೃತಜ್ಞತೆ ಸಲ್ಲಿಸಿದರು.

ಖಾನಾಪುರ ತಾಲೂಕಿನ ಜಾಂಬೋಟಿ-ವಡಗಾಂವ ಗ್ರಾಮದ ಸುಪುತ್ರ ಧೋಂಡಿಬಾ ದೇಸಾಯಿ ಅವರು 25 ಮೇ 1999 ರಂದು ನಡೆದ ಕಾರ್ಗಿಲ್ ಯುದ್ಧದಲ್ಲಿ ದೇಶದ ಗಡಿ ಕಾಯುತ್ತಾ ವೀರಮರಣ ಅಪ್ಪಿದ್ದರು. ಈ ವೀರಯೋಧನ ಬಲಿದಾನವಾಗಿ 25 ವರ್ಷಗಳು ಸಂದ ಹಿನ್ನೆಲೆಯಲ್ಲಿ, ಅವರ ಸ್ಮರಣೆಯನ್ನು ಸದಾ ಹಸಿರಾಗಿಡಲು ಗ್ರಾಮಸ್ಥರು, ಕುಟುಂಬಸ್ಥರು ಹಾಗೂ ಮಾಜಿ ಸೈನಿಕರು ಒಗೂಡಿ ಗ್ರಾಮದ ಪ್ರವೇಶದ್ವಾರದಲ್ಲಿ ಹುತಾತ್ಮ ಯೋಧನ ಭವ್ಯ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಿದ್ದಾರೆ. ಇದಕ್ಕಾಗಿ ಇಂದು ಬೆಳಿಗ್ಗೆ ಬೆಳಗಾವಿಯ ಅನಗೋಳದಿಂದ ಪೀರಣವಾಡಿ-ಕಿಣಯೇ ಮಾರ್ಗವಾಗಿ ಜಾಂಬೋಟಿ ವಡಗಾಂವವರೆಗೆ ಅದ್ಧೂರಿ ಮೂರ್ತಿ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಜಿ ಶಾಸಕ ಅರವಿಂದ ಪಾಟೀಲ್ ಅವರು ಯೋಧನ ಕಾರ್ಯವನ್ನು ಶ್ಲಾಘಿಸಿ, ಭಾವಪೂರ್ಣ ಗೌರವ ನಮನ ಸಲ್ಲಿಸಿದರು.

ಖಾನಾಪೂರ ತಾಲೂಕಿನ ಜಾಂಬೋಟಿ-ವಡಗಾಂವನ ಸುಪುತ್ರ ಧೋಂಡಿಬಾ ದೇಸಾಯಿ ಅವರು 25 ಮೇ 1999 ರ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾಗಿದ್ದರು. ಗ್ರಾಮಸ್ಥರು, ಕುಟುಂಬಸ್ಥರು, ಮತ್ತು ಮಾಜಿ ಸೈನಿಕರು ಈ ವೀರಯೋಧನ ಬಲಿದಾನವನ್ನು ಸದಾ ಸ್ಮರಣೀಯವಾಗಿಸಲು ಗ್ರಾಮದ ಪ್ರವೇಶದ್ವಾರದಲ್ಲಿ ಹುತಾತ್ಮ ಯೋಧನ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಿದ್ದಾರೆ. ತಾವೂ ಹುತಾತ್ಮರಾಗಿ ದೇಶದ ಗಡಿಯನ್ನು ಕಾಯ್ದ ವೀರ ಯೋಧ ಧೋಂಡಿಬಾ ದೇಸಾಯಿ ಅವರ ಕಾರ್ಯಕ್ಕೆ ಮಾಜಿ ಶಾಸಕ ಅರವಿಂದ ಪಾಟೀಲ್ ಅವರು ಕೃತಜ್ಞತೆಗಳನ್ನು ಸಲ್ಲಿಸಿದರು.
ವಡಗಾಂವ ಜಾಂಬೋಟಿ ಗ್ರಾಮದ ಸುಪುತ್ರ ಧೋಂಡಿಬಾ ದೇಸಾಯಿ ಅವರು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾಗಿ 25 ವರ್ಷಗಳು ಸಂದಿವೆ. ಅವರ ಮೂರ್ತಿಯನ್ನು ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಿ ಪ್ರತಿಷ್ಠಾಪಿಸಲಾಗುವುದು. ಮುಂದಿನ ದಿನಗಳಲ್ಲಿ ದೇಶದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಂದ ಮೂರ್ತಿಯ ಅನಾವರಣವನ್ನು ಮಾಡಲಾಗುವುದು ಎಂದು ಪ್ರಮುಖರು ಮಾಹಿತಿಯನ್ನು ನೀಡಿದರು.
