Vijaypura

ವಿಜಯಪುರದಲ್ಲಿ ರಾಜ್ಯಮಟ್ಟದ ಸಬ್ ಜೂನಿಯರ್ ಬ್ಯಾಡ್ಮಿಂಟನ್ ಟೂರ್ನಿಗೆ ಅದ್ದೂರಿ ತೆರೆ

Share

ವಿಜಯಪುರ ನಗರದ ಡಾ. ಬಿ.ಆರ್. ಅಂಬೇಡ್ಕರ್ ಒಳಾಂಗಣ ಕ್ರೀಡಾಂಗಣ ಹಾಗೂ ಬಿಎಲ್‌ಡಿಇ ಒಳಾಂಗಣ ಕ್ರೀಡಾಂಗಣದಲ್ಲಿ ಏಳು ದಿನಗಳ ಕಾಲ ನಡೆದ ‘ಯೋನೆಕ್ಸ್- ಸನ್‌ರೈಸ್’ ಕರ್ನಾಟಕ ರಾಜ್ಯಮಟ್ಟದ ಸಬ್ ಜೂನಿಯರ್ ಬ್ಯಾಡ್ಮಿಂಟನ್ ಪಂದ್ಯಾವಳಿ ಶನಿವಾರ ಸಾಯಂಕಾಲ ಅದ್ದೂರಿಯಾಗಿ ಮುಕ್ತಾಯ ಗೊಂಡಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 15 ಮತ್ತು 17 ವರ್ಷದೊಳಗಿನ 750ಕ್ಕೂ ಹೆಚ್ಚು ಬಾಲಕ- ಬಾಲಕಿಯರು ವಿವಿಧ ವಿಭಾಗಗಳಲ್ಲಿ ಭಾಗವಹಿಸಿ ಕ್ರೀಡಾ ಮನೋಭಾವ ಮೆರೆದರು.

ಟೂರ್ನಿಯಲ್ಲಿ 750ಕ್ಕೂ ಹೆಚ್ಚು ಪಂದ್ಯಗಳು ನಡೆದಿದ್ದು, ಸುಮಾರು 2400ಕ್ಕೂ ಹೆಚ್ಚು ಶಟಲ್‌ಗಳನ್ನು ಬಳಸಲಾಗಿದೆ. 3000ಕ್ಕೂ ಹೆಚ್ಚು ಪ್ರೇಕ್ಷಕರು ಪಂದ್ಯಾವಳಿಯನ್ನು ವೀಕ್ಷಿಸಿದರು. ಯಾವುದೇ ಅವ್ಯವಸ್ಥೆಗೆ ಅವಕಾಶವಿಲ್ಲದಂತೆ ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಅಸೋಷಿಯೇಷನ್ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿ ಮೆಚ್ಚುಗೆಗೆ ಪಾತ್ರವಾಯಿತು. ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ಕ್ರೀಡಾಸಕ್ತರ ಸಹಕಾರವೂ ಟೂರ್ನಿಯ ಯಶಸ್ಸಿಗೆ ಕಾರಣವಾಯಿತು. ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಅಸೋಷಿಯೇಷನ್ ಅಧ್ಯಕ್ಷ ಕುಮಾರ್ ಬಂಗಾರಪ್ಪ ಅವರು ಟೂರ್ನಿ ಯಶಸ್ವಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಐಪಿಎಲ್ ಕ್ರಿಕೆಟ್ ನಡುವೆಯೂ ಜಿಲ್ಲೆಯ ಯುವಕರಲ್ಲಿ ಬ್ಯಾಡ್ಮಿಂಟನ್ ಮೇಲಿನ ಆಸಕ್ತಿ ಹೆಚ್ಚಲು ಈ ಪಂದ್ಯಾವಳಿ ಕಾರಣವಾಯಿತು.

Tags:

error: Content is protected !!