Hukkeri

ಹುಕ್ಕೇರಿ : ಕುಂಠಿತಗೊಂಡ ನೀರಾವರಿ ಯೋಜನೆಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುವದು – ಎಂ ಡಿ ರಾಜೇಶ ಅಮ್ಮಣಗಿ.

Share

ಹುಕ್ಕೇರಿ ತಾಲೂಕು ಸಮಗ್ರ ನೀರಾವರಿ ಕುರಿತು ಮತ್ತು ಹಲವಾರು ಯೋಜನೆಗಳು ಕುಂಠಿತಗೊಂಡ ಹಿನ್ನಲೆಯಲ್ಲಿ ಕಳೆದ ನಾಲ್ಕು ದಿನದಿಂದ ಕರ್ನಾಟಕ ರೈತ ಸಂಘ ಮತ್ತು ಹಸೀರು ಸೇನೆ ಸಂಘಟನೆಗಳ ಗೌರವ ಅದ್ಯಕ್ಷ ಶಶಿಕಾಂತ ಗೂರುಜಿ ಮತ್ತು ಚೂನಪ್ಪಾ ಪೂಜೇರಿ ನೇತೃತ್ವದಲ್ಲಿ ಕೋರ್ಟ ಸರ್ಕಲ್ ಬಳಿ ಸಾವಿರಾರು ರೈತರು ಬೃಹತ್ ಪ್ರತಿಭಟನೆ ಹಮ್ಮಿಕೊಂಡು ರಾಜ್ಯ ಸರ್ಕಾರವನ್ನು ತರಾಟೆಗೆ ತಗೆದುಕೊಂಡ ಹಿನ್ನೆಲೆಯಲ್ಲಿ ಶನಿವಾರ ಸಾಯಂಕಾಲ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೆಶಕ ರಾಜೇಶ ಅಮ್ಮಣಗಿ , ಬೆಳಗಾವಿ ಜಿಲ್ಲಾ ಪೋಲಿಸ್ ವರಿಷ್ಠಾಧೀಕಾರಿ ಕೆ ರಾಮರಾಜನ ಆಗಮಿಸಿ ರೈತರ ಸಮಸ್ಯೆಗಳ ಕುರಿತು ಚರ್ಚಿಸಿದರು.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳು ಮಾತನಾಡಿ ಅಧಿಕಾರಿಗಳು ಕೇವಲ ಭರವಸೆ ನೀಡದೆ ಯೋಜನೆಗಳು ಕಾರ್ಯರೂಪಕ್ಕೆ ಬರುವಂತಾಗ ಬೇಕು ಕಾರಣ ರಾಜ್ಯ ಸರ್ಕಾರ ರೈತರ ಬೇಡಿಕೆಗಳಿಗೆ ಸ್ಪಂದಿಸ ಬೇಕು ಎಂದರು
ಕರ್ನಾಟಕ ನೀರಾವರಿ ನಿದ ವ್ಯವಸ್ಥಾಪಕ ನಿರ್ದೆಶಕ ರಾಜೇಶ ಅಮ್ಮಣಗಿ ಮಾತನಾಡಿ ಈ ಭಾಗದ ಸಚಿವ ಮತ್ತು ಶಾಸಕರ ಸೂಚನೆಯಂತೆ ಇಂದು ಸರ್ಕಾರದ ಪರವಾಗಿ ರೈತರ ಸಮಸ್ಯೆಗಳ ಕುರಿತು ಚರ್ಚಿಸಲಾಗಿದೆ, ಹಿಣ್ಯಕೇಶಿ ನದಿಯಿಂದ ಮಲ್ಲಿಕಾರ್ಜುನ ಏತ ನೀರಾವರಿ ಯೋಜನೆಗೆ ಬೇಕಾಗುವ ನೀರು ಲಭ್ಯವಾಗದ ಕಾರಣ ಘಟಪ್ರಭಾ ನದಿಯಿಂದ ಲಿಫ್ಟ್ ಮಾಡುವ ಕಾರ್ಯಕ್ಕೆ ಅನುಮೊದನೆ ಪಡೆದು ಅನುಷ್ಟಾನ ಮಾಡಲಾಗುವದು ಹಾಗೂ ಉಳಿದ 9 ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ಪಡೆದು ಟೆಂಡರ ಕರೆದು ಅನುಷ್ಟಾನ ಮಾಡಲಾಗುವದು ಹಾಗೂ ರೈತರ ನಿಯೋಗಕ್ಕೆ ಮುಖ್ಯಮಂತ್ರಿ ಮತ್ತು ನೀರಾವರಿ ಸಚಿವರ ಭೇಟಿಗೆ ಅವಕಾಶ ಕಲ್ಪಿಸಲಾಗುವದು ಎಂದರು

ಅಧಿಕಾರಿಗಳ ಭರವಸೆಗೆ ರೈತರ ಪ್ರತಿಭಟನೆಯನ್ನು ಮೊಟಕುಗೋಳಿಸಿ ಮಾತನಾಡಿದ ಶಶಿಕಾಂತ ಗುರೂಜಿ ಮತ್ತು ರಾಜ್ಯಾದ್ಯಕ್ಷ ಚೂನಪ್ಪಾ ಪೂಜೇರಿ ನಿರಂತರ 4 ದಿನದಿಂದ ಸಮಗ್ರ ನೀರಾವರಿಗಾಗಿ ರೈತರ ಪ್ರತಿಭಟನೆಗೆ ಸರ್ಕಾರ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೆಶಕರನ್ನು ಕಳಿಸಿದೆ , ಅವರೊಂದಿಗೆ ಚರ್ಚೆಮಾಡಿ ಕುಂಠಿತಗೊಂಡ ಯೋಜನೆಗಳು ಒಂದು ತಿಂಗಳಲ್ಲಿ ಬಗೆ ಹರಿಸುವದಾಗಿ ಮತ್ತು ಈ ಭಾಗದ ಶಾಸಕ, ಸಚಿವರ ನೇತೃತ್ವದಲ್ಲಿ ರೈತರ ನಿಯೋಗ ಮುಖ್ಯಮಂತ್ರಿ ಗಳಿಗೆ ಭೇಟಿಗೆ ಅವಕಾಶ ಕಲ್ಪಿಸಲು ಭರವಸೆ ನೀಡಿದ್ದಾರೆ, ಕಳೆದ 60 ವರ್ಷಗಳಿಂದ ನೆನೆಗುದಿಗೆ ಬಿದ್ದ ಯೋಜನೆಗಳು ರೈತರ ಹೋರಾಟದ ಫಲವಾಗಿ ನಾಲ್ಕು ದಿನದಲ್ಲಿ ಚಾಲನೆ ದೊರತಿದೆ ಎಂದರು
ಈ ಸಂದರ್ಭದಲ್ಲಿ ರೈತ ಮುಖಂಡರಾದ ಸಂಜು ಹಾವನ್ನವರ, ನಾಗರಾಜ ಹಾದಿಮನಿ, ತಹಸಿಲ್ದಾರ ಬಲರಾಮ ಕಟ್ಟಿಮನಿ ಸೇರಿದಂತೆ ಅಪಾರ ರೈತರು ಹಾಜರಿದ್ದರು.
ಕಳೆದ ನಾಲ್ಕು ದಿನದಿಂದ ರಸ್ತೆ ಬಂದಮಾಡಿ ರೈತರು ಹಮ್ಮಿಕೊಂಡ ಪ್ರತಿಭಟನೆ ಯಾವದೆ ಅಹಿತಕರ ಘಟನೆಗೆ ಅವಕಾಶ ವಿಲ್ಲದೆ ಸುಖ್ಯಾಂತ ಗೊಂಡಿದೆ.

Tags:

error: Content is protected !!