ಬೆಳಗಾವಿಯ ಅಮಾನ್ ನಗರದ ನಿವಾಸಿಯಾದ ಆಸಿಫ್ ನದಾಫ್ ಎಂಬ ಯುವಕ ತನ್ನ ವಿಭಿನ್ನ ಆಲೋಚನೆಯಿಂದಾಗಿ ಇಡೀ ನಗರದ ಗಮನ ಸೆಳೆದಿದ್ದಾನೆ. ತನ್ನ ಬೈಕ್ ತುಂಬೆಲ್ಲಾ ಸಾಲು ಸಾಲು ಜಿರಳೆಗಳ (ಕೊಕ್ರೋಚ್) ವಿಚಿತ್ರ ಸ್ಟಿಕ್ಕರ್‌ಗಳನ್ನು ಅಂಟಿಸಿರುವ ಈತ, ಅದಕ್ಕೆ ‘ಕೊಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಎಂಬ ಫನ್ನಿ ಹೆಸರನ್ನಿಟ್ಟಿದ್ದಾನೆ.

ಬೆಳಗಾವಿಯ ಅಮಾನ್ ನಗರದಲ್ಲಿ ಈಗ ವಿಚಿತ್ರ ಮತ್ತು ತಮಾಷೆಯ ‘ಕೊಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಕ್ರೇಜ್ ಯುವಕರನ್ನು ಸೆಳೆಯುತ್ತಿದ್ದು, ಸ್ಥಳೀಯ ಯುವಕ ಆಸಿಫ್ ನದಾಫ್ ಎಂಬಾತ ತನ್ನ ಬೈಕ್ ತುಂಬೆಲ್ಲಾ ಜಿರಳೆಗಳ (ಕೊಕ್ರೋಚ್) ಸ್ಟಿಕ್ಕರ್‌ಗಳನ್ನು ಅಂಟಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ. ರಾಜಕೀಯ ಪಕ್ಷಗಳ ಪ್ರಚಾರದ ನಡುವೆ ಈ ಡಿಫರೆಂಟ್ ಟ್ರೆಂಡ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ರಸ್ತೆಯಲ್ಲಿ ಈ ಬೈಕ್ ಹೋಗುತ್ತಿದ್ದರೆ ಜನರು ಕುತೂಹಲದಿಂದ ತಿರುಗಿ ನೋಡುತ್ತಿದ್ದಾರೆ. ಒಟ್ಟಿನಲ್ಲಿ ಬೆಳಗಾವಿ ಯೂತ್ಸ್ ತಮ್ಮದೇ ಆದ ಈ ವಿಭಿನ್ನ ಹಾಗೂ ಫನ್ನಿ ಸ್ಟೈಲ್‌ನಿಂದಾಗಿ ಈಗ ಸ್ಥಳೀಯವಾಗಿ ಸಖತ್ ಸೌಂಡ್ ಮಾಡುತ್ತಿದ್ದಾರೆ.

