Vijaypura

ಮಂಗಗಳ ಹಾವಳಿಗೆ ಭಯಭೀತರಾದ ಜನತೆ

Share

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ನೂರಾರು ಮಂಗಗಳು ಮೊಬೈಲ್ ಟವರ್‌ಗಳ ಮೇಲೆ ಹತ್ತಿ ಅವುಗಳನ್ನು ಅಲುಗಾಡಿಸುತ್ತಿರುವುದರಿಂದ ಸ್ಥಳೀಯರು ಭಯಭೀತರಾಗಿದ್ದಾರೆ. ಈ ಮಂಗಗಳ ಹಾವಳಿಯಿಂದಾಗಿ ಜನರು ರಸ್ತೆಯಲ್ಲಿ ಓಡಾಡಲು ಹೆದರುತ್ತಿದ್ದಾರೆ. ಟವರ್‌ಗಳು ಬಿದ್ದು ಯಾವುದೇ ಅನಾಹುತ ಸಂಭವಿಸಿದರೆ ಎಂಬ ಆತಂಕದಲ್ಲಿದ್ದಾರೆ. ಕೂಡಲೇ ಈ ಮಂಗಗಳ ಹಾವಳಿಗೆ ಕಡಿವಾಣ ಹಾಕಬೇಕೆಂದು ಪಟ್ಟಣದ ನಿವಾಸಿಗಳು ಮಂಗಳವಾರ ಮಾಧ್ಯಮಗಳ ಮೂಲಕ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

Tags:

error: Content is protected !!