Belagavi

ವೈದ್ಯಕೀಯ ಶಿಕ್ಷಣದ ಹೊಸ ದಿಗಂತ: ಬೆಳಗಾವಿಯಲ್ಲಿ ಇಂದಿನಿಂದ ‘ಅಲೈಡ್ ಹೆಲ್ತ್ ಸೈನ್ಸ್’ ಶಿಕ್ಷಣ ಮೇಳ ಆರಂಭ!

Share

• ಕೆಎಲ್‌ಇ ಸಂಸ್ಥೆಯಿಂದ ಬೃಹತ್ ಶಿಕ್ಷಣ ಮೇಳ
• ಉದ್ಯೋಗಾಧಾರಿತ ಕೋರ್ಸ್‌ಗಳ ಬಗ್ಗೆ ಮಾಹಿತಿ ಲಭ್ಯ
• ಇಂದಿನಿಂದ ಎರಡು ದಿನಗಳ ಕಾಲ ಪ್ರದರ್ಶನ
• ವಿದ್ಯಾರ್ಥಿಗಳಿಗೆ ಭವ್ಯ ಭವಿಷ್ಯದ ಸುವರ್ಣ ಅವಕಾಶ
ಬೆಳಗಾವಿಯ ಕೆಎಲ್‌ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯು ಇಂದಿನಿಂದ ವಿದ್ಯಾರ್ಥಿಗಳಿಗಾಗಿ ವಿಶೇಷ ‘ಎಜುಕೇಶನ್ ಎಕ್ಸ್‌ಪೋ-2026’ ಅನ್ನು ಆಯೋಜಿಸಿದೆ.
ಬೆಳಗಾವಿಯ ನೆಹರು ನಗರದಲ್ಲಿರುವ ಜೆಎನ್‌ಎಂಸಿ ಕ್ಯಾಂಪಸ್‌ನ ಕೆಎಲ್‌ಇ ಶತಮಾನೋತ್ಸವ ಸಭಾಂಗಣದಲ್ಲಿ ಇಂದಿನಿಂದ (ಮೇ 4) ಎರಡು ದಿನಗಳ ಕಾಲ ‘ಅಲೈಡ್ ಹೆಲ್ತ್ ಸೈನ್ಸಸ್ ಎಜುಕೇಶನ್ ಎಕ್ಸ್‌ಪೋ-2026’ ಚಾಲನೆ ಪಡೆದುಕೊಂಡಿದೆ. ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿರುವ ಈ ಮೇಳವು ಭವಿಷ್ಯದ ವೈದ್ಯಕೀಯ ಪೂರಕ ಶಿಕ್ಷಣದ ಬಗ್ಗೆ ಬೆಳಕು ಚೆಲ್ಲಲಿದೆ. ಕೇವಲ ಎಂಬಿಬಿಎಸ್ ಅಥವಾ ಇಂಜಿನಿಯರಿಂಗ್ ಮಾತ್ರವಲ್ಲದೆ, ಆರೋಗ್ಯ ಕ್ಷೇತ್ರದಲ್ಲಿ ಲಭ್ಯವಿರುವ ನೂರಾರು ಕೌಶಲ್ಯಾಧಾರಿತ ಮತ್ತು ಉದ್ಯೋಗದಾಯಕ ಕೋರ್ಸ್‌ಗಳ ಬಗ್ಗೆ ತಜ್ಞರು ಇಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ನೇರ ಮಾರ್ಗದರ್ಶನ ನೀಡಲಿದ್ದಾರೆ.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಲೈಡ್ ಹೆಲ್ತ್ ಸೈನ್ಸ್‌ ವಿಭಾಗವು ಅಪಾರ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ. ಈ ಹಿನ್ನೆಲೆಯಲ್ಲಿ ಆಯೋಜಿಸಲಾದ ಈ ಮೇಳಕ್ಕೆ ಪ್ರವೇಶ ಸಂಪೂರ್ಣ ಉಚಿತವಾಗಿದ್ದು, ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ಅನುಗುಣವಾದ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದೆ.

ಕೆ.ಎಲ್.ಇ ಸ್ಕೂಲ್ ಆಫ್ ಅಲೈಡ್ ಹೆಲ್ತ್ ಸೈನ್ಸ್’ನ ನಿರ್ದೇಶಕರಾದ ಊರ್ಮಿಳಾ ಕಾಗಲ್ ಅವರು ಬೆಳಗಾವಿಯಲ್ಲಿ ಎರಡು ದಿನಗಳ ಎಜ್ಯುಕೇಷನ್ ಏಕ್ಸಪೋ ಆಯೋಜಿಸಲಾಗಿದೆ. ನೀಟ್ ಪರೀಕ್ಷೆಯ ಪರ್ಯಾಯವಾಗಿ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯು ಬಳಿಕ ಬೇರೆಯ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇಲ್ಲಿ ವಿವಿಧ ಕೌಶಲ್ಯಗಳನ್ನು ಕಲಿಸಿಕೊಡಲಾಗುವುದು ಇದು ಮೆಡಿಕಲ್ ಕ್ಷೇತ್ರದಲ್ಲಿ ಸೇವೆಯಲ್ಲಿ ಸಲ್ಲಿಸಲು ಪೂರಕವಾಗಿದೆ.

ಇಂದು ಮತ್ತೇ ನಾಳೆ ಬೆಳಿಗ್ಗೆ 10 ರಿಂದ 6 ರ ವರೆಗೆ ಸ್ಟಾಲ್ಸ್’ಗಳನ್ನು ನಿರ್ಮಿಸಿ ಮಾಹಿತಿಯನ್ನು ನೀಡಲಾಗಿದೆ. ಮೇ. 10 ರಂದು ಅರ್ಜಿಯನ್ನು ಸಲ್ಲಿಸಿ 1500 ರೂಪಾಯಿಯ ಶುಲ್ಕವನ್ನು ಭರಿಸಿ ಪ್ರವೇಶ ಪರೀಕ್ಷೆಯನ್ನು ಎದುರಿಸಬೇಕು ಎಂದರು. ಮೇ 5 ಸಂಜೆ 4 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಆಧುನಿಕ ತಂತ್ರಜ್ಞಾನ ಹಾಗೂ ವೈದ್ಯಕೀಯ ಸೇವೆಗಳ ಸಂಗಮವಾಗಿರುವ ಈ ಶಿಕ್ಷಣ ಮೇಳವು ನಾಳೆ ಕೂಡ ಮುಂದುವರಿಯಲಿದ್ದು, ಜಿಲ್ಲೆಯ ಹಾಗೂ ಸುತ್ತಮುತ್ತಲಿನ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೆಎಲ್‌ಇ ಸಂಸ್ಥೆಯು ತಿಳಿಸಿದೆ.

Tags:

error: Content is protected !!