Vijaypura

ಪೂಜೆ ಮಾಡಿ ಇಟ್ಟ ಜೆಸಿಬಿ ರಾತೋ ರಾತ್ರೀ ಕದ್ದ ಖದೀಮರು,; ಕೊನಗೂ ಆರೋಪಿಗಳು ಪೊಲೀಸರ ಅತಿಥಿ.‌..

Share

ಸಿಂದಗಿಯ ಗೋಲಗೇರಿಯಲ್ಲಿ ನಡೆದಿದ್ದ ಸಿನಿಮೀಯ ಕಳ್ಳತನ

ಜಿಪಿಎಸ್ ಕಿಟ್ ಕಟ್ ಮಾಡಿ ಎಸ್ಕೇಪ್ ಆಗಿದ್ದ ಖದೀಮರು

100 ರೂಪಾಯಿಯ ಫೋನ್ ಪೇ ವ್ಯವಹಾರವೇ ಕಳ್ಳರಿಗೆ ಮುಳುವಾಯ್ತು!

35 ಲಕ್ಷ ಮೌಲ್ಯದ ಜೆಸಿಬಿ ಸಮೇತ ಇಬ್ಬರು ಆರೋಪಿಗಳ ಬಂಧನ

ಆ್ಯಂಕರ್ : ಆ ವ್ಯಕ್ತಿ ಆಗಷ್ಟೇ ಹೊಸದಾದ ಜೆಸಿಬಿ ವಾಹನವೊಂದನ್ನು ತಂದಿದ್ದ, ಆ ಜೆಸಿಬಿ ಗೆ ಪೂಜೆ ಮಾಡಿ ಮನೆ ಮುಂದೆ ನಿಲ್ಲಿಸಿದ್ದ, ಆದರೆ ಬೆಳಗಾಗುವರಷ್ಟರಲ್ಲಿ ಆ ಹೋಸ ಜೆಸಿಬಿಯೇ ಮಂಗ ಮಾಯವಾಗಿತ್ತು, ಆತಂಕ ಗೊಂಡ ಜೆಸಿಬಿ ಮಾಲೀಕ ಮನೆ ಮುಂಭಾಗದ ಸಿಸಿ ಕ್ಯಾಮೆರಾ ಚೆಕ್ ಮಾಡಿದ್ರೆ ರಾತೋ ರಾತ್ರೀ ಅದನ್ನು ಖದೀಮರ ಕದ್ದು ಕೊಂಡು ಎಸ್ಕೇಪ್ ಆಗಿದ್ದರು. ಹಾಗಾದರೆ ಈ ಘಟನೆ ನಡೆದಿದ್ದಾದರೂ ಎಲ್ಲಿ ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್…

ಅವರು ಅಂದಷ್ಟೇ ಹೊಸ ಜೆಸಿಬಿ ಯನ್ನು ಖರೀದಿ ಮಾಡಿಕೊಂಡು ಬಂದಿದ್ದರು. ಜೆಸಿಬಿ ಪೂಜೆ ಮಾಡಿ ಮನೆಯ ಮುಂದೆ ನಿಲ್ಲಿಸಿ ಮಲಗಿದ್ದ ಅವರು ಬೆಳಗಿದ್ದು ನೋಡುವಷ್ಟರಲ್ಲಿ ಜೆಸಿಬಿ ಮಂಗಮಾಯವಾಗಿತ್ತು. ಗಾಬರಿ ಗೊಂಡ ಮಾಲೀಕ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದರೆ ರಾತೋ ರಾತ್ರೀ ಇಬ್ಬರು ಖದೀಮರು ಜೆಸಿಬಿ ಕದ್ದು ಪರಾರಿಯಾಗಿದ್ದರು. ಹೌದು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ‌ ಕಲಕೇರಿ ಪೋಲಿಸ್ ಠಾಣಾ ವ್ಯಾಪ್ತಿಯ ಗೋಲಗೇರಿ ಗ್ರಾಮದಲ್ಲಿ ಸೈಪನ್ ಭಾಗವಾನ್ ಎಂಬಾತರ ಜೆಸಿಬಿ ರಾತೋ ರಾತ್ರೀ ಕಳ್ಳತನ ಮಾಡಲಾಗಿತ್ತು. 35 ಲಕ್ಷ ಖರ್ಚು ಮಾಡಿ ಹೊಸ ಜೆಸಿಬಿ ತಂದ ಮಾಲೀಕ ದಂಗಾಗಿದ್ದ ಸಿಸಿ ಕ್ಯಾಮೆರಾ ವಿಡಿಯೋ ಪರಿಶೀಲನೆ ನಡೆಸಿ ಕಲಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಇನ್ನೂ ಈ ಖದೀಮರು ಎಷ್ಟರ ಮಟ್ಟಿಗೆ ತಮ್ಮ ಚಾಲಾಕಿ ತನ ಪ್ರದರ್ಶನ ಮಾಡಿದ್ದರು ಎಂದರೆ ಜೆಸಿಬಿ ಅಲ್ಲಿ ಅಳವಡಿಕೆ ಮಾಡಿದ್ದ ಜಿಪಿಎಸ್ ಕಿಟ್ ಅನ್ನೇ ಕಟ್ ಮಾಡಿ ಜೆಸಿಬಿಯೊಂದಿಗೆ ಪರಾರಿಯಾಗಿದ್ದರು…

ಹೋಸ ಜೆಸಿಬಿ ಕಳ್ಳತನದ ಪತ್ತೆಗೆ ಮುಂದಾದ ಪೊಲೀಸರಿಗೆ ಕಳ್ಳತನದ ಕುರಿತು ಆರಂಭದಲ್ಲಿ ಸರಿಯಾದ ಮಾಹಿತಿ ಸಿಗಲಿಲ್ಲ. ಒಂದೇ ಬೈಕ್ ನಲ್ಲಿ ಬಂದ ಇಬ್ಬರು ಖದೀಮರು ಓರ್ವ ಜೆಸಿಬಿ ತಗೊಂಡರೆ ಇನ್ನೊರ್ವ ಬೈಕ್ ತಗೊಂಡು ಮುಂದೆ ಮುಂದೆ ಹೊರಟಿರುವದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇನ್ನೂ ದೇವರ ಹಿಪ್ಪರಗಿ ಪಟ್ಟಣದ ಪೆಟ್ರೋಲ್ ಬಂಕ್ ಒಂದರಲ್ಲಿ ಅವರ ಬೈಕ್ ಗೆ ಪೋನ್ ಪೇ ಮೂಲಕ 100 ರೂಪಾಯಿಯ ಪೆಟ್ರೋಲ್ ಹಾಕಿಸಿದ್ದಾರೆ. ಇದನ್ನೂ ಆಧರಸಿ ಪೊಲೀಸರು ಕೊನೆಗೂ ಇಬ್ಬರು ಆರೋಪಿಗಳಿಗೆ ಹೆಡೆ ಮುರಿಕಟ್ಟಿದ್ದಾರೆ. ಶಿವಾಜಿ ರೈತಮುರೆ ಹಾಗೂ ಹೂವಣ್ಣ ಬಂಡಾಗಾರ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ‌. ಇಬ್ಬರು ಆರೊಪಿಗಳು ತಾವು ಕದ್ದ ಜೆಸಿಬಿ ತಾವೇ ಖರೀದಿ ಮಾಡಿಕೊಂಡು ಬಂದಿವಿ ಎಂಬಂತೆ ಮಹಾರಾಷ್ಟ್ರದ ಹುಲಜಂತಿ ಗ್ರಾಮದಲ್ಲಿ ಬಿಲ್ಡ್ ಅಪ್ ಕೊಟ್ಟಿದ್ದರು. ಬಳಿಕ ಸ್ವಲ್ಪೇ ದಿನದಲ್ಲಿ ಕಡಿಮೆ ದರಕ್ಕೆ ಜೆಸಿಬಿ ಮಾರಾಟ ಮಾಡಲು ಸಹಿತ ಮುಂದಾಗಿದ್ದರು, ಇನ್ನೂ ಇವರ ಪೆಟ್ರೋಲ್ ಬಂಕ್ ನಲ್ಲಿ ಪೊನ್ ಪೇ ಮಾಡಿದ ನಂಬರ್ ಆಧರಿಸಿ ಇವರ ಹಿಂಬಾಲು ಬಿದ್ದ ಪೊಲೀಸರು ಕೊನೆಗೂ ಇವರು ಜೆಸಿಬಿ ಕದ್ದಿದ್ದು ಹೊರ ಹಾಕಿ ಇಬ್ಬರಿಗೂ ಜೈಲಿಗಟ್ಟಿದ್ದಾರೆ.‌‌‌..

ಜೆಸಿಬಿ ಕದ್ದು ಪರಾರಿಯಾಗಿದ್ದ ಆರೋಪಿಗಳಿಗೆ ಕೊನೆಗೂ ಪೊಲೀಸರು ಹೆಡೆ ಮುರಿಕಟ್ಟಿದ್ದು ಇವರು ಕದ್ದಿದ್ದು ಇದೊಂದೇ ಅಥವಾ ಇನ್ಯಾವ ಬೇರೆ ಪ್ರಕರಣ ಇವರ ಮೇಲೆ ಇದೆಯಾ ಎಂಬುದರ ಕುರಿತು ಕೂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸದ್ಯ ಜೆಸಿಬಿ ಕಳೆದ ಕೊಂಡ ಮಾಲೀಕನಿಗೆ ಮರಳಿ ಜೆಸಿಬಿ ಸಿಕ್ಕಿದ್ದಕ್ಕೆ ನಿಟ್ಟುಸಿರು ಬಿಟ್ಟಿದ್ದು, ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ…

 

Tags:

error: Content is protected !!