BELAGAVI

ಬೆಳಗಾವಿಯಲ್ಲಿ ಕಲಾ ಸಂಭ್ರಮ: ‘ದಿ ಪೇಂಟೆಡ್ ಸೋಲ್ಸ್’ ಪ್ರದರ್ಶನಕ್ಕೆ ಕಲಾರಸಿಕರು ಫಿದಾ!

Share

ಬೆಳಗಾವಿ ನಗರದ ಟಿಳಕವಾಡಿಯ ವರೇರಕರ್ ನಾಟ್ಯ ಸಂಘದ ಆವರಣದಲ್ಲಿರುವ ಕಲಾಮಹರ್ಷಿ ಕೆ.ಬಿ. ಕುಲಕರ್ಣಿ ಆರ್ಟ್ ಗ್ಯಾಲರಿಯಲ್ಲಿ ವಿಶ್ವ ಕಲಾ ದಿನಾಚರಣೆಯ ಅಂಗವಾಗಿ ‘ದಿ ಪೇಂಟೆಡ್ ಸೋಲ್ಸ್’ ಎಂಬ ಮೂರು ದಿನಗಳ ಕಲಾ ಪ್ರದರ್ಶನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಹಾಗೂ ಕೆ.ಎಲ್.ಇ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಸಲಹೆಗಾರರಾದ ಡಾ. ಮಲ್ಲಿಕಾರ್ಜುನ ಜಾಲಿ ಅವರು ಜಂಟಿಯಾಗಿ ಉದ್ಘಾಟಿಸಿದ್ದರು. ವರ್ಣಕಲಾ ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ನಾಗೇಶ್ ಸಿ. ಚಿಮರೋಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಖ್ಯಾತ ಬರಹಗಾರ ಮಧುಕರ ಗುಂಡೆನಟ್ಟಿ, ಹಿರಿಯ ಕಲಾವಿದರಾದ ದಿಲೀಪ್‌ಕುಮಾರ್ ಕಾಳೆ ಹಾಗೂ ದರ್ಶನ್ ಚೌಧರಿ ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರದರ್ಶನದ ಮೊದಲ ದಿನ ದಾದಾ ಚಿತ್ರದುರ್ಗ ಅವರಿಂದ ಆಕ್ರಿಲಿಕ್ ಪೇಂಟಿಂಗ್ ಪ್ರಾತ್ಯಕ್ಷಿಕೆ ಹಾಗೂ ವಿಶೇಷ ಗೌರವ ಪ್ರದಾನ ಮಾಡಲಾಗಿದ್ದರೆ, ಎರಡನೇ ದಿನ ದರ್ಶನ್ ಚೌಧರಿ ಅವರು ಸಾಫ್ಟ್ ಪೇಸ್ಟಲ್ ಕಲೆಯ ಜಾದೂ ಪ್ರದರ್ಶಿಸಿದರು. ಈ ವೇಳೆ ಮಾತನಾಡಿದ

ಕಲಾವಿದರಾದ ಭಾಸ್ಕರ್ ಪಾಟೀಲ್ ಅವರು ಮಾಹಿತಿಯನ್ನು ನೀಡುತ್ತ ಮೂರು ದಿನದ ಈ ಕಾರ್ಯಕ್ರಮದಲ್ಲಿ ಪೇಟಿಂಗ್ ಪ್ರದರ್ಶನ, ಆರ್ಟ್ ಕ್ಯಾಂಪ್ ಮತ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ. ವರ್ಣಕಲಾಶ್ರೀ ಪುರಸ್ಕಾರವನ್ನು ಪಡೆದ ಕರ್ನಾಟಕದ ಕಲಾವಿದರು ಮತ್ತು ಪ್ರತಿಭಾವಂತ ಕಲಾವಿದರ ಕಲಾವಿದರ ಕಲಾಕೃತಿಗಳನ್ನು ಇಲ್ಲಿ ಕಾಣಬಹುದಾಗಿದೆ. ಇನ್ನು ಚಿತ್ರದುರ್ಗದ ದಾದಾ ಚಿತ್ರದುರ್ಗ, ದರ್ಶನ್ ಚೌಧರಿ ಎಂಬುವವರ ಪೇಟಿಂಗ್’ಗಳ ಪ್ರದರ್ಶನ ನಡೆದಿದೆ. ಸುಮಾರು 50 ವಿವಿಧ ಬಗೆಯ ಕಲಾಕೃತಿಗಳನ್ನು ಇಲ್ಲಿರಿಸಲಾಗಿದೆ.

ಹಲಶಿ ಮಂದಿರದಲ್ಲಿನ ಮಹಿಳೆಯೋರ್ವಳ ಚಿತ್ರ ಬಿಡಿಸಿದ ವಾಣಿ ನಂದಗಡಕರ ಅವರು ಪ್ರದರ್ಶನದಲ್ಲಿ ಲ್ಯಾಂಡ್ ಸ್ಕೇಪ್, ಪೋಟ್ರೆಟ್, ಅಬಸ್ಟ್ರಾಕ್ಟ್, ಅರ್ಕಾಲಿಕ್, ವಾಟರ್ ಕಲರ್ ಇನ್ನುಳಿದ ಬಗೆಯ ಕಲಾಕೃತಿಗಳನ್ನು ಪ್ರದರ್ಶನದಲ್ಲಿ ಇರಿಸಲಾಗಿದೆ. ಇಂದು ಆರ್ಟ್ ಕ್ಯಾಂಪ್’ನ್ನು ಆಯೋಜಿಸಲಾಗಿದೆ. ಉದಯೋನ್ಮೋಖ ಪ್ರತಿಭೆಗಳಿಗೆ ಇಲ್ಲಿ ವೇದಿಕೆಯನ್ನು ಕಲ್ಪಿಸಲಾಗುತ್ತಿದೆ ಎಂದರು.

ಕಾರವಾರದಿಂದ ಆಗಮಿಸಿದ ಕಲಾವಿದ ಸಂಜು ಅವರು ಬೆಳಗಾವಿಯಲ್ಲಿ ಆಯೋಜಿಸಿರುವ ವರ್ಣಕಲಾ ಸಂಘದ ಕಾರ್ಯವನ್ನು ಶ್ಲಾಘಿಸಿದರು. ಪ್ರತಿ ವರ್ಷ ವಿಶ್ವ ಮಟ್ಟದ ಕಲಾದಿನದ ವೇಳೆ ಕಲಾವಿದರನ್ನು ಒಗ್ಗೂಡಿಸಿ ಮಕ್ಕಳಿಗೆ ಪ್ರೋತ್ಸಾಹವನ್ನು ನೀಡುವ ಉತ್ತಮ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು.

ಅಧ್ಯಕ್ಷರಾದ ನಾಗೇಶ್ ಚಿಮರೋಳ, ದೀಪಾ ವಾಲಿ, ವಾಣಿ ಹಿರೇಮಠ, ನಂದಗಡ, ರವಿ, ಓಂಕಾರ್ ಎಲ್ಲರೂ ಪ್ರದರ್ಶನದ ಯಶಸ್ವಿಗೆ ಶ್ರಮಿಸುತ್ತಿದ್ದಾರೆ.

Tags:

error: Content is protected !!