ಬೆಳಗಾವಿಯ ಬಂಟರ ಯಾನೆ ನಾಡವರ ಸಂಘದ 41ನೇ ವಾರ್ಷಿಕೋತ್ಸವದ ಅಂಗವಾಗಿ ನಗರದಲ್ಲಿ ಕ್ರೀಡಾ ಹಬ್ಬ ಆರಂಭವಾಗಿದೆ. ಯೂನಿಯನ್ ಜಿಮ್’ಖಾನಾ ಮೈದಾನದಲ್ಲಿ ಹಮ್ಮಿಕೊಳ್ಳಲಾದ ‘ಬಂಟರ ಕ್ರೀಡೋತ್ಸವ’ಕ್ಕೆ ಅದ್ಧೂರಿ ಚಾಲನೆ ಸಿಕ್ಕಿದ್ದು, ಸಮಾಜದ ಯುವಕರು ಮತ್ತು ಹಿರಿಯರು ಮೈದಾನದಲ್ಲಿ ತಮ್ಮ ಕ್ರೀಡಾ ಕೌಶಲ್ಯ ಪ್ರದರ್ಶಿಸುತ್ತಿದ್ದಾರೆ.


ಬೆಳಗಾವಿಯ ಯೂನಿಯನ್ ಜಿಮ್’ಖಾನಾ ಮೈದಾನದಲ್ಲಿ ಬೆಳಗಾವಿಯ ಬಂಟರ ಯಾನೆ ನಾಡವರ ಸಂಘದ 41ನೇ ವಾರ್ಷಿಕೋತ್ಸವದ ಹಿನ್ನೆಲೆ ಕ್ರೀಡಾ ಕೂಟ ಬಂಟರ ಕ್ರೀಡೋತ್ಸವವನ್ನು ಆಯೋಜಿಸಲಾಗಿದ್ದು,ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಮತ್ತು ವಿಜಯ್ ಕದಮ್ ಅವರು ಕ್ರೀಡೋತ್ಸವಕ್ಕೆ ಚಾಲನೆಯನ್ನು ನೀಡಿದರು.

ವಿಠ್ಠಲ ಹೆಗಡೆ ಅವರ ನೇತೃತ್ವದಲ್ಲಿ ಈ ಕ್ರೀಡೋತ್ಸವ ನಡೆಯುತ್ತಿದೆ. ಬೆಳಗಾವಿಯ ಬಂಟರ ಯಾನೆ ನಾಡವರ ಸಂಘದ 41ನೇ ವಾರ್ಷಿಕೋತ್ಸವದ ಹಿನ್ನೆಲೆ ಕ್ರೀಡಾ ಕೂಟ ಬಂಟರ ಕ್ರೀಡೋತ್ಸವವನ್ನು ಆಯೋಜಿಸಲಾಗಿದ್ದು, ಸಮಾಜದ ಎಲ್ಲ ಮಹಿಳಾ ಹಾಗೂ ಪುರುಷ ಸದಸ್ಯರು ಇದರಲ್ಲಿ ಉತ್ಸಾಹದಿಂದ ಭಾಗಿಯಾಗಿದ್ದಾರೆ. ಸುಮಾರು 4 ತಂಡಗಳನ್ನು ರಚಿಸಾಲಗಿದೆ. ಇದರಲ್ಲಿ ಕ್ರಿಕೇಟ್, ವ್ಹಾಲಿಬಾಲ್, ಬೆಸ್’ಬಾಲ್ ಅಥ್ಲೆಟಿಕ್, ಬ್ಯಾಡ್ಮಿಂಟನ್ ಇನ್ನುಳಿದ ಕ್ರೀಡೆಗಳು ನಡೆಯುತ್ತಿವೆ ಎಂದು ವಿಜಯ್ ಶೆಟ್ಟಿ ಅವರು ತಿಳಿಸಿದರು.

ಉಪಾಧ್ಯಕ್ಷರಾದ ಕರುಣಾಕರ ಶೆಟ್ಟಿ, ಪ್ರಸನ್ನಾ ಶೆಟ್ಟಿ, ಶರತ್ ಶೆಟ್ಟಿ, ರವೀಂದ್ರ ಶೆಟ್ಟಿ, ಮೈರಮಡಿ ವಿಜಯ್ ಶೆಟ್ಟಿ, ಚೇತನ್ ಶೆಟ್ಟಿ, ಅಭಿಷೇಕ್ ಶೆಟ್ಟಿ, ಪ್ರಣಯ್ ಶೆಟ್ಟಿ ಸೇರಿದಂತೆ ಇನ್ನುಳಿದವರು ಸ್ಪರ್ಧೆಯ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.
