ನಾರಿ ಶಕ್ತಿ ವಂದನಾ ಅಧಿನಿಯಮವನ್ನು ಜಾರಿಯಾಗದಂತೆ ತಡೆದು ಕಾಂಗ್ರೇಸ್ ಮತ್ತು ಮಿತ್ರ ಪಕ್ಷಗಳ ಮಹಿಳಾ ವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ ಎಂದು ಆರೋಪಿಸಿ ಇಂದು ಬೆಳಗಾವಿಯಲ್ಲಿ ನಾರಿ ಶಕ್ತಿ ಫೋರಂನ ವತಿಯಿಂದ ಪ್ರತಿಭಟನೆಯನ್ನು ನಡೆಸಲಾಯಿತು.

ಇಂದು ಬೆಳಗಾವಿಯಲ್ಲಿ ನಾರಿ ಶಕ್ತಿ ಫೋರಂನ ವತಿಯಿಂದ ನಾರಿ ಶಕ್ತಿ ವಂದನಾ ಅಧಿನಿಯಮವನ್ನು ಜಾರಿಯಾಗದಂತೆ ತಡೆದು ಕಾಂಗ್ರೇಸ್ ಮತ್ತು ಮಿತ್ರ ಪಕ್ಷಗಳ ಮಹಿಳಾ ವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ ಎಂದು ಆರೋಪಿಸಿ ಪ್ರತಿಭಟನಾ ರ್ಯಾಲಿಯನ್ನು ನಡೆಸಲಾಯಿತು. ನಗರದ ರಾಣಿ ಚೆನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಪಿಎಂ ಮೋದಿ ಸೇರಿದಂತೆ ಎನ್.ಡಿ.ಎ ಸರ್ಕಾರವು ಮಹಿಳೆಯನ್ನು ಕೆಳಮಟ್ಟದಿಂದ ಮೇಲಕ್ಕೆತ್ತಿ, ಮಹಿಳೆಗೆ ರಾಜಕೀಯ ಬಲವನ್ನು ತುಂಬುವ ಮಹದಾಸೆಯನ್ನು ಹೊಂದಿದ್ದರು. ಆದರೇ, ಅದಕ್ಕೆ ಇಂದು ಸೋಲಾಗಿದ್ದು, ಹೋರಾಟದ ಮೂಲಕ ಪಡೆಯುವ ಪರಿಸ್ಥಿತಿ ಬಂದಿದೆ. ಸಂವಿಧಾನದಲ್ಲಿ ಲಿಂಗ ತಾರತಮ್ಯ ಮಾಡದಂತೆ ಹೇಳಲಾಗಿದೆ. 7 ದಶಕಗಳು ದಾಟಿದರೂ ಮಹಿಳೆಯರಿಗೆ ರಾಜಕೀಯ ಅಸ್ತಿತ್ವ ದೊರೆತಿಲ್ಲ ಎಂದರು.
ಇನ್ನೋರ್ವ ಪ್ರತಿಭಟನಾಕಾರರು ಎಲ್ಲಿ ಹೆಣ್ಣು ಇರುತ್ತಾಳೋ ಅಲ್ಲಿ ಲಕ್ಷ್ಮೀ ವಾಸಿಸುತ್ತಾಳೆ. ನಾರಿಗೆ ನಮ್ಮ ದೇಶದಲ್ಲಿ ತನ್ನದೇಯಾದ ಮಹತ್ವವಿದೆ. ಆದರೇ, ಈ ದೇಶದಲ್ಲಿ ಶೇ. 33 ರಷ್ಟು ಸ್ಥಾನ ಸಿಗುತ್ತದೆ ಎಂದಾಗ ಮಹಿಳಾ ವರ್ಗಕ್ಕೆ ತುಂಬ ಖುಷಿಯಾಗಿತ್ತು. ಆದರೇ ಈಗ ನಿರಾಸೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಡಾ. ಸೋನಾಲಿ ಸರ್ನೋಬಟ್, ಮಹಾನಗರ ಅಧ್ಯಕ್ಷೆ ಗೀತಾ ಸುತಾರ್, ಶಿಲ್ಪಾ ಕೆಕ್ರೆ, ಡಾ. ನಯನಾ ಭಸ್ಮೆ ಹಾಗೂ ಉಜ್ವಲಾ ಬಡವನ್ನಾಚೆ ಸೇರಿದಂತೆ ಅನೇಕ ಪದಾಧಿಕಾರಿಗಳು ಭಾಗಿಯಾಗಿದ್ಧರು.
