BELAGAVI

ಬೆಳಗಾವಿ: ವಿಟಿಯು ಕ್ರಿಕೆಟ್ ಪಂದ್ಯಾವಳಿಯಲ್ಲಿ ಜೈನ್ ಇಂಜಿನಿಯರಿಂಗ್ ಕಾಲೇಜ್ ಚಾಂಪಿಯನ್!

Share

ಬೆಳಗಾವಿಯ ಕೆ.ಎಲ್.ಎಸ್ ಗೋಗ್ಟೆ ತಾಂತ್ರಿಕ ಮಹಾವಿದ್ಯಾಲಯದ ಆಶ್ರಯದಲ್ಲಿ ಕಳೆದ ಐದು ದಿನಗಳಿಂದ ನಡೆದ ವಿಟಿಯು ಬೆಳಗಾವಿ ವಿಭಾಗೀಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಇಂದು ಅದ್ಧೂರಿಯಾಗಿ ತೆರೆಕಂಡಿದೆ. ರೋಚಕ ಫೈನಲ್ ಪಂದ್ಯದಲ್ಲಿ ಜೈನ್ ಇಂಜಿನಿಯರಿಂಗ್ ಕಾಲೇಜು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಏಪ್ರಿಲ್ 21 ರಿಂದ 25 ರವರೆಗೆ ಜರುಗಿದ ಈ ಪಂದ್ಯಾವಳಿಯಲ್ಲಿ ಬೆಳಗಾವಿ ವಿಭಾಗದ ವಿವಿಧ ಕಾಲೇಜುಗಳ ತಂಡಗಳು ಜಿದ್ದಾಜಿದ್ದಿನ ಪ್ರದರ್ಶನ ನೀಡಿದವು. ಇಂದು ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಎಂ. ಎಸ್. ಪಾಟೀಲ್ ಅವರು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಜೈನ್ ಕಾಲೇಜ್ ಆಫ್ ಇಂಜಿನಿಯರಿಂಗ್ ಬೆಳಗಾವಿ ತಂಡವು ಪಂದ್ಯಾವಳಿಯ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಆತಿಥೇಯ ಕೆ.ಎಲ್.ಎಸ್ ಜಿಐಟಿ ತಂಡವು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಈ ಸಂದರ್ಭದಲ್ಲಿ ಡಾ. ಜಾರ್ಜ್ ರೋಡ್ರಿಗಸ್, ಮುರಳೀಧರ್ ಅಷ್ಟೇಕರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಜೈನ್ ಕಾಲೇಜಿನ ಅಕ್ಷಯ್ ಅವರಿಗೆ ‘ಪಂದ್ಯ ಶ್ರೇಷ್ಠ’ ಮತ್ತು ‘ಅತ್ಯುತ್ತಮ ಬೌಲರ್’ ಪ್ರಶಸ್ತಿ ಸಂದಿತು. ಜಿಐಟಿ ಕಾಲೇಜಿನ ಯಶ್ ಹವಲಾಂಚೆ ಅವರು ತಮ್ಮ ಅಮೋಘ ಆಟಕ್ಕಾಗಿ ‘ಸರಣಿ ಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು. ಆದಿತ್ಯ ಗೌರಣ್ಣ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿ ಮಿಂಚಿದರೆ, ವಿಶಾಲ್ ಅತ್ಯುತ್ತಮ ಫೀಲ್ಡರ್ ಪ್ರಶಸ್ತಿ ಪಡೆದರು. ದೈಹಿಕ ಶಿಕ್ಷಣ ನಿರ್ದೇಶಕ ಡಾ. ಜಾರ್ಜ್ ರೋಡ್ರಿಗಸ್ ಮತ್ತು ಅವರ ತಂಡದ ಸುಲಲಿತ ಸಂಘಟನೆಯು ಪಂದ್ಯಾವಳಿಯ ಯಶಸ್ಸಿಗೆ ಕಾರಣವಾಯಿತು. ಕ್ರೀಡಾಪಟುಗಳ ಕೌಶಲ್ಯ ಮತ್ತು ತಂಡದ ಕೆಲಸಕ್ಕೆ ಅತಿಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

Tags:

error: Content is protected !!