hukkeri

ಪ್ರತಿಭಾವಂತರ ಮಾರ್ಗದರ್ಶನದಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ: ಮುಕುಂದ ಮಠದ

Share

ಉತ್ತಮ ಪ್ರತಿಭಾವಂತ ಪ್ರತಿಭೆಗಳಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವದು ಅವಶ್ಯವಾಗಿದೆ ಎಂದು ಹುಕ್ಕೇರಿ ತಾಲೂಕಿನ ಯರನಾಳ ಗ್ರಾಮದ ಶ್ರೀ ಬ್ರಹ್ಮಾನಂದ ಅಜ್ಜನವರ ಪ್ರಾಥಮಿಕ ಶಾಲೆಯ ಅದ್ಯಕ್ಷ ಮುಕುಂದ ಮಠದ ಹೇಳಿದರು.
ಹುಕ್ಕೇರಿ ತಾಲೂಕಿನ ಯರನಾಳ ಗ್ರಾಮದ ಆದಿಕೇಶವ ಮತ್ತು ಬ್ರಹ್ಮಾನಂದ ಅಜ್ಜನವರ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಶಾಲಾ ರಜೆ ದಿನಗಳಲ್ಲಿ ಈ ವರ್ಷ ಇತ್ತೀಚಿಗೆ ಸ ರಿ ಗ ಮ ಪ ರನ್ನರ ಅಪ್ ಅಮೋಘ ದೇಶಪಾಂಡೆ ಯವರಿಂದ ಮಕ್ಕಳಿಗೆ ಸಂಗೀತ ಸುಧೆ ಕಾರ್ಯಕ್ರಮ ಆಯೋಜಿಸಿ ಕೌಶಲ್ಯ ಪರಿಕ್ಷೆ ಜರುಗಿಸಿದರು.

ನಂತರ ನಡೆದ ಸಮಾರಂಭ ದಲ್ಲಿ ಯರನಾಳ ಕಾಳಿಕಾ ಮಠದ ಬ್ರಹ್ಮಾನಂದ ಅಜ್ಜನವರು ಅಮೋಘ ದೇಶಪಾಂಡೆಗೆ ಸತ್ಕರಿಸಿ ಅಭಿನಂದಿಸಿದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಅಮೋಘ ದೇಶಪಾಂಡೆ ಬ್ರಹ್ಮಾನಂದ ಅಜ್ಜನವರ ಆಶಿರ್ವಾದವೆ ನನಗೆ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು

ಮಾದ್ಯಮಗಳೊಂದಿಗೆ ಮಾತನಾಡಿದ ಮುಕುಂದ ಮಠದ ನಮ್ಮ ಶಾಲೆ ವಿದ್ಯಾರ್ಥಿಗಳಿಗೆ ಬೇಸಿಗೆಯ ರಜೆಯಲ್ಲಿ ಪ್ರತಿಭಾವಂತ ಪ್ರತಿಭೆಗಳ ಕೌಶಲಗಳನ್ನು ಪರಿಚಯಿಸಿ ಅವರಂತೆ ನಡೆಯಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ವರ್ಷ ನಮ್ಮ ಹುಕ್ಕೇರಿ ತಾಲೂಕಿನ ಅಮೋಘ ದೇಶಪಾಂಡೆ ಯವರಿಂದ ವಿದ್ಯಾರ್ಥಿಗಳಿಗೆ ಸ್ಪೂರ್ತಿ ನಿಡಲಾಗುತ್ತಿದೆ ಎಂದರು

ಈ ಸಂದರ್ಭದಲ್ಲಿ ಸಂತೋಷ ದೇಶಪಾಂಡೆ, ಪ್ರಾಚಾರ್ಯರಾದ ಅಲ್ಬರ್ಟ, ಮರಲಿನ, ಲಡಗೆ ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Tags:

error: Content is protected !!