Agriculture

ತೀವ್ರ ಬಿಸಿಲಿನಿಂದ ಕಂಗೆಟ್ಟಿದ್ದ ನಗರವಾಸಿಗಳಿಗೆ ತಂಪಿನ ಸ್ಪರ್ಶ ನೀಡಿದ ಮಳೆರಾಯ

Share

ತೀವ್ರ ಬಿಸಿಲಿನಿಂದ ಕಂಗೆಟ್ಟಿದ್ದ ನಗರವಾಸಿಗಳಿಗೆ ಮಳೆರಾಯ ತಂಪಿನ ಸ್ಪರ್ಶ ನೀಡಿದ್ದಾನೆ. ಸೋಮವಾರ ಸಂಜೆ ವಿಜಯಪುರ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಾಳಿ ಸಹಿತ ಮಳೆ ಸುರಿದು ಜನರಿಗೆ ಸ್ವಲ್ಪ ನಿರಾಳತೆ ತಂದಿತು. ಕಳೆದ ಕೆಲವು ದಿನಗಳಿಂದ ಜಿಲ್ಲೆಯ ತಾಪಮಾನ 42 ಡಿಗ್ರಿಗೂ ಅಧಿಕವಾಗಿ ದಾಖಲಾಗಿದ್ದು, ಬಿಸಿಲಿನ ತಾಪಕ್ಕೆ ಜನರು ಬಸವಳಿ ದಿದ್ದರು. ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದ ಹಿನ್ನೆಲೆ ಜನರು ಮಳೆಯ ನಿರೀಕ್ಷೆಯಲ್ಲಿ ಇದ್ದರು. ಇದರ ನಡುವೆ ನಿನ್ನೆ ಸಂಜೆ ವೇಳೆ ಏಕಾಏಕಿ ಗಾಳಿ ಬೀಸಿಕೊಂಡು, ತುಂತುರುದಿಂದ ಮಧ್ಯಮ ಪ್ರಮಾಣದ ಮಳೆ ಸುರಿಯಿತು. ಮಳೆಯ ಪರಿಣಾಮವಾಗಿ ನಗರದ ವಾತಾವರಣ ತಂಪಾಗಿದ್ದು, ಜನರು ಸ್ವಲ್ಪ ಮಟ್ಟಿಗೆ ಹಿತ ಅನುಭವಿಸಿದರು.

ಮಳೆಯ ನಡುವೆಯೇ ದ್ವಿಚಕ್ರ ಹಾಗೂ ಇತರೆ ವಾಹನ ಸವಾರರು ತಮ್ಮ ಪ್ರಯಾಣ ಮುಂದುವರಿಸಿದ್ದು, ಕೆಲವೆಡೆ ಟ್ರಾಫಿಕ್ ನಿಧಾನಗತಿಯಲ್ಲಿಯೇ ಸಾಗಿದ ದೃಶ್ಯ ಕಂಡುಬಂದಿತು.

Tags:

error: Content is protected !!