• ಬಸವೇಶ್ವರ ಬ್ಯಾಂಕಿನಲ್ಲಿ ಶಿವಬಸವ ಜಯಂತಿ ಆಚರಣೆ
• ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗ ಭಾಗಿ
• ಭಕ್ತಿ ಭಾವದಿಂದ ಜಯಂತಿ ಆಚರಿಸಿದ ಬ್ಯಾಂಕ್
• ಗಣ್ಯರಿಂದ ಶಿವಬಸವ ಶ್ರೀಗಳಿಗೆ ಪುಷ್ಪ ನಮನ

ಆರ್ಥಿಕ ರಂಗದ ಜೊತೆಗೆ ಧಾರ್ಮಿಕ ಮತ್ತು ಸಾಮಾಜಿಕ ಕಳಕಳಿಯನ್ನೂ ಮೆರೆಯುತ್ತಿರುವ ಶ್ರೀ ಬಸವೇಶ್ವರ ಬ್ಯಾಂಕ್, ಇಂದು ಶಿವಬಸವ ಜಯಂತಿಯನ್ನು ಅತ್ಯಂತ ಸಡಗರದಿಂದ ಆಚರಿಸಿದೆ.
ನಗರದ ಶ್ರೀ ಬಸವೇಶ್ವರ ಬ್ಯಾಂಕಿನಲ್ಲಿ ಇಂದು ಬೆಳಿಗ್ಗೆ ಶಿವಬಸವ ಜಯಂತಿಯನ್ನು ಅತ್ಯಂತ ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಬ್ಯಾಂಕಿನ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರಮುಖರಾದ ರಮೇಶ ಕಳಸಣ್ಣವರ, ಬಸವರಾಜ ಉಪ್ಪಿನ, ಸರಳಾ ಹೆರೆಕರ ಹಾಗೂ ಜಗದೀಶ ಕಡಬಡಿ ಅವರು ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಿವಬಸವ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಅವರ ತತ್ವ ಆದರ್ಶಗಳನ್ನು ಸ್ಮರಿಸಲಾಯಿತು. ಬ್ಯಾಂಕಿನ ಅಧಿಕಾರಿಗಳಾದ ಜಿ. ಎಂ. ಅಂಟಿನ, ಸಿಬ್ಬಂದಿಗಳಾದ ನಿಖಿಲ, ಪೂಜಾ ಸೇರಿದಂತೆ ಬ್ಯಾಂಕಿನ ಎಲ್ಲಾ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದು ಶ್ರದ್ಧಾಭಕ್ತಿಯಿಂದ ಜಯಂತಿಯಲ್ಲಿ ಪಾಲ್ಗೊಂಡಿದ್ದರು.
