Belagavi

ಬೆಳಗಾವಿ ಶಿವಜಯಂತಿ ಮೆರವಣಿಗೆಗೆ ಕ್ಷಣಗಣನೆ; ಈ ಬಾರಿ ಚವ್ಹಾಟ್ ಗಲ್ಲಿ ಮಂಡಳದಿಂದ ಮಹತ್ವದ ನಿರ್ಣಯ…

Share

1. ಒಂದೇ ಸ್ಥಳದಲ್ಲಿ ಶಿವಪ್ರಭುವಿನ ಸಜೀವ ರೂಪಕ
2. ಸಂಯುಕ್ತ ಮಹಾರಾಷ್ಟ್ರ ಚೌಕದಲ್ಲಿ ಭವ್ಯ ಪ್ರದರ್ಶನ
3. ಸುನಿಲ್ ಜಾಧವ್ ನೇತೃತ್ವದಲ್ಲಿ ವಿಶೇಷ ಸಿದ್ಧತೆ
4. ಮಂಗಳವಾರ ಸಂಜೆ ಏಳಕ್ಕೆ ಪ್ರದರ್ಶನ ಆರಂಭ

ಬೆಳಗಾವಿಯ ಶಿವಜಯಂತಿ ಅಂದ್ರೆ ಅಲ್ಲಿ ಸಜೀವ ರೂಪಕಗಳದ್ದೇ ಕಾರುಬಾರು. ಈ ಬಾರಿ ಚವ್ಹಾಟ್ ಗಲ್ಲಿಯ ಕ್ರಾಂತಿಸಿಂಹ ನಾನಾ ಪಾಟೀಲ್ ಚೌಕ್ ಮಂಡಳವು ಶಿವಭಕ್ತರ ಮನವಿಗೆ ಓಗೊಟ್ಟು, ತನ್ನ ಐತಿಹಾಸಿಕ ಸಜೀವ ರೂಪಕವನ್ನ ಒಂದೇ ಸ್ಥಳದಲ್ಲಿ ನಿಂತು ಪ್ರದರ್ಶಿಸಲು ನಿರ್ಧರಿಸಿದೆ. ಸುನಿಲ್ ಜಾಧವ್ ಅವರ ಮುಂದಾಳತ್ವದಲ್ಲಿ ಈ ಉಪಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಬೆಳಗಾವಿಯ ಕ್ರಾಂತಿಸಿಂಹ ನಾನಾ ಪಾಟೀಲ್ ಚೌಕ್ ಚವಾಟ ಗಲ್ಲಿಯ ಶಿವಜಯಂತಿ ಉತ್ಸವ ಮಂಡಳವು ಈ ಬಾರಿ ಶಿವಭಕ್ತರಿಗಾಗಿ ವಿಶೇಷ ಸೌಲಭ್ಯವನ್ನ ಕಲ್ಪಿಸಿದೆ. ಪ್ರತಿವರ್ಷ ಮೆರವಣಿಗೆಯ ಜೊತೆ ಸಾಗುತ್ತಿದ್ದ ಛತ್ರಪತಿ ಶಿವಾಜಿ ಮಹಾರಾಜರ ವೈಭವಯುತ *’ಸಜೀವ ರೂಪಕ’*ವನ್ನು, ಈ ಬಾರಿ ಸಾರ್ವಜನಿಕರ ಒತ್ತಾಯದ ಮೇರೆಗೆ ‘ಸಂಯುಕ್ತ ಮಹಾರಾಷ್ಟ್ರ ಚೌಕ’ದಲ್ಲಿ ಒಂದೇ ಕಡೆ ಸ್ಥಗಿತಗೊಳಿಸಿ ಪ್ರದರ್ಶಿಸಲು ತೀರ್ಮಾನಿಸಲಾಗಿದೆ. ಮಂಗಳವಾರ ಸಂಜೆ 7 ಗಂಟೆಯಿಂದ ಮೆರವಣಿಗೆ ಮುಕ್ತಾಯವಾಗುವವರೆಗೂ ಈ ರೂಪಕ ಸತತವಾಗಿ ಪ್ರದರ್ಶನಗೊಳ್ಳಲಿದೆ ಎಂದು ಮಂಡಳಿಯ ಕಾರ್ಯಾಧ್ಯಕ್ಷ ಸುನಿಲ್ ಜಾಧವ್ ಹಾಗೂ ಅಧ್ಯಕ್ಷ ಅನಂತ ಬಾಮಣೆ ತಿಳಿಸಿದ್ದಾರೆ.

ಮಂಡಳಿಯ ಪ್ರಮುಖರಾದ ರೋಹನ್ ಜಾಧವ್, ಭರತ್ ಕಾಳಗೆ ಹಾಗೂ ಗಲ್ಲಿಯ ಹಿರಿಯರ ನೇತೃತ್ವದಲ್ಲಿ ಈ ಅದ್ಧೂರಿ ವ್ಯವಸ್ಥೆ ಮಾಡಲಾಗಿದ್ದು, ಶಿವಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.

Tags:

error: Content is protected !!