• ಬೆಳಗಾವಿ ಲೆನ್ಸ್’ಕಾರ್ಟ್ ಶಾಖೆಗಳಿಗೆ ಶ್ರೀರಾಮ ಸೇನೆ ಲಗ್ಗೆ
• ಬಿಂದಿ ಮತ್ತು ತಿಲಕ ಧರಿಸಲು ಆಗ್ರಹ
• ಸಂಸ್ಕೃತಿ ಪಾಲಿಸಲು ಸಿಬ್ಬಂದಿಗಳಿಗೆ ನೀಡಿದ ಧೈರ್ಯ
• ನಿಯಮ ಉಲ್ಲಂಘನೆಯಾದಲ್ಲಿ ತೀವ್ರ ಹೋರಾಟದ ಎಚ್ಚರಿಕೆ

ಬೆಳಗಾವಿಯ ಲೆನ್ಸ್’ಕಾರ್ಟ್ ಮಳಿಗೆಗಳಲ್ಲಿ ಹಿಂದೂ ಧಾರ್ಮಿಕ ಸಂಕೇತಗಳಾದ ಬಿಂದಿ, ತಿಲಕ ಮತ್ತು ಕಲಾವಾ ಧರಿಸಲು ನಿರ್ಬಂಧ ಹೇರಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆಯ ಕಾರ್ಯಕರ್ತರು ಇಂದು ವಿವಿಧ ಶಾಖೆಗಳಿಗೆ ಭೇಟಿ ನೀಡಿ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡರು.
ಬೆಳಗಾವಿಯ ಲೆನ್ಸ್’ಕಾರ್ಟ್‌ನ ವಿವಿಧ ಶಾಖೆಗಳಲ್ಲಿ ಉದ್ಯೋಗಿಗಳಿಗೆ ಬಿಂದಿ, ತಿಲಕ ಮತ್ತು ಕಲಾವಾ ಧರಿಸಲು ಅವಕಾಶ ನೀಡುತ್ತಿಲ್ಲ ಎಂಬ ದೂರಿನ ಮೇರೆಗೆ ಶ್ರೀರಾಮ ಸೇನೆಯ ಪದಾಧಿಕಾರಿಗಳು ಇಂದು ದಿಢೀರ್ ಭೇಟಿ ನೀಡಿದರು. “ಹಳೆಯ ನಿಯಮಗಳ ನೆಪವೊಡ್ಡಿ ಹಿಂದೂ ಸಂಪ್ರದಾಯಕ್ಕೆ ಅಡ್ಡಿಪಡಿಸುವುದು ಸರಿಯಲ್ಲ; ಹಿಜಾಬ್‌ಗೆ ಇರುವ ಅನುಮತಿ ನಮ್ಮ ಸಂಸ್ಕೃತಿಗೆ ಏಕೆ ಇಲ್ಲ?” ಎಂದು ಸಂಘಟನೆಯವರು ಮ್ಯಾನೇಜ್‌ಮೆಂಟ್ ಅನ್ನು ಪ್ರಶ್ನಿಸಿದರು. ಅಲ್ಲಿನ ಸಿಬ್ಬಂದಿಗಳಿಗೆ ಧೈರ್ಯ ತುಂಬಿದ ಕಾರ್ಯಕರ್ತರು, “ಯಾವುದೇ ಭಯವಿಲ್ಲದೆ ನಮ್ಮ ಸಂಸ್ಕೃತಿಯನ್ನು ಪ್ರತಿನಿಧಿಸುವ ತಿಲಕ ಮತ್ತು ಬಿಂದಿ ಧರಿಸಿ, ಏನಾದರೂ ತೊಂದರೆಯಾದರೆ ನಾವು ನಿಮ್ಮ ಬೆನ್ನಿಗಿದ್ದೇವೆ” ಎಂದು ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿಕುಮಾರ್ ಕೋಕಿತಕರ ಭರವಸೆ ನೀಡಿದರು. ಅಲ್ಲದೆ, ಇಂತಹ ಘಟನೆಗಳು ಮರುಕಳಿಸಿದರೆ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
\
