• ಬೆಳಗಾವಿಯಲ್ಲಿ ವಿಶ್ವ ಯಕೃತ್ತು ದಿನಾಚರಣೆ
• ಅರಿಹಂತ ಆಸ್ಪತ್ರೆಯಿಂದ ಬೃಹತ್ ವಾಕೋತ್ಥಾನ್
• ಮದ್ಯಪಾನ ಬಿಡಿ, ಯಕೃತ್ತನ್ನು ಕಾಪಾಡಿ
• ಚೆನ್ನಮ್ಮ ವೃತ್ತದಲ್ಲಿ ಮೊಳಗಿದ ಆರೋಗ್ಯ ಸಂದೇಶ

ವಿಶ್ವ ಯಕೃತ್ತು ದಿನಾಚರಣೆಯ ಹಿನ್ನೆಲೆ ಇಂದು ಬೆಳಗಾವಿಯಲ್ಲಿ ಅರಿಹಂತ ಆಸ್ಪತ್ರೆಯ ವತಿಯಿಂದ ವಾಕೋತ್ಥಾನ ನಡೆಸಿ ಜಾಗೃತಿಯನ್ನು ಮೂಡಿಸಲಾಯಿತು.
ವಿಶ್ವ ಯಕೃತ್ತು ದಿನಾಚರಣೆಯ ಹಿನ್ನೆಲೆ ಇಂದು ಬೆಳಗಾವಿಯಲ್ಲಿ ಅರಿಹಂತ ಆಸ್ಪತ್ರೆಯ ವತಿಯಿಂದ ವಾಕೋತ್ಥಾನ ನಡೆಸಿ ಜಾಗೃತಿಯನ್ನು ಮೂಡಿಸಲಾಯಿತು. ನಗರದ ರಾಣಿ ಚೆನ್ನಮ್ಮ ವೃತ್ತದಿಂದ ಪ್ರಾರಂಭವಾದ ಜಾಗೃತಿ ರ್ಯಾಲಿಯೂ ನಗರದ ವಿವಿಧ ಮಾರ್ಗಗಳಲ್ಲಿ ಸಂಚರಿಸಿತು.
ಇಂದು ವಿಶ್ವ ಯಕೃತ್ತು ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಲ್ಹೀವರ್ ಸರಿಯಾಗಿರದಿದ್ದರೇ, ಜೀವನದ ಲ್ಹೀವರೇಜ್ ಸರಿಯಾಗಿರಲ್ಲ. ಯಕೃತ್ತು ದೇಹದ ಕಾರ್ಯಾಗಾರವಾಗಿದೆ. ಶರೀರಕ್ಕೆ ಬೇಡವಾದ ಅಂಶಗಳನ್ನು ದೇಹದ ಹೊರಗಡೆ ಕಳುಹಿಸುವ ಕೆಲಸವನ್ನು ಯಕೃತ್ತು ಮಾಡುತ್ತದೆ. ಈ ಹಿನ್ನೆಲೆ ಮದ್ಯಪಾನದಂತಹ ಚಟಗಳನ್ನು ಬಿಟ್ಟು, ಉತ್ತಮ ಆಹಾರ ಪದ್ಧತಿ, ವ್ಯಾಯಾಮದೊಂದಿಗೆ ಯಕೃತ್ತನ್ನು ಆರೋಗ್ಯಕರವಾಗಿಟ್ಟುಕೊಳ್ಳಬೇಕು ಎಂದು ಡಾ. ಎಂ.ಡಿ.ದಿಕ್ಷೀತ್ ಅವರು ಕರೆ ನೀಡಿದರು.
ಇನ್ನು ಡಾ. ವರದರಾಜ್ ಗೋಕಾಕ್ ಅವರು, ಪ್ರತಿ ವರ್ಷವೂ ಏಪ್ರೀಲ್ 19 ರಂದು ವಿಶ್ವ ಯಕೃತ್ತು ದಿನಾಚರಣೆಯನ್ನು ಆಚರಿಸಿ, ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಮಾಡಲಾಗುತ್ತದೆ. ಯಕೃತ್ತು ಮಾನವೀಯ ಶರೀರಕ್ಕೆ ಅತ್ಯಂತ ಬೇಕಾದ ಅಂಗಾಂಗವಾಗಿದ್ದು, ಇದರ ಕಾರ್ಯ ಮಹತ್ತರವಾಗಿದೆ. ಆರೋಗ್ಯಕರ ಯಕೃತ್ತೇ ಆರೋಗ್ಯಕರ ಜೀವನಕ್ಕೆ ನಾಂದಿ ಎಂದರು.
ಈ ವಾಕೋತ್ಥಾನನಲ್ಲಿ ಡಾ. ಪ್ರಭು ಹಳಕಟ್ಟಿ, ಡಾ. ಗಣೇಶ್ ಕೊಪ್ಪದ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.
