Belagavi

ಬೆಳಗಾವಿಯಲ್ಲಿ ಸಮಾನತೆಗಾಗಿ ಮೊಳಗಿತು ಬಸವ ನಾಮಘೋಷ ಕುಂದಾನಗರಿಯಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿಯ ನಿಮಿತ್ಯ ಬೃಹತ್ ರ್ಯಾಲಿ

Share

• ಬೆಳಗಾವಿಯಲ್ಲಿ ಬಸವ ಜಯಂತಿಯ ಅದ್ಧೂರಿ ಸಂಭ್ರಮ
• ಸಮಾನತೆಗಾಗಿ ಮೊಳಗಿದ ಬೃಹತ್ ಬೈಕ್ ರ್ಯಾಲಿ
• ವಚನಗಳ ಸಾರ ಜೀವನದಲ್ಲಿ ಅಳವಡಿಸಲು ಕರೆ
• ಜಾತಿ ಭೇದ ಮರೆತು ಹರಿದುಬಂದ ಜನಸಾಗರ

ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿಯ ನಿಮಿತ್ಯ ಬೆಳಗಾವಿಯಲ್ಲಿ ಇಂದು ಬೃಹತ್ ಸಮಾನತೆಗಾಗಿ ಬೃಹತ್ ರ್ಯಾಲಿಯನ್ನು ನಡೆಸಲಾಯಿತು.

ಬೆಳಗಾವಿಯ ಜಗಜ್ಯೋತಿ ಬಸವೇಶ್ವರ ವೃತ್ತದ ಬಳಿಯ ಉದ್ಯಾನದಲ್ಲಿರುವ ಮಹಾನ್ ಮಾನವತಾವಾದಿ ಬಸವೇಶ್ವರರ ಮೂರ್ತಿಗೆ ಮಾಲಾರ್ಪಣೆ ಮಾಡಿ ನಂತರ ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮಿಜೀಗಳು ಸೇರಿದಂತೆ ಗಣ್ಯರು ರ್ಯಾಲಿಗೆ ಚಾಲನೆಯನ್ನು ನೀಡಿದರು.

ಈ ವೇಳೆ ಮಾತನಾಡಿದ ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮೀಜಿಗಳು, ಜಗಜ್ಯೋತಿ ಬಸವೇಶ್ವರ ಕಾಯಕ, ದಾಸೋಹ, ಸಮಾನತೆ, ನೈತಿಕ ವಿಚಾರಗಳನ್ನು ತತ್ವಾದರ್ಶಗಳನ್ನು ಮನೆ ಮನೆಗೆ ತಲುಪಿಸುವ ಉದ್ಧೇಶದಿಂದ ಬೆಳಗಾವಿ ನಗರದಲ್ಲಿ ಬಸವ ಜಯಂತಿಯ ಹಿನ್ನೆಲೆ ಬೃಹತ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ. ಬಸವಾದಿ ಪ್ರಮಥರ ವಚನಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸುಖ ಶಾಂತಿ ಸಮೃದ್ಧಿ ಲಭಿಸುತ್ತದೆ. ಎಲ್ಲರೂ ಒಂದೇ ಎಂಬ ಭಾವನೆ ಎಲ್ಲರಲ್ಲಿಯೂ ಮೂಡಬೇಕು. ಬಸವ ತತ್ವಗಳನ್ನು ಒಪ್ಪಿದ ಎಲ್ಲರೂ ಕೂಡ ಲಿಂಗಾಯಿತರು. ಜಾತಿ ಜಾತಿ ಎಂಬ ಬೇಧಭಾವವನ್ನು ದೂರು ಮಾಡಲೆಂದೇ ಬಸವಣ್ಣನವರು ಅನುಭವ ಮಂಟಪವನ್ನು ನಿರ್ಮಿಸಿದರು ಎಂದರು.

ಇನ್ನು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭೆಯ ಅಧ್ಯಕ್ಷರಾದ ರತ್ನಪ್ರಭಾ ಬೆಲ್ಲದ ಅವರು ಸಮಾನತೆಗಾಗಿ ಬೈಕ್ ರ್ಯಾಲಿ ಎಂಬ ಧ್ಯೇಯದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಎಲ್ಲ ಸಮಾಜಬಾಂಧವರೂ ಕೈಜೋಡಿಸಿದ್ದಾರೆ. ಬಸವಣ್ಣನವರ ಕೀರ್ತಿ ಇಡೀ ವಿಶ್ವದಾದ್ಯಂತ ಹಮ್ಮಿದೆ. ಎಲ್ಲ ಸಮಾಜದವರು ಇದನ್ನ ಯಶಸ್ವಿಗೊಳಿಸಿದ್ದು, ಎಲ್ಲರಿಗೂ ಶುಭಾಷಯಗಳನ್ನು ತಿಳಿಸುತ್ತೇನೆ ಎಂದರು.

ಇನ್ನು ಬಸವೇಶ್ವರ ಬ್ಯಾಂಕಿನ ನಿರ್ದೇಶಕರಾದ ಸರಳಾ ಹೇರೆಕರ ಅವರು ಕಳೆದ 2-3 ತಿಂಗಳುಗಳಿಂದ ಈ ಕಾರ್ಯಕ್ರಮಕ್ಕಾಗಿ ರತ್ನಪ್ರಭಾ ಬೆಲ್ಲದ ಅವರು ಶ್ರಮವಹಿಸಿದ್ದಾರೆ. ಯುವಕರು ಮೊಬೈಲ್ ಗೀಳಿನಿಂದ ಹೊರಬಂದು, ಬಸವ ತತ್ವ ಪ್ರಚಾರ ಪ್ರಸಾರಕ್ಕೆ ಮುಂದೆ ಬರಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮಾಜ ಸೇರಿದಂತೆ ವಿವಿಧ ಸಮಾಜ ಬಾಂಧವರು ಸಾವಿರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ಧರು. ರ್ಯಾಲಿಯೂ ಜಗಜ್ಯೋತಿ ಬಸವೇಶ್ವರ ವೃತ್ತ, ಆರ್.ಪಿ.ಡಿ ವೃತ್ತ, ಖಾನಾಪೂರ ರಸ್ತೆ, ಅನಗೋಳ, ವಡಗಾಂವ, ಶಹಾಪೂರ, ಡಾ. ಶ್ಯಾಮಾ ಪ್ರಸಾದ ಮುಖರ್ಜಿ ರಸ್ತೆ, ಕಪಿಲೇಶ್ವರ ಸೇತುವೆ, ರಾಮಲಿಂಗಖಿಂಡ ಗಲ್ಲಿ, ರಾಣಿ ಚೆನ್ನಮ್ಮ ವೃತ್ತ, ಶಿವಬಸವ ನಗರ, ಅಶೋಕ ನಗರ, ಮಹಾಂತೇಶನಗರ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಸಂಚರಿಸಿ ರಾಮತೀರ್ಥ ನಗರಕ್ಕೆ ತಲುಪಿ ಕೊನೆಗೊಂಡಿತು.

Tags:

error: Content is protected !!