Vijaypura

ಮಾನವೀಯತೆ ಮೆರೆದ ವಿದ್ಯಾರ್ಥಿನಿಯರಿಗೆ ಪೊಲೀಸರಿಂದ ಸನ್ಮಾನ ಪ್ರಾಮಾಣಿಕತೆ ಮೆರೆದ ಕಾಲೇಜು ವಿದ್ಯಾರ್ಥಿನಿಯರು.

Share

ಸಿಕ್ಕ ಹಣವನ್ನು ಠಾಣೆಗೆ ಒಪ್ಪಿಸಿದ ಯುವತಿಯರು.

ವಾರಸುದಾರರಿಗೆ ಸಿಕ್ಕಿತು ಚಿಕಿತ್ಸೆಯ ಹಣ.

ಗಾಂಧಿ ಚೌಕ್ ಪೊಲೀಸರಿಂದ ವಿದ್ಯಾರ್ಥಿನಿಯರ ಸನ್ಮಾನ.

ವಿಜಯಪುರದ ಗಾಂಧಿ ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ವೈದ್ಯಕೀಯ ಚಿಕಿತ್ಸೆಗೆ ಹಣ ತೆಗೆದುಕೊಂಡು ಹೋಗುತ್ತಿದ್ದ ಯುವಕನೊಬ್ಬ ₹3,50,000 ಹಣವನ್ನು ಕಳೆದುಕೊಂಡಿದ್ದ. ರಸ್ತೆ ಪಕ್ಕದಲ್ಲಿ ಬಿದ್ದಿದ್ದ ಹಣವನ್ನು ಗಮನಿಸಿದ ಇಬ್ಬರು ವಿದ್ಯಾರ್ಥಿನಿಯರು ಮತ್ತು ಒಬ್ಬ ಆಟೋ ಚಾಲಕರು ಅದನ್ನು ಗಾಂಧಿ ಚೌಕ್ ಠಾಣೆಗೆ ಒಪ್ಪಿಸಿದರು. ಪೊಲೀಸರು ಹಣ ಕಳೆದುಕೊಂಡ ಯುವಕನನ್ನು ಪತ್ತೆ ಮಾಡಿ, ಪರಿಶೀಲನೆ ಬಳಿಕ ಹಣವನ್ನು ವಾರಸುದಾರರಿಗೆ ಹಸ್ತಾಂತರಿಸಿದರು. ಈ ಮಾನವೀಯ ಕಾರ್ಯಕ್ಕಾಗಿ, ಹಣವನ್ನು ವಾಪಸ್ ನೀಡಿದ ಇಬ್ಬರು ವಿದ್ಯಾರ್ಥಿನಿಯರನ್ನು ಗಾಂಧಿ ಚೌಕ್ ಪೊಲೀಸ್ ಅಧಿಕಾರಿಗಳು ಸನ್ಮಾನಿಸಿದರು. ಈ ವೇಳೆ ಹಿಂದೂ‌ ಮುಖಂಡ ಉಮೇಶ ವಂದಾಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

Tags:

error: Content is protected !!