• ಹುಕ್ಕೇರಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ
• ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸಲು ನ್ಯಾಯಾಧೀಶರ ಕರೆ
• ಬಸವಣ್ಣ-ಅಂಬೇಡ್ಕರ್ ಸಮಾನತೆಯ ಆಶಯಗಳ ಸ್ಮರಣೆ
• ಹುಕ್ಕೇರಿ ವಕೀಲರ ಸಂಘದಿಂದ ಅರ್ಥಪೂರ್ಣ ಆಚರಣೆ

ಪ್ರತಿಯೊಬ್ಬರು ಸಂವಿಧಾನದ ಅಡಿಯಲ್ಲಿ ಕಾರ್ಯ ನಿರ್ವಹಿಸಿದಾಗ ಮಾತ್ರ ಅಂಬೇಡ್ಕರ್ ರವರಿಗೆ ಗೌರವ ಸಲ್ಲುತ್ತದೆ ಎಂದು ಹುಕ್ಕೇರಿ ಹಿರಿಯ ಸಿವ್ಹಿಲ್ ನ್ಯಾಯಾಧೀಶ ರಾಜಣ್ಣ ಸಂಕಣ್ಣವರ ಹೇಳಿದರು.
ಹುಕ್ಕೇರಿ ನಗರದಲ್ಲಿ ನ್ಯಾಯವಾದಿಗಳ ಸಂಘ ದ ವತಿಯಿಂದ ಹಮ್ಮಿಕೊಂಡ ಡಾ, ಬಾಬಾಸಾಹೇಬ ಅಂಬೇಡ್ಕರ್ ರವರ 135 ನೇ ಜನ್ಮ ದಿನಾಚಾರಣೆಯನ್ನು ಹುಕ್ಕೇರಿ ನ್ಯಾಯಾಧೀಶರಾದ ರಾಜಣ್ಣ ಸಂಕಣ್ಣವರ ಮತ್ತು ಆದಿತ್ಯಾ ಕಲಾಲ ಅಂಬೇಡ್ಕರ್ ರವರ ಮೂರ್ತಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ನ್ಯಾಯವಾದಿಗಳ ಸಂಘದ ಅದ್ಯಕ್ಷ ಕಾಡಪ್ಪಾ ಕುರಬೇಟ ಮಾತನಾಡಿ 12 ನೇ ಶತಮಾನದಲ್ಲಿ ಬಸವಣ್ಣ ರವರು ಎಲ್ಲರ ಸಮಾನತೆಗಾಗಿ ಅಂತರಜ್ಯಾತಿ ವಿವಾಹ ಮಾಡುವ ಮೂಲಕ ಜಾತಿ ಪದ್ದತಿ ಹೋಗಲಾಡಿಸಿದರು, ಇಂದು ಡಾ, ಬಿ ಆರ್ ಅಂಬೇಡ್ಕರ್ ರವರು ಸಂವಿದಾನದ ಮೂಲಕ ಎಲ್ಲರಿಗೂ ಸಮಾನ ಹಕ್ಕು ನೀಡಿ ಎಲ್ಲರೂ ಒಂದೆ ಎಂದು ಹೇಳಿದ ಮಹಾನ್ ಚೇತನರಾಗಿದ್ದಾರೆ ಎಂದರು ( )
ವೇದಿಕೆ ಮೇಲೆ ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಬಿ ಎಂ ಜಿನರಾಳೆ, ಕಾರ್ಯದರ್ಶಿ ಎಸ್ ಜೆ ನದಾಫ್, ಅನಿಲ ಕರೋಶಿ, ಆಶಾ ಸಿಂಗಾಡಿ, ಅನಿತಾ ಕುಲಕರ್ಣಿ, ಉಪಸ್ಥಿತರಿದ್ದರು.
ನ್ಯಾಯಾಧೀಶ ರಾಜಣ್ಣಾ ಮಾತನಾಡಿ ಪ್ರತಿಯೊಬ್ಬರು ಸಂವಿಧಾನದ ಅಡಿಯಲ್ಲಿ ಕಾರ್ಯ ನಿರ್ವಹಿಸಿ ಡಾ, ಅಂಬೇಡ್ಕರ ರವರ ಆದರ್ಶಗಳನ್ನು ಮೈ ಗೂಡಿಸಿಕೊಂಡಾಗ ಮಾತ್ರ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದರು
ನಂತರ ನ್ಯಾಯಾಧೀಶ ಆದಿತ್ಯಾ ಕಲಾಲ, ನ್ಯಾಯವಾದಿ ಆನಂದ ತೇಲಿ ಮತ್ತು ಶಿಕ್ಷಕ ಆನಂದ ಎನ್ ರವರಿಂದ ಉಪನ್ಯಾಸ ಜರುಗಿತು.
ಈ ಸಂದರ್ಭದಲ್ಲಿ ಬಿ ಎನ್ ಚಿಕ್ಕೋಡಿ, ಆರ್ ಬಿ ಮೋಶಿ, ಕೆ ಪಿ ಶಿರಗಾಂವಕರ, ಎಸ್ ಎಸ್ ಮರಿನಾಯಕ, ಆರ್ ಆರ್ ಗಸ್ತಿ , ಸಿ ಎಂ ಸಂಸುದ್ದಿ ಸೇರಿದಂತೆ ಹಿರಿಯ ಮತ್ತು ಕಿರಿಯ ನ್ಯಾಯವಾದಿಗಳು ಉಪಸ್ಥಿತರಿದ್ದರು.
