Dharwad

ಕಳೆದ ಏ.10 ಶುಕ್ರವಾರ ತಡ ರಾತ್ರಿ ಧಾರವಾಡದಲ್ಲಿ ನಡೆದಿದ್ದ ಕಾಂಗ್ರೆಸ್ ಮುಖಂಡನ ಹತ್ಯೆ ಪ್ರಕರಣ…

Share

ಧಾರವಾಡದಲ್ಲಿ ಇದೇ ಏಪ್ರಿಲ್ 24 ರಂದು ಹಸೆಮಣೆ ಏರಲು ಸಜ್ಜಾಗಿದ್ದ ಕಾಂಗ್ರೆಸ್ ಮುಖಂಡ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಜನ ಆರೋಪಿಗಳನ್ನು ಈಗ ಪೊಲೀಸರು ಬಂಧಿಸಿದ್ದು, ಕೊಲೆಗೆ ವೈಕ್ತಿಕ ದ್ವೇಷವೇ ಎಂಬುವುದು ಈಗ ಹೊರಬಿದೆ. ಅದರ ಕುರಿತು ಒಂದು ವರದಿ ಇಲ್ಲಿದೆ ನೋಡಿ..

ಈ ಪೋಟೋದಲ್ಲಿ ಕಾಣುತ್ತಿರುವ ಯುವಕನ ಹೆಸರು ಫೈರೋಜ್ ಪಠಾಣ್. ಧಾರವಾಡ ಮಳಾಪುರದ ಹಾಶ್ಮಿನಗರ ನಿವಾಸಿಗಿದ್ದ, ಜತೆಗೆ ಕಾಂಗ್ರೆಸ್ ಪಕ್ಷದಲ್ಲಿ ಯುತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದನ್ನು. ಇದೇ ಎಪ್ರಿಲ್ 24 ರಂದು ಫೈರೋಜನಿಗೆ ಮದುವೆ ಕೂಡಾ ನಿಶ್ಚಿಯವಾಗಿತ್ತು. ಮದುವೆ ಪೂರ್ವ ಸಿದ್ಧತೆಯಲ್ಲಿ ಬ್ಯೂಸಿಯಾಗಿದ್ದ ಫೈರೋಜ್‌ನನ್ನು ಕಳೆದ ಏಪ್ರಿಲ್ 10 ಶುಕ್ರವಾರ ರಾತ್ರಿ ತಮ್ಮ ಮನೆಯ ಗೇಟ್ ಒಳಾವರಣದಲ್ಲಿ ಮೊಬೈಲ್‌ನಲ್ಲಿ ಮಾತಾಡುತ್ತಾ ನಿಂತಿದ್ದ ವೇಳೆ ಏಕಾಏಕಿ ಮನೆಗೆ ನುಗ್ಗಿ ಐದು ಜನ ದುಷ್ಕರ್ಮಿಗಳು ಮನಸೋ ಇಚ್ಚೆ ಚಾಕುವಿನಿಂದ ದಾಳಿ ಮಾಡಿ ಪರಾರಿಯಾಗಿದ್ದರು. ಜತೆಗೆ ಪೊಐರೋಜ ಮೊಬೈಲ್ ಕೂಡಾ ಹಂತಕರು ತೆಗೆದುಕೊಂಡು ಹೋಗಿದ್ದರು. ಹಂತಕರ ದಾಳಿಯ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿತ್ತು. ಇನ್ನೂ ಚಾಕುವಿನಿಂದ ದಾಳಿಗೆ ಒಳಗಾದ ಫೈರೋಜ್ ತೀವ್ರ ರಕ್ತಸ್ರಾವದಿಂದ ಮನೆಯಲ್ಲಿಯೇ ಸಾವನಪ್ಪಿದ್ದನ್ನು.‌ ಇನ್ನೂ ಕುಟುಂಬಸ್ಥರಿಂದ ದೂರು ಪಡೆದುಕೊಂಡು ಉಪನಗರ ಠಾಣೆಯ ಪೊಲೀಸರು, ಸ್ಥಳೀಯ ಸಿಸಿಟಿವಿ ದೃಶ್ಯ ಹಾಗೂ ಕಲೆಯಾದ ಫೈರೋಜ್ ಮೊಬೈಲ್ ಲೋಕೇಶನ್ ಟ್ರ್ಯಾಕ್ ಆಧರಿಸಿ ಬಂಧನಕ್ಕೆ ಬಲೆ ಬೀಸಿದ್ದರು.‌ ಕೊಲೆ ಮಾಡಿ ಕೊಲೆ ಆರೋಪಿ ಮೊಹ್ಮದ್ ಷಾ ಅವರ ಧಾರವಾಡ ಉಪ್ಪಿನ ಬೆಟ್ಟಗೇರಿಯ ಸಂಬಂಧಿ ಮನೆಯಲ್ಲಿ ತಲೆ ಮರಿಸಿಕೊಂಡಿದ್ದ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸ್ ಟೀಂ ಮೊದಲು 5 ಜನ ಹತಂಕರನ್ನು ಕೊಲೆ ನಡೆದ 24 ಗಂಟೆಯಲ್ಲಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ವಶಕ್ಕೆ ಪಡೆದ ಆರೋಪಿತರ ವಿಚಾರಣೆ ಕೈಗೊಂಡ ನಂತರ ಮತ್ತೆ 4 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಒಟ್ಟು ಫೈರೋಜ ಕೊಲೆಯ ಹಿಂದೆ 9 ಜನ ಹಂತಕರು ಇರುವುದು ಪೊಲೀಸ್ ತನಿಖೆಯಲ್ಲಿ ಈಗ ಬಯಲಿಗೆ ಬಂದಿದೆ. ಮುಖ್ಯ ಆರೋಪಿ ಮೊಹ್ಮದ್ ಷಾ, ಸೈಯದ್‌ಗೌಸ್ ಜಾನಿಷಾ, ಫರವೇಜ್ ಆಲಂ ಮಹಲ್ದಾರ್, ಸಮೀರ್ ಅಹ್ಮದ್ ಮಕಾಂದರ್, ಸದ್ದಾಂಹುಸೇನ್ ನವಲಗುಂದ, ಖೈಫ್ ರೆಹಮಾನ್‌ಬಾಯಿ, ಅರಬಾಜ್ ಹಂಚಿನಾಳ, ಸೋಹಿಲ್‌ಖಾನ್ ಹಾಲಭಾವಿ, ಹಾಗೂ‌ಮಕ್ತುಂ ಸೊಗಲದ ಬಂಧಿತ ಆರೋಪ್ಪಿಳಾಗಿದ್ದಾರೆ.

ಫೈರೋಜ್ ಹತ್ಯೆಯ ಬಂಧಿತರಲ್ಲಿ ಮೊಹ್ಮದ್ ಷಾ ಪ್ರಮುಖ ಆರೋಪಿಯಾಗಿದ್ದು, ಫೈರೋಜ್ ಫಠಾಣ್ ಹಾಗೂ ಮೊಹ್ಮದ್ ಷಾ ನಡುವೆ ದೀರ್ಘಕಾಲದ ವೈಯಕ್ತಿಕ ಸಂಘರ್ಷವಿತ್ತಂತೆ. ಫೈರೋಜ್ ತನಗೆ ಪದೇ ಪದೇ ಕಿರಿಕಿರಿ ನೀಡುತ್ತಿದ್ದ ಎಂದು ಆರೋಪಿ ಮೊಹ್ಮದ್ ಷಾ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಇವರಿಬ್ಬರ ನಡುವಿನ ಜಗಳ ಹಲವು ಬಾರಿ ಪೊಲೀಸ್ ಠಾಣೆಯ ಮೆಟ್ಟಿಲನ್ನೂ ಏರಿತ್ತು. ಇದೇ ದ್ವೇಷವನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಮೊಹ್ಮದ್ ಷಾ, ಉಳಿದವರನ್ನು ಸೇರಿಸಿಕೊಂಡು ಫೈರೋಜ್‌ನನ್ನು ಮಟ್ಟಹಾಕಲು ಸ್ಕೆಚ್ ಹಾಕಿದ್ದ. ಫೈರೋಜ್ ಪಠಾಣ್ ಅವರಿಗೆ ಶೀಘ್ರದಲ್ಲೇ ಮದುವೆ ನಿಶ್ಚಯವಾಗಿತ್ತು. ಮದುವೆಯ ಕೆಲಸಗಳಿಗಾಗಿ ಅವರು ಗೆಳೆಯರನ್ನು ಮತ್ತು ಹುಡುಗರನ್ನು ಕರೆದುಕೊಂಡು ಓಡಾಡುತ್ತಿದ್ದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದ ಕೊಲೆ ಆರೋಪಿ ಮೊಹ್ಮದ್ ಷಾ, ಫೈರೋಜ್ ಎಲ್ಲಿ ನನ್ನ ಮೇಲೆ ದಾಳಿ ಮಾಡಬಹುದು ಎಂದು ತಿಳಿದುಕೊಂಡು, ಫೈರೋಜ್‌ನ ಮೇಕೆ ಕಣ್ಣಿಟ್ಟಿದ್ದ ಮೊಹ್ಮದ್ ಷಾ ಮನೆಯಲ್ಲಿ ಪುರುಷರ್ ಇಲ್ಲದ್ದನ್ನು ನೋಡಿಕೊಂಡು ಫೈರೋಜ್ ಮೇಲೆ ತನ್ನ ಪಡೆಯೊಂದಿಗೆ ದಾಳಿ ನಡೆಸಿ ಮನಸೋ ಇಚ್ಚೆ ಚಾಕು ಇರಿದು ಪರಾರಿಯಾಗಿದ್ದರು. ಈ ಕೊಲೆಗೆ ಮುಖ್ಯ ಆರೋಪಿ ಮೊಹ್ಮದ್ ಷಾ ಹಾಗೂ ಫೈರೋಜ ನಡುವೆ ಇದ್ದ ವೈಯಕ್ತಿಕ ದ್ವೇಷವೇ ಕಾರಣವೆಂದು ತಿಳಿದು ಬಂದಿದೆ.

ಕೊಲೆಗೆ ಬಳಕೆಯಾಗಿದ್ದ ಎರಡು ಬೈಕ್ ಹಾಗೂ ಒಂದು ಕಾರನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದು, ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ತನಿಖೆಯು ಇನ್ನೂ ಮುಂದುವರೆದಿದ್ದು, ಹೆಚ್ಚಿನ ವಿಚಾರಣೆಗೆ ಪೊಲೀಸರು ಆರೋಪ್ಪಿತರನ್ನು ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಒಟ್ಟಿನಲ್ಲಿ ಇದೇ ಏಪ್ರಿಲ್ 24 ರಂದು ನವ ಜೀವನಕ್ಕೆ ಕಾಲಿಡಬೇಕಿದ್ದ ಮಗನನ್ನು ಕಳೆದುಕೊಂಡು ಕುಟುಂಬ ಈಗ ಹಂತಕರಿಗೆ ಶಾಪ ಹಾಕುತ್ತಿದ್ದು, ಕೊಲೆಗಡುಕರಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿದ್ದಾರೆ.

Tags:

error: Content is protected !!