ರಾಜ್ಯ ರಾಜಕಾರಣದಲ್ಲಿ ಸಚಿವ ಸ್ಥಾನಕ್ಕಾಗಿ ಕಸರತ್ತು ಜೋರಾಗಿರುವ ಬೆನ್ನಲ್ಲೇ, ಗೃಹ ಸಚಿವ ಜಿ. ಪರಮೇಶ್ವರ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ಹೊಸಬರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೆ ಎಲ್ಲರೂ ತಲೆಬಾಗಲೇಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಶಾಸಕರ ದೆಹಲಿ ರನ್’ಗೆ ಸಂಬಂಧಿಸಿದಂತೆ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ ಅವರು ಸಚಿವ ಸ್ಥಾನವನ್ನು ನಿಭಾಯಿಸಲು ಸಮರ್ಥ ಹಿರಿಯ ನಾಯಕರು ಸಚಿವ ಸ್ಥಾನ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೇ, ಈ ಕುರಿತು ಸಿಎಂ, ಪಕ್ಷದ ಅಧ್ಯಕ್ಷರು ಮತ್ತು ಹೈಕಮಾಂಡ್ ತಿರ್ಮಾನಿಸಬೇಕು.
ಕೆಲಹಿರಿಯ ಸಚಿವರಿಗೆ ಸಂಪುಟದಲ್ಲಿ ಸ್ಥಾನ ನೀಡಿ, ಹೊಸಬರಿಗೆ ಅವಕಾಶ ನೀಡುವುದು ವಾಡಿಕೆ. ಹಿರಿಯರಿಂದ ಹೊಸಬರಿಗೆ ಅನುಭವವಾದಾಗ ಅದನ್ನು ಬದಲಾಯಿಸಲಾಗುತ್ತದೆ ಎಂದರು. ಯಾರೂ ಏನೇ ಹೇಳಿಕೆ ನೀಡಿದ್ರೂ ಇಲ್ಲಿ ಏನೇ ಆಗಲ್ಲ. ಎಲ್ಲವೂ ಹೈಕಮಾಂಡ್’ಗೆ ಬಿಟ್ಟಿದ್ದು ಎಂದರು. ಹೈಕಮಾಂಡ್ ತಿರ್ಮಾಣ ಮಾಡಿದರೇ, ಹೊಸಬರಿಗೆ ದಾರಿ ಮಾಡಿಕೊಡಲೂ ಒಪ್ಪಲೇ ಬೇಕು. ಇದನ್ನು ಪ್ರಶ್ನಿಸುವ ಸವಾಲೆ ಇಲ್ಲ ಎಂದರು.
