Chikkodi

ಶ್ರೀ ಮೃತ್ಯುಂಜಯ ಸ್ವಾಮೀಜಿ ಮೇಲಿನ ಆರೋಪಕ್ಕೆ ಸಮಾಜದ ಮುಖಂಡರ ಖಂಡನೆ

Share

ಕೂಡಲಸಂಗಮದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರ ಮೇಲೆ ಕೇಳಿಬಂದಿರುವ ಲೈಂಗಿಕ ದೌರ್ಜನ್ಯದ ಆರೋಪವು ಒಂದು ವ್ಯವಸ್ಥಿತ ಪಿತೂರಿ ಎಂದು ರಾಯಬಾಗದಲ್ಲಿ ಪಂಚಮಸಾಲಿ ಸಮಾಜದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಯಬಾಗ ಪಟ್ಟಣದ ಪ್ರವಾಸ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಾಜ‌ ಮುಖಂಡರು ಪಂಚಮಸಾಲಿ ಸಮಾಜದ ಪ್ರಮುಖ ಮುಖಂಡರು ಶ್ರೀ ಮೃತ್ಯುಂಜಯ ಸ್ವಾಮೀಜಿಯವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಉದ್ದೇಶದಿಂದ ಮಹಿಳೆಯೊಬ್ಬರನ್ನು ಬಳಸಿಕೊಂಡು ಈ ಸುಳ್ಳು ಆರೋಪ ಮಾಡಿಸಲಾಗಿದೆ. ಇದು ಸಂಪೂರ್ಣವಾಗಿ ಆಧಾರರಹಿತವಾಗಿದೆ.ಈಗಾಗಲೇ ಈ ಸುಳ್ಳು ಆರೋಪದ ವಿರುದ್ಧ ಮತ್ತು ದೂರುದಾರ ಮಹಿಳೆಯ ವಿರುದ್ಧ ಶ್ರೀಗಳು ಕಾನೂನು ಹೋರಾಟ ಆರಂಭಿಸಿದ್ದಾರೆ. ಈ ಸಂಬಂಧ ಉನ್ನತ ನ್ಯಾಯಾಲಯವಾದ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಸತ್ಯಾಸತ್ಯತೆ ಶೀಘ್ರದಲ್ಲೇ ಹೊರಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಶ್ರೀಗಳು ಸಮಾಜದ ಅಭಿವೃದ್ಧಿ ಮತ್ತು ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವುದನ್ನು ಸಹಿಸದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಇಂತಹ ಕೃತ್ಯಕ್ಕೆ ಮುಂದಾಗಿವೆ.
ಶ್ರೀ ಮೃತ್ಯುಂಜಯ ಸ್ವಾಮೀಜಿಯವರು ನಿಷ್ಕಳಂಕ ಚರಿತ್ರೆಯುಳ್ಳವರು. ಅವರ ಮೇಲಿನ ಆರೋಪವು ಸಮಾಜದ ದಿಕ್ಕು ತಪ್ಪಿಸುವ ಯತ್ನವಾಗಿದೆ. ಹೈಕೋರ್ಟ್ ಮೆಟ್ಟಿಲೇರಿರುವ ಶ್ರೀಗಳಿಗೆ ನ್ಯಾಯ ಸಿಗುವುದು ನಿಶ್ಚಿತ. ಸುಳ್ಳು ದೂರು ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ
ಅಶೋಕ್ ಅಂಗಡಿ. ಸುರೇಶ ಹೊಸಪೇಟೆ. ಶಿವಪ್ಪ ಸವದಿ,ಆನಂದ ಡಬ್ಬನವರ, ಪ್ರತಾಪ್ ಲಭ್ಯ. ದರಿಯಪ್ಪ ಮುತ್ನಾಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!