Vijaypura

PSI ವಿರುದ್ದವೇ ರಾಜ್ಯಪಾಲರಿಗೆ ಪತ್ರ ಬರೆದ ಪೊಲೀಸ್ ಸಿಬ್ಬಂದಿ; PSI ವಿರುದ್ಧವೇ ಆರೋಪಗಳ ಸುರಿಮಳೆ

Share

ವಿಜಯಪುರ ನಗರದ ಪೊಲೀಸ್ ಸಿಬ್ಬಂದಿ ಸ್ವತಃ ತಮ್ಮ ಠಾಣೆಯ ಪಿಎಸ್ಐ ವಿರುದ್ಧವೇ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ವಿಜಯಪುರ ನಗರದ ಆದರ್ಶ ನಗರ ಪೊಲೀಸ್ ಠಾಣಾ ಪಿಎಸ್ಐ ಸೀತಾರಾಮ್ ಲಮಾಣಿ ವಿರುದ್ಧ ಪೊಲೀಸ್ ಸಿಬ್ಬಂದಿಗಳು ಪತ್ರ ಬರೆದಿದ್ದಾರೆ. ಪತ್ರದಲ್ಲಿ ಒಂದೊಂದು ಕ್ರೈಂಗೆ ಒಂದೊಂದು ರೇಟ್ ಫಿಕ್ಸ್ ಮಾಡಿರುವ ಪಿಎಸ್ಐ ಲಮಾಣಿ ಇವರು ಬಾರ್, ಡಾಬಾ, ಅಕ್ರಮ ಅಕ್ಕಿ ಸಾಗಾಟ, ಗ್ಯಾಸ್ ಮಾರಾಟ, ಸಿಗರೆಟ್, ಮಾವಾ ಸೇರಿದಂತೆ ವಿವಿಧ ಕ್ರೈಂಗಳಿಗೆ 5.0 ರೇಟ್‌ನಲ್ಲಿ ಹಣ ವಸೂಲಿ ಮಾಡ್ತಿದ್ದಾರೆ. ಅಲ್ಲದೆ ಆದರ್ಶನಗರ ಪೊಲೀಸ್ ಠಾಣೆಗೆ ವರ್ಗಾವಣೆಗಾಗಿ ಹಣ ಹೊಂದಿಸಲು ವಸೂಲಿಗೆ ಇಳಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿ ರಾಜ್ಯಪಾಲರು, ಸಿಎಂ, ಗೃಹಸಚಿವ, ಶಾಸಕ ಯತ್ನಾಳ, ಪೊಲೀಸ್ ಮಹಾನಿರ್ದೇಶಕರಿಗೆ ನೊಂದ ಪೊಲೀಸರು ಪತ್ರ ಬರೆದಿದ್ದಾರೆ. ಪಿಎಸ್ಐ ಸೀತಾರಾಮ ಲಮಾಣಿ ತಮ್ಮ ಆತ್ಮೀಯ ಸಿಬ್ಬಂದಿಗಳಿಗೆ ಮಾತ್ರ ರಜೆ ನೀಡುತ್ತಾರೆ. ಈ‌ ಇದರಿಂದ ರೋಸಿ ಹೋಗಿರುವ ಸಿಬ್ಬಂದಿ ಪತ್ರ ಬರೆದು ಅಳಲು ತೊಡಿಕೊಂಡಿದ್ದಾರೆ.

Tags:

error: Content is protected !!