Belagavi

ಆದಿಚುಂಚನಗಿರಿ ಶ್ರೀಗಳಿಗೆ ಹುಕ್ಕೇರಿ ಹಿರೇಮಠದ ಗೌರವ

Share

ಆದಿಚುಂಚನಗಿರಿಯ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರಿಗೆ ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಜಗದ್ಗುರು ಪದ್ಮಭೂಷಣ ಪುರಸ್ಕೃತ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮಿಗಳವರ ಶ್ರೀ ಗುರು ಭೈರವೈಕ್ಯ ಮಂದಿರದ ಕುಂಬಾಭಿಷೇಕ ಮಹೋತ್ಸವದಲ್ಲಿ ಹುಕ್ಕೇರಿ ಹಿರೇಮಠದ ಗೌರವವನ್ನು ನೀಡಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರು ಆದಿಚುಂಚನಗಿರಿ ಮಹಾಕ್ಷೇತ್ರ ಧಾರ್ಮಿಕವಾಗಿ ಉನ್ನತ ಮಟ್ಟಕ್ಕೆ ಬೆಳೆದಿದೆ. ಅಷ್ಟೇ ಅಲ್ಲ ರಾಜ್ಯ ಹೊರ ರಾಜ್ಯ ಹೊರದೇಶಗಳಲ್ಲಿಯೂ ಕೂಡ ಬಾಲಗಂಗಾಧರನಾಥ ಮಹಾ ಸ್ವಾಮೀಜಿಯವರ ಪರಿಶ್ರಮದ ಫಲ ವಿದ್ಯಾ ಕಾಶಿಯನ್ನೇ ಸೃಷ್ಟಿ ಮಾಡಿದ್ದಾರೆ. ಅವರ ಆಜ್ಞೆಯನ್ನು ಪ್ರಸ್ತುತ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರು ಮಾಡುತ್ತಿರುವುದು ಅಭಿಮಾನದ ಸಂಗತಿ ಎಂದರು.

ಕೇಂದ್ರದ ಮಂತ್ರಿಗಳಾದ ಶ್ರೀ ಕುಮಾರ ಸ್ವಾಮಿಯವರು ಮಾತನಾಡಿ ಆದಿಚುಂಚನಗಿರಿಯ ಕ್ಷೇತ್ರ ಜಾತಿ ಮತ ಪಂಥ ಪಂಗಡವನ್ನು ಮೀರಿ ಬೆಳೆದಿದೆ. ಇವತ್ತು ದಕ್ಷಿಣ ಕರ್ನಾಟಕದ ಕ್ಷೇತ್ರಕ್ಕೆ ಉತ್ತರ ಕರ್ನಾಟಕದ ಪರಮ ಪೂಜ್ಯರಾದ ಹುಕ್ಕೇರಿ ಶ್ರೀಗಳು ತಮ್ಮ ಶ್ರೀಮಠದ ಗೌರವವನ್ನು ಸಮರ್ಪಿಸಿರುವುದು ಸಂತಸ ಪಡುವ ವಿಷಯ ಎಂದರು.

ಶ್ರೀರಂಗಪಟ್ಟಣ ಚಂದ್ರವನ ಆಶ್ರಮದ ಶ್ರೀ ಡಾ. ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಅವರು ಮಾತನಾಡಿ ಆದಿಚುಂಚನಗಿರಿಯ ಮಹಾಸಂಸ್ಥಾನ ಎಲ್ಲರನ್ನೂ ತನ್ನ ಕಾರ್ಯದಕ್ಷತೆಯಿಂದ ಕೈ ಮಾಡಿ ಕರೆಯುತ್ತಿದೆ ಎಂದರು.

ಗೌರವವನ್ನು ಸ್ವೀಕರಿಸಿದ ಜಗದ್ಗುರು ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಮಾತನಾಡಿ ನಮಗೆ ಹೆಮ್ಮೆ ಎನಿಸುತ್ತದೆ ಪರಮ ಪೂಜ್ಯ ಗುರುಗಳಾದ ಡಾ. ಬಾಲಗಂಗಾಧರ ನಾಥ ಮಹಾ ಸ್ವಾಮೀಜಿಯವರು ಸಾಧು ಪ್ರೇಮಿಗಳು. ಅವರು ನೆಟ್ಟ ಮರ ಇವತ್ತು ಹೆಮ್ಮರವಾಗಿ ಬೆಳೆದು ನಿಂತಿದೆ ಅಷ್ಟೇ ಅಲ್ಲದೇ ಸಾಕಷ್ಟು ಜನರಿಗೆ ಆಶ್ರಯವನ್ನು ನೀಡುತ್ತಿದೆ. ಶ್ರೀಗುರು ಬೈರವೈಕ್ಯ ಮಂದಿರದ ಲೋಕಾರ್ಪಣೆಗೆ ಇದೆ 15 ರಂದು ದೇಶದ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಜಿ ಅವರು ಬರುತ್ತಿರುವುದು ಅಭಿಮಾನದ ಸಂಗತಿ. ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯರು ಶ್ರೀಕ್ಷೆತ್ರದ ಬಗ್ಗೆ ಅಪಾರವಾದ ಗೌರವವನ್ನು ಹೊಂದಿರುವುದು ನಮಗೆ ಸಂತಸವನ್ನು ತಂದಿದೆ ಎಂದರು. ಇದೆ ಸಂದರ್ಭದಲ್ಲಿ ಶ್ರೀಗುರು ಬೈರವೈಕ್ಯ ಮಂದಿರದ ಕುಂಬಾಭಿಷೇಕವು ವೈಶಿಷ್ಟಪೂರ್ಣವಾಗಿ ಜರುಗಿತು. ಸುಮಾರು ನೂರಾರು ಜನ ಸoತ ಮಹಾಂತರು ಉಪಸ್ಥಿತರಿದ್ದರು.

Tags:

error: Content is protected !!