ಕಾಗವಾಡ ಮತಕ್ಷೇತ್ರದ ಖಿಳೆಗಾಂವ ವಿಭಾಗ 41 ಸಂತ ನಿರಂಕಾರಿ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಮಂಗಸುಳಿ ಗ್ರಾಮದಲ್ಲಿ ರಕ್ತದಾನ ಶಿಬಿರ ಜರುಗಿತು.


ರವಿವಾರ ಬೆಳಗ್ಗೆ ಮಂಗಸೂಳಿ ಗ್ರಾಮದ ಸಂತ ತುಕಾರಾಮ ಮಹಾರಾಜ ಮಂದಿರದಲ್ಲಿ ರಕ್ತದಾನ ಶಿಬಿರದ ಉದ್ದೇಶ ಇದೆ.ಸಂತ ನಿರಾಕರಿ ಸದ್ಗುರು ಇವರ ಸಂದೇಶದಂತೆ ಮಾನವ ಸೇವಾ ಇದು ಈಶ್ವರ ಸೇವಾ ಎಂದು ತಿಳಿದು ಪ್ರತಿಯೊಂದು ಶಾಖೆ ವತಿಯಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ. ಸಾಂಗ್ಲಿ ನಗರದ ಇಂಡಿಯನ್ ರೆಡಕ್ರಾಸ್ ಸಂಸ್ಥೆಯ ವೈದ್ಯರಿಂದ ರಕ್ತ ಸಂಗ್ರಹಿಸಲಾಯಿತು. ಈ ಶಿಬಿರದಲ್ಲಿ 200 ಜನ ರಕ್ತದಾನ ಮಾಡಿದರು.

ರಕ್ತದಾನ ಶಿಬಿರದ ಉದ್ಘಾಟನೆ ಪರಮ ಪೂಜ್ಯ ಸುನಿಲಕುಮಾರ ರಾವ ಜೊನಲ್ ಪ್ರಭಾರಿ ಬೆಂಗಳೂರು ಇವರು ನೆರವೇರಿಸಿದರು. ಖಿಳೆಗಾಂವ ವಿಭಾಗದ ನಿರ್ದೇಶಕ ವಿಜಯ ಮಾನೆ, ಸೌಂದರ್ಗ ಸಂಯೋಜಕ ಗಣಪತಿ ಗಾಡಿವಡ್ಡರ, ಮಹಾಂತೇಶ್ ಪಾಟೀಲ್, ಸೇರದಂತೆ ಅನೇಕ ಸದ್ಭಕ್ತರು ಪಾಲ್ಗೊಂಡಿದ್ದರು. ಈ ವೇಳೆ ಸ್ವಾಮೀಜಿಯವರು ರಕ್ತದಾನದ ಬಗ್ಗೆ ಮಾಹಿತಿ ನೀಡಿ ರಕ್ತದಾನ ಸರ್ವ ಶ್ರೇಷ್ಠದಾನ ಎಂದು ಹೇಳಿದರು.
