BELAGAVI

ಬೆಳಗಾವಿಯಲ್ಲಿ ಖಾಕಿ ಬೇಟೆ: ಮಟಕಾ ಅಡ್ಡೆ ಮೇಲೆ ದಾಳಿ

Share

ಬೆಳಗಾವಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದು, ಮಟಕಾ ದಂಧೆಯಲ್ಲಿ ತೊಡಗಿದ್ದ ಒಬ್ಬ ಹಾಗೂ ಗಾಂಜಾ ಸೇವನೆಯ ಅಮಲಿನಲ್ಲಿ ತೇಲುತ್ತಿದ್ದ ಐವರು ಯುವಕರನ್ನು ಬಂಧಿಸಿ ಸಲಾಕೆಗಳ ಹಿಂದೆ ತಳ್ಳಿದ್ದಾರೆ.

ಹಿರೇಬಾಗೇವಾಡಿ ಪೊಲೀಸರು ನಡೆಸಿದ ಮಿಂಚಿನ ದಾಳಿಯಲ್ಲಿ ಮಟಕಾ ಆಡಿಸುತ್ತಿದ್ದ ಹುಸೇನ ಬಬನಸಾಬ ಬಿಜಾಪೂರ ಎಂಬಾತನನ್ನು ಬಂಧಿಸಲಾಗಿದೆ. ಹಿರೇಬಾಗೇವಾಡಿ-ಬಸಾಪುರ ರಸ್ತೆಯಲ್ಲಿ ಸಾರ್ವಜನಿಕರಿಂದ ಹಣ ಪಡೆದು ಕಲ್ಯಾಣ ಮಟಕಾ ಜೂಜಾಟ ನಡೆಸುತ್ತಿದ್ದಾಗ ಪಿಎಸ್‌ಐ ಬಸವರಾಜ ಮಿಟಗಾರ ನೇತೃತ್ವದ ತಂಡ ದಾಳಿ ಮಾಡಿ ನಗದು ಹಾಗೂ ಮಟಕಾ ಚೀಟಿಗಳನ್ನು ಜಪ್ತಿ ಮಾಡಿದೆ. ಆರೋಪಿಯ ವಿರುದ್ಧ ಕೆ.ಪಿ. ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇನ್ನೊಂದೆಡೆ ನಗರದ ಎಪಿಎಂಸಿ ಮತ್ತು ಮಾರ್ಕೆಟ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಐವರನ್ನು ವಶಕ್ಕೆ ಪಡೆಯಲಾಗಿದೆ. ಎಪಿಎಂಸಿ ಠಾಣಾ ಪೊಲೀಸರು ಅಭಿಶೇಖ ದೌಲತ್‌ ಪಾಟೀಲ ಮತ್ತು ವಿಲಾಸ ಶಂಕರ ಬಾಳೇಕುಂದ್ರಿಯನ್ನು ಬಂಧಿಸಿದ್ದರೆ, ಮಾರ್ಕೆಟ್ ಠಾಣಾ ಪೊಲೀಸರು ವಿಜಯ ಸಂಜಯ ಕವಿಲಕರ, ಉತ್ಕರ್ಷ ಸುನೀಲ ವರ್ಮಾ ಹಾಗೂ ಹರ್ಷ ಸುನೀಲ ವರ್ಮಾ ಎಂಬುವವರನ್ನು ಬಂಧಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಅಸಹಜವಾಗಿ ವರ್ತಿಸುತ್ತಿದ್ದ ಈ ಎಲ್ಲ ಯುವಕರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಅಧಿಕಾರಿಗಳ ಈ ಕ್ಷಿಪ್ರ ಕಾರ್ಯಾಚರಣೆಯನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.

Tags:

error: Content is protected !!