Bailahongala

ಬೈಲಹೊಂಗಲ: ರೈತನ ತೋಟದ ಬಾವಿಯಲ್ಲಿ ಪ್ರತ್ಯಕ್ಷವಾದ ಜೋಡಿ ಮೊಸಳೆ; ಗ್ರಾಮಸ್ಥರಲ್ಲಿ ಮನೆಮಾಡಿದ ಆತಂಕ!

Share

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ಮೊಸಳೆಗಳ ಪ್ರತ್ಯಕ್ಷವಾಗುವಿಕೆ ಜನರನ್ನು ಹೌಹಾರುವಂತೆ ಮಾಡಿದೆ. ರೈತನೊಬ್ಬ ತನ್ನ ಹೊಲದ ಬಾವಿಯಲ್ಲಿ ಎರಡು ಬೃಹತ್ ಮೊಸಳೆಗಳನ್ನು ಕಂಡು ಬೆಚ್ಚಿಬಿದ್ದಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹೊಸೂರು ಗ್ರಾಮದಲ್ಲಿ ಈ ಆತಂಕಕಾರಿ ಘಟನೆ ನಡೆದಿದೆ. ಗ್ರಾಮದ ರೈತ ನಾಗಪ್ಪ ಸತ್ತಿಗೇರಿ ಎಂಬುವವರು ಇಂದು ಎಂದಿನಂತೆ ತಮ್ಮ ಹೊಲದ ಕೆಲಸಕ್ಕೆ ತೆರಳಿದ್ದಾಗ, ಅಲ್ಲಿನ ಬಾವಿಯಲ್ಲಿ ಎರಡು ಮೊಸಳೆಗಳು ಇರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಈ ವಿಷಯವು ಗ್ರಾಮದಾದ್ಯಂತ ಹರಡಿದ್ದು, ಕುತೂಹಲ ಹಾಗೂ ಭಯದಿಂದ ಜನರು ಬಾವಿಯತ್ತ ಧಾವಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಎಚ್ಚೆತ್ತ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿರುವ ಸಿಬ್ಬಂದಿಗಳು ಮೊಸಳೆಗಳ ರಕ್ಷಣೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.

Tags:

error: Content is protected !!