Uncategorized

ನಾವಲಗಟ್ಟಿಯಲ್ಲಿ ಮಾರುತಿ ದೇವರ ರಥೋತ್ಸವ ಸಂಪನ್ನ: ಗ್ರಾಮೀಣ ಸೊಗಡು ಉಳಿಸಲು ಶ್ರೀಗಳ ಕರೆ

Share

ನಾವಲಗಟ್ಟಿಯಲ್ಲಿ ಅದ್ಧೂರಿ ಶ್ರೀ ಮಾರುತಿ ರಥೋತ್ಸವ

ಶ್ರೀ ನಿತ್ಯಾನಂದ ಸ್ವಾಮೀಜಿಗಳಿಂದ ಧಾರ್ಮಿಕ ಬೋಧನೆ

ಪಾಶ್ಚಿಮಾತ್ಯ ಸಂಸ್ಕೃತಿ ಬಿಡಲು ಯುವಕರಿಗೆ ಕರೆ

ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜರುಗಿದ ಜಾತ್ರೆ

 

ಬೈಲಹೊಂಗಲ ತಾಲೂಕಿನ ನಾವಲಗಟ್ಟಿ ಗ್ರಾಮದ ಶ್ರೀ ಮಾರುತಿ ದೇವರ ಜಾತ್ರಾ ಮಹೋತ್ಸದ ಅಂಗವಾಗಿ ರಥೋತ್ಸವ ಶನಿವಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ಯರಗೊಪ್ಪದ ಲೀಲಾಮಠದ ಶ್ರೀ ನಿತ್ಯಾನಂದ ಸ್ವಾಮೀಜಿ ಸಾನಿಧ್ಯದಲ್ಲಿ ಜರುಗಿದ ರಥೋತ್ಸವದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
ಯುವ ಸಮುದಾಯ ರಥೋತ್ಸವದ ಮಾರ್ಗದುದ್ದಕ್ಕೂ ಪವನಸುತನ ನಾಮಸ್ಮರಣೆ ಹಾಗೂ ಉದ್ಘೋಷ ಮೊಳಗಿದರು.
ಶ್ರೀ ನಿತ್ಯಾನಂದ ಸ್ವಾಮಿಗಳು ಮಾತನಾಡಿ, ಗ್ರಾಮೀಣ ಪ್ರದೇಶದ ಸೊಗಡು ಉಳಿಸಿಕೊಳ್ಳಲು ಜಾತ್ರೆಗಳು ಮತ್ತು ಹಬ್ಬ ಹರಿದಿನಗಳ ಪಾತ್ರ ಮುಖ್ಯವಾಗಿದೆ. ಇಂದಿನ ತಂತ್ರಜ್ಞಾನ‌ದ ಸದ್ಬಳಕೆಗಿಂತ ಕೆಲವು ದುರ್ಬಳಕೆ ಮಾಡುತ್ತಿದ್ದಾರೆ. ಇದರಿಂದಾಗಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಯೂರಲು ಕಷ್ಟವಾಗುತ್ತದೆ. ಆದ್ದರಿಂದ ಯುವ ಸಮುದಾಯ ಧಾರ್ಮಿಕ ಆಚಾರ ವಿಚಾರಗಳನ್ನು ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.

ಶತಮಾನದ ಇತಿಹಾಸಯುಳ್ಳ ಭಾರತೀಯ ಸಂಸ್ಕೃತಿ ಹಾಗೂ ಸಂಪ್ರದಾಯಗಳನ್ನು ಕಡೆಗಣಿ, ಇತ್ತಿಚೆಗೆ ಪಾಶ್ಚಿಮಾತ್ಯ ಸಂಸ್ಕೃತಿಯ ಬೆನ್ನು ಬಿದ್ದಿರುವ ಯುವ ಸಮುದಾಯ ನಮ್ಮತನದ ಜೊತೆಗೆ ನಮ್ಮ ಸಂಪ್ರದಾಯವನ್ನು ಉಳಿಸಿ ಬೆಳೆಸಿಕೊಂಡು ಮುನ್ನಡೆಯಬೇಕು ಎಂದು ತಿಳಿಹೇಳಿದರು.
ಈ ಸಮಯದಲ್ಲಿ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.

Tags:

error: Content is protected !!