BELAGAVI

ಬೆಳಗಾವಿ: ಹೆರಾಯಿನ್ ಮಾರಾಟಗಾರ ಹಾಗೂ ಮಟಕಾ ಬುಕ್ಕಿಗಳ ಮೇಲೆ ಪೊಲೀಸರ ದಾಳಿ; ನಾಲ್ವರ ವಿರುದ್ಧ ಕೇಸ್

Share

ಬೆಳಗಾವಿ ನಗರದಲ್ಲಿ ಮಾದಕ ವಸ್ತುಗಳ ಹಾವಳಿ ಹಾಗೂ ಅಕ್ರಮ ಜೂಜಾಟದ ವಿರುದ್ಧ ಮಾರ್ಕೆಟ್ ಮತ್ತು ಶಹಾಪೂರ ಠಾಣೆ ಪೊಲೀಸರು ಮಿಂಚಿನ ದಾಳಿ ನಡೆಸಿದ್ದಾರೆ. ಕಾರ್ಯಾಚರಣೆ ವೇಳೆ ಹೆರಾಯಿನ್ ಮತ್ತು ನಗದು ಸೇರಿದಂತೆ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಬೆಳಗಾವಿ ನಗರದ ಖಂಜರ ಗಲ್ಲಿಯಲ್ಲಿ ಹೆರಾಯಿನ್ ಮಾರಾಟ ಮಾಡುತ್ತಿದ್ದ ರುಕ್ಕಿಣಿ ನಗರದ ಅರ್ಬಾಜ್ ಮುಸ್ತಾಕ ನಾಗನೂರ ಎಂಬಾತನನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿ, ಆತನಿಂದ 4.1 ಗ್ರಾಂ ಹೆರಾಯಿನ್ ಹಾಗೂ ಸ್ಕೂಟರ್ ವಶಪಡಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ಈ ಮಾದಕ ವಸ್ತುವನ್ನು ತಬೀಜ ಸಾಮರಿ ಎಂಬಾತನಿಂದ ತಂದಿರುವುದಾಗಿ ತಿಳಿದುಬಂದಿದ್ದು, ಇಬ್ಬರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇತ್ತ ಶಹಾಪೂರ ಠಾಣೆ ಪೊಲೀಸರು ಮಲಪ್ರಭಾ ನಗರ ಮತ್ತು ಯಡಿಯೂರಪ್ಪ ಮಾರ್ಗದಲ್ಲಿ ಮಟಕಾ ಅಡ್ಡೆಗಳ ಮೇಲೆ ದಾಳಿ ನಡೆಸಿ, ಸಂಜಯ ಬಸವರಾಜ ದನದವರ ಮತ್ತು ಮಹೇಶ ರವಿ ಗಂದಿಗವಾಡ ಎಂಬುವವರನ್ನು ಬಂಧಿಸಿದ್ದಾರೆ. ಮಟಕಾ ಹಣ ಸಂಗ್ರಹಿಸುತ್ತಿದ್ದ ಅಭಯ ಪಾಟೀಲ ಎಂಬಾತನೂ ಸೇರಿದಂತೆ ಎಲ್ಲ ಆರೋಪಿಗಳ ವಿರುದ್ಧ ಕೆ.ಪಿ. ಕಾಯ್ದೆಯಡಿ ದೂರು ದಾಖಲಿಸಲಾಗಿದೆ. ಪೊಲೀಸರ ಈ ಯಶಸ್ವಿ ಕಾರ್ಯಾಚರಣೆಯನ್ನು ನಗರ ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.

Tags:

error: Content is protected !!