BELAGAVI

ಬೆಳಗಾವಿ: ಶಿಕ್ಷಕರ ಸಂಘದ ಚುನಾವಣೆಯಲ್ಲಿ ಅಕ್ರಮದ ಆರೋಪ; ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

Share

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ
ಶಿಕ್ಷಕರ ಮತದಾರರ ಪಟ್ಟಿ ಮತ್ತು ಚುನಾವಣಾ ಅಧಿಕಾರಿ ಲಭ್ಯವಿಲ್ಲದ ಕಾರಣ ಚುನಾವಣೆಗೆ ತಡೆ ನೀಡಬೇಕು ಎಂದು ಶಿಕ್ಷಕರು ಶನಿವಾರ ಮಾರ್ಕೆಟ್ ಪೊಲೀಸ್ ಠಾಣೆಗೆ ದೂರು ನೀಡಿದರು.

ಅವಧಿ ಮತದಾರರ ಯಾದಿಯನ್ನು ಸಾಮಾನ್ಯ ಶಿಕ್ಷರಾದ ನಮಗೆ ಏ.14ರವರೆಗೂ ಒದಗಿಸಿರುವುದಿಲ್ಲ ಹಾಗೂ ಚುನಾವಣಾ ದಿನಾಂಕ ಪ್ರಕಟವಾದರೂ ಕೂಡ ಸಾಮಾನ್ಯ ಶಿಕ್ಷಕರಿಗೆ ತಿಳಿಸದೆಯೇ ಚುನಾವಣೆಯ ದಿನಾಂಕ 19 ರಂದು ನಡೆಸುವುದಾಗಿ ಪ್ರಕಟಿಸಿ ಗೊಂದಲ ಸೃಷ್ಟಿ ಮಾಡಿದ್ದಾರೆ ಎಂದು ದೂರಿದ್ದಾರೆ.
ಏ.11 ರಿಂದ 12ರಂದು ಬೆಳಗ್ಗೆ 11 ಗಂಟೆಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲಗಲಾ ಘಟಕದ ಕಚೇರಿಗೆ ಭೇಟಿ ನೀಡಿದಾಗ ಕಚೇರಿಗೆ ಬೀಗ ಹಾಕಲಾಗಿತ್ತು. ಈ ರೀತಿ ಅಧಿಕಾರದ ಲಾಲಸೆಯಿಂದ ಆಡಳಿತವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಜಿಲ್ಲಾಧ್ಯಕ್ಷ ಜಯಕುಮಾರ ಹೆಬಳಿ, ತಾಲೂಕಾಧ್ಯಕ್ಷ ಚಂದ್ರಶೇಖರ ಕೋಲ್ಕಾರ್ ಶಿಕ್ಷಕರಿಗೆ ತೊಂದರೆ ಕೊಟ್ಟಿದ್ದಾರೆ ಎಂದು ದೂರಿದರು‌.
ಎಸ್.ಜಿ.ಕಂಬಳ್ಕರ್, ಅನ್ವರ್ ಲಂಗೋಟಿ, ಆನಂದಗೌಡ ಕಾದ್ರೋಳಿ, ಈರಪ್ಪ ಗೂಳನ್ನವರ, ಆಸೀಫ್ ಅತ್ತಾರ, ಎ.ಕೆ.ತಹಶಿಲ್ದಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!