ಹುಬ್ಬಳ್ಳಿಯಲ್ಲಿ ಮೈತ್ತೋಂದು ಲವ್ ಜಿಹಾದ್ ಪ್ರಕರಣ ನಡೆದಿದೆ ಎಂದು ಆರೋಪಿಸಿ ಹಿಂದು ಪರ ಸಂಘಟನೆಗಳ ಕಾರ್ಯಕರ್ತರು ತಡರಾತ್ರಿವರೆಗೂ ಹುಬ್ಬಳ್ಳಿಯ ಅಶೋಕ ನಗರ ಪೊಯ ಠಾಣೆ ಮುಂದೆ ಮಾದಕ ವ್ಯಸನಿ ಸಮೀರ್ ಬೂದಿಹಾಳ ಹಿಂದು ಹೆಣ್ಣು ಮಕ್ಕಳಿಗೆ ಮಾದಕ ವಸ್ತುಗಳ ಸೇವೆನೆ ಮಾಡಿಸುವುದುರ ಜೊತೆಗೆ ಲವ್ ಜಿಹಾದ್ ಗೆ ಒಳಗಾಗುಸುತ್ತಿದ್ದ ಎಂದು ಆಕ್ರೋಶ ವ್ಯಕ್ತಪಡಿಸಿ ಸಮೀರ್ ಮೇಲೆ ದೂರು ದಾಖಲು ಮಾಡುವವರೆಗೆ ಧರಣಿ ನಡೆಸಿ ನಂತರ ಎಫ್ ಐ ಆರ್ ದಾಖಲಾದ ನಂತರ ಪ್ರತಿಭಟನೆ ವಾಪಸು ಪಡೆದಿದ್ದಾರೆ. ಈ ಕುರಿತು ಡಿಟೇಲ್ಸ್ ಇಲ್ಲಿದೆ…


ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಆರೋಪ
ಸಮೀರ್ ಎಂಬಾತನಿಂದ ಹಿಂದೂ ಯುವತಿಗೆ ಲವ್ ಜಿಹಾದ್ ಬಲೆ
ಪೊಲೀಸ್ ಠಾಣೆ ಎದುರು ಜಮಾಯಿಸಿದ ಹಿಂದೂ ಪರ ಸಂಘಟನೆಗಳಿಂದ ಪ್ರತಿಭಟನೆ
ಹುಬ್ಬಳ್ಳಿಯ ಅಶೋಕನಗರ ಪೊಲೀಸ್ ಠಾಣೆ ಎದುರು ಆಕ್ರೋಶ
ಗಾಂಜಾ ವ್ಯಸನಿಯಾಗಿರೋ ಸಮೀರ್ ನ ಬಂಧನಕ್ಕೆ ಆಗ್ರಹ
ಸಮೀರ್ ನ ಮೊಬೈಲ್ ವಶಕ್ಕೆ ಪಡೆದ ಹಿಂದೂ ಪರ ಸಂಘಟನೆ ಕಾರ್ಯಕರ್ತರು
ಮೊಬೈಲ್ ನಲ್ಲಿ ಸಿಕ್ಕ ಗಾಂಜಾ, ಮಾದಕ ವಸ್ತುಗಳ ಸೇವನೆ ಫೋಟೋ, ವಿಡಿಯೋ
ಇಷ್ಟೆಲ್ಲಾ ಪರೇಡ್ ನಡೆಸಿದ್ರು ಗಾಂಜಾ ಹೇಗೆ ಬಂತು ಎನ್ನುತ್ತಿರೋ ಕಾರ್ಯಕರ್ತರು

ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗಿತಾ ಇವೆ. ಅಮಾಯಕ ಹೆಣ್ಣು ಮಕ್ಕಳನ್ನ ಲವ್ ಜಿಹಾದ್ ಖೆಡ್ಡಾಕ್ಕೆ ಅನ್ಯ ಕೋಮಿನಿ ಯುವಕರು ಕೆಡವಿ ಅವರ ಬದುಕಿನ ಜೊತೆಗೆ ಆಡ ಆಡತಾ ಇದ್ದಾರೆ ಎಂದು
ಹುಬ್ಬಳ್ಳಿಇಲ್ಲಿಯ ರಾಜನಗರದ ಸಮೀರ್ ಬೂದಿಹಾಳ ಎಂಬಾತ ಕಾರಿನಲ್ಲಿ ಗಾಂಜಾ ಇಟ್ಟುಕೊಂಡಿರುವ ಆರೋಪದ ಮೇಲೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ಸಿಬ್ಬಂದಿ ರಾಜೇಂದ್ರ ಅವರು ರಾಜನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಅವರ ವಾಟ್ಸ್ಆ್ಯಪ್ ನಂಬರ್ಗೆ ಬಾತ್ಮಿದಾ ರರೊಬ್ಬರು ವಿಡಿಯೊ ಕಳುಹಿಸಿದ್ದರು. ಯುವಕನೊಬ್ಬ ಕಾರಿನಲ್ಲಿ ಕುಳಿತು ಪ್ಲಾಸ್ಟಿಕ್ನಿಂದ ಗಾಂಜಾ ತೆರೆಯುತ್ತಿರುವ ವಿಡಿಯೊ ಅದಾಗಿದ್ದು, ಪರಿಶೀಲಿಸಿದಾಗ ಅವನು ಸಮೀರ ಬೂದಿಹಾಳ ಎನ್ನುವುದಾಗಿ ತಿಳಿದು ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಮೀರ್ ಬೂದಿಹಾಳ ಮೇಲೆ ಕಠಿಣ ಕ್ರಮಕ್ಕೆ ಉತ್ತರ ಕರ್ನಾಟಕ ರಾಜ್ಯ ಭಜರಂಗದಳ
ಸಂಚಾಲಕ ಶಿವಾನಂದ ಸತ್ತಿಗೇರಿ ಹಾಗೂ ವಿಶ್ವ ಹಿಂದು ಪರಿಷತ್ ಪ್ರಮುಖರು
ಒತ್ತಾಯ ಮಾಡಿದರು
ಭಜರಂಗದಳ ಹಾಗೂ ವಿವಿಧ ಹಿಂದೂ ಪರ ಸಂಘಟನೆಗಳ
ಕಾರ್ಯಕರ್ತರು ಅಶೋಕನಗರ ಪೊಲೀಸ್ ಠಾಣೆ ಎದುರು ತಡರಾತ್ರಿವರೆಗೂ ಪ್ರತಿಭಟನೆ ನಡೆಸಿ, ಆರೋಪಿ ಸಮೀರ ಬೂದಿಹಾಳ ಓರ್ವ ಮಾದಕ ವ್ಯಸನಿ ಆಗಿದ್ದಾನೆ ಆತನ
ಬಂಧನಕ್ಕೆ ಬಂಧನ ಮಾಡಬೇಕು
ಸಮೀರ ಹಿಂದೂ ಯುವತಿಯರಿಗೆ ಮಾದಕ ವಸ್ತುಗಳನ್ನು ನೀಡಿ, ದುರ್ಬಳಕೆ ಮಾಡಿಕೊಳ್ಳುತ್ತಿದ್ದ. ಇದು ಮತ್ತೊಂದು ಲವ್ ಜಿಹಾದ್ ಆಗಿದೆ. ಆರೋಪಿ ಬಳಿಯಿದ್ದ ಮೊಬೈಲ್ನಲ್ಲಿ ಯುವತಿಯರಿಗೆ ಮಾದಕ ವಸ್ತುಗಳನ್ನು ನೀಡಿ ದೌರ್ಜನ್ಯ ನೀಡಿರುವ ಸಾಕಷ್ಟು ವಿಡಿಯೊ, ಫೋಟೊಗಳಿವೆ.
ಪೊಲೀಸರು ಗಾಂಜಾ ವ್ಯಸನಿಗಳ, ಮಾರಾಟಗಾರರ ಪರೇಡ್ ನಡೆಸಿ ಎಚ್ಚರಿಕೆ ನೀಡುತ್ತಿದ್ದರೂ, ಇವರಿಗೆಲ್ಲ ಎಲ್ಲಿಂದ ಅದು ದೊರೆಯುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಂತಹವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಡರಾತ್ರಿವರೆಗೂ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು, ಕೇಲ ಸಮಯ ಪೊಲೀಸ್ ಠಾಣೆ ಮುಂದೆ ಧರಣಿ ನಡೆಸಿ ಶ್ರೀರಾಮ ಜಪ ಮಾಡಿದರು. ನಂತರ ಎಸಿಪಿ ಶಿವಾನಂದ ಘಟನಾ ಸ್ಥಳಕ್ಕೆ ಆಗಮಿಸಿ ಆರೋಪಿ ಮೇಲೆ ಕ್ರಮದ ಭರವಸೆ ನೀಡಿದರು ಸಹ ಪ್ರತಿಭಟನಾಕಾರರು ಪಟ್ಟು ಬಿಡದೇ ಆರೋಪಿ ಬಂಧನ ಮಾಡುವಂತೆ ಆಗ್ರಹಿಸಿ ಧರಣಿ
ಮುಂದುವರಿಸಿದರು. ಇದೇ ಎಸಿಪಿ ಶಿವಾನಂದ ಸಹ ಸಮೀರ್ ಮೇಲೆ ಕಠಿಣ ಭರವಸೆ ನೀಡಿದರು.
ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ
ಸಮೀರ್ ಬೂದಿಹಾಳ ಮೇಲೆ ದೂರು ದಾಖಲಿಸಿ ಎಫ್ ಐ ಆರ್ ಪ್ರತಿಯನ್ನ ಪ್ರತಿಭಟನಾಕಾರರಿಗೆ ನೀಡಿದ ನಂತರ ಪ್ರತಿಭಟನೆ ವಾಪಾಸು ಪಡೆಯಲಾಯಿತು.
