Chikkodi

ಜನಮನ ಸೆಳೆದ ದನಗಳ ಭವ್ಯ ಪ್ರದರ್ಶನ

Share

ಚಿಕ್ಕೋಡಿ ತಾಲೂಕಿನ ಬೆಳಕೂಡ ಗೇಟನ ಲಕ್ಷ್ಮೀನಗರದ ಲಕ್ಷ್ಮೀದೇವಿಯ ಜಾತ್ರಾಮಹೋತ್ಸವ ಅಂಗವಾಗಿ ದನಗಳ ಭವ್ಯ ಪ್ರದರ್ಶನ ಜನಮನ ಸೆಳೆಯಿತು.

ಕರ್ನಾಟಕ ಮಹಾರಾಷ್ಟ್ರ ಸೇರಿದಂತೆ ವಿವಿಧ ಕಡೆಗಳಿಂದ ಸುಮಾರು 50 ಕ್ಕೂ ಹೆಚ್ಚು ಹೋರಿಗಳು ಈ ಪ್ರದರ್ಶನದಲ್ಲಿ ಭಾಗಿಯಾಗಿದವು.ರೈತರು ತಮ್ಮ ಹೋರಿಗಳಿಗೆ ಬಣ್ಣ,ಅರಿವೆಗಳಿಂದ ಶೃಂಗಾರಗೊಳಿಸಿದ್ದರು.ಚಿಕ್ಕೋಡಿ ತಾಲೂಕು ಸೇರಿದಂತೆ ಅಕ್ಕಪಕ್ಕದ ತಾಲೂಕಿನ ರೈತರು ಈ ದನಗಳ ಪ್ರದರ್ಶನವನ್ನು ಕಣ್ಣುತುಂಬಿಕೊಂಡರು.ಹಾಲಲ್ಲಿ ಒಂಟಿ ಚಾಂಪಿಯನ್ ಹೋರಿಗಳು,2 ಹಲ್ಲಿನಿಂದ 6 ಹಲ್ಲಿನ ಚಾಂಪಿಯನ್ ಹೋರಿಗಳು,ಹಾಲಲ್ಲಿ ಜೋಡಿ ಹೋರಿಗಳು,ಎರಡು ಹಲ್ಲಿನ ಜೋಡಿಯ ಹೋರಿಗಳು,4-6 ಹಲ್ಲಿನ ಜೋಡಿ ಹೋರಿಗಳು ಹಾಗೂ ಜೋಡಿ ಎತ್ತುಗಳ ಪ್ರದರ್ಶನ ಮನಸೂರಗೊಂಡಿತ್ತು.ಅತ್ಯುತ್ತಮ ಹೋರಿಗಳಿಗೆ ನಗದು ರೂಪದಲ್ಲಿ ಬಹುಮಾನ ಹಾಗೂ ಪಾರಿತೋಷಕವನ್ನು ನೀಡಿ ಗೌರವಿಸಿದರು.ಇದೇ ಸಂದರ್ಭದಲ್ಲಿ ಆಯೋಜಕರು ಮಾಧ್ಯಮಗಳ ಜೊತೆಗೆ ‌ಮಾತನಾಡಿದ್ದು ಹೀಗೆ…

ಈ ಸಂದರ್ಭದಲ್ಲಿ ಬಸವರಾಜ ಪಾಶ್ಚಾಪೂರೆ,ಪ್ರಸಾದ್ ಸಾಳಸ್ಕರ, ರಾಜೇಂದ್ರ ಪಾಶ್ಚಾಪೂರೆ,ದೇವರಾಜ್ ಪಾಶ್ಚಾಪೂರೆ , ಚಂದ್ರಶೇಖರ ಅರಬಾಂವಿ ,ಸಿದ್ದಪ್ಪಾ ಪಾಶ್ಚಾಪೂರೆ , ಪ್ರಭಾಕರ ಡಬ್ಬನ್ನವರ ನಟರಾಜ್ ಹೀರೆಮಠ,ಬಸವರಾಜ ಕವಣಿ,ಬಸವರಾಜ ಹುರುಳಿ,ಆನಂದ ಪಾಶ್ಚಾಪೂರೆ, ಶಾಂತಿನಾಥ ತಪಕಿರೆ,ಸಚಿನ್ ಹರಗಾಪೂರೆ,ಶೇಕರ ಪಾಶ್ಚಾಪೂರೆ , ಸಂತೋಷ ನಿಡಸೋಸಿ,ಅಜಿತ ಪಾಶ್ಚಾಪೂರೆ,ಆನಂದ ದೊಡಮನಿ,ಸಾಗರ ತಪಕಿರೆ ,ರಾಕೇಶ ಪಾಶ್ಚಾಪೂರೆ,ಪ್ರಭು ಪಾಶ್ಚಾಪೂರೆ,ಚೇತನ್ ಹುರುಳಿ , ಮಲ್ಲಿಕಾರ್ಜುನ ಮಾಳಿ, ಸಂತೋಷ ದಿಗ್ಗೆವಾಡಿ, ಈಶ್ವರ ಮಾಳಿ, ರಮೇಶ್ ಮುಗಳಿ, ಅಭಿಷೇಕ ಪಾಶ್ಚಾಪೂರೆ ,ಚನ್ನಪ್ಪಾ ಡಬ್ಬನ್ನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!