ಖಾನಾಪೂರ ತಾಲೂಕಿನ ನಂದಗಡ ಗ್ರಾಮದ ಕಲ್ಲಪ್ಪ ಪರಶರಾಮ ಸುತಾರ ಅವರು ಏಪ್ರಿಲ್ 2025ರಲ್ಲಿ ಒಬ್ಬ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ನಡೆದಿತ್ತು. ಈ ಸಂಬಂಧ ಖಾನಾಪೂರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಸದರ ಪ್ರಕರಣದ ತನಿಖೆಯನ್ನು ಪಿ ಎಸ್ ಐ ಎಂ. ಬಿ. ಬಿರಾದಾರ ಹಾಗೂ ಪಿಐ ಎಲ್. ಎಚ್. ಗೌಂಡಿ ಅವರು ನಡೆಸಿದರು. ತನಿಖೆ ವೇಳೆ ಐ. ಎನ್. ಚಿನ್ನವ್ವಗೋಳ (ಸಿಎಚ್ಸಿ-2269) ಮತ್ತು ಮಂಜುನಾಥ ಮುಸಳಿ (ಸಿಪಿಸಿ-3703) ಅವರು ಸಹಕಾರ ನೀಡಿದರು. ತನಿಖೆ ಪೂರ್ಣಗೊಳಿಸಿ ಆರೋಪಪಟ್ಟಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ನ್ಯಾಯಾಲಯದ ಕಾರ್ಯಚಟುವಟಿಕೆಗಾಗಿ ಪ್ರವೀಣ ಹೊಂಡದ (ಸಿಪಿಸಿ-3573) ಅವರು ಕಾರ್ಯ ನಿರ್ವಹಿಸಿದರು.
ಬೆಳಗಾವಿಯ ವಿಶೇಷ ಪೋಕ್ಸೊ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ಒಂದು ವರ್ಷದೊಳಗೆ ಪೂರ್ಣಗೊಂಡು, ವಿಚಾರಣೆ ಸಂದರ್ಭದಲ್ಲಿ ಆರೋಪಿಯ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶೆ ಶ್ರೀಮತಿ ಸಿ. ಎಂ. ಪುಷ್ಪಲತಾ ಅವರು ಆರೋಪಿಗೆ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.
ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ ಅಡ್ವೊಕೇಟ್ ಎಲ್. ವಿ. ಪಾಟೀಲ ಅವರು ಪರಿಣಾಮಕಾರಿ ವಾದ ಮಂಡಿಸಿದರು.
