ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ ಬೆಳಗಾವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಜಾರಿ ಅಧಿಕಾರಿಗಳ ಕಚೇರಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಬೆಳಗಾವಿ , ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಗೋಕಾಕ ಹಾಗೂ ಕಾರ್ಯಾಗೃಹ ಮತ್ತು ಸುಧಾರಣಾ ಸೇವೆಗಳು ಗೋಕಾಕ ಇವರ ಸಂಯುಕ್ತ ಆಶ್ರಯದಲ್ಲಿ ತಂಬಾಕು ಹಾಗೂ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮದ ಕುರಿತು ವಿಚಾರಣಾ ಕೈದಿಗಳಿಗೆ ಜಾಗೃತಿ ಕಾರ್ಯಕ್ರಮವನ್ನು ಉಪ ಕಾರ್ಯಗ್ರಹ ಗೋಕಾಕ ತಾಲೂಕಿನಲ್ಲಿ ಹಮ್ಮಿಕೊಳ್ಳಲಾಯಿತು.

ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಹೇಗಾರ ಆದ ಡಾ. ಶ್ವೇತ ಪಾಟೀಲ ತಂಬಾಕು ಸೇವನೆಯು ವಿಶ್ವದಾದ್ಯಂತ ತಡೆಗಟ್ಟಬಹುದಾದ ಸಾವಿಗೆ ಏಕೈಕ ಕಾರಣವಾಗಿದೆ. ಮಾನವನ ದೇಹದ ಆರೋಗ್ಯದ ಮೇಲೆ ಮತ್ತು ದೀರ್ಘಾವಧಿಯ ಹಾನಿಕಾರಕ ಪರಿಣಾಮಗಳು ಕಾರಣವಾಗಿದೆ.ತಂಬಾಕು ಬಳಕೆಯು ನಮ್ಮ ಆರೋಗ್ಯದ ವ್ಯವಸ್ಥೆ ಮೇಲೆ ಒಂದು ಪ್ರಮುಖ ಹೊರೆಯಾಗಿದೆ. ತಂಬಾಕು ಸೇವನೆಯು ಮಾನವನ ಜೀವನದ ಮೇಲೆ ಆರ್ಥಿಕವಾಗಿ ಸಾಮಾಜಿಕವಾಗಿ ಮಾನಸಿಕವಾಗಿ ಪರಿಣಾಮವನ್ನು ಬೀರುತ್ತದೆ. ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಕಾರ್ಯಾಗೃಹ ಮತ್ತು ಸುಧಾರಣಾ ಸೇವೆಗಳು ಗೋಕಾಕ ಇದರ ಸತತ ಪ್ರಯತ್ನದಿಂದ ಕಾರ್ಯಾಗ್ರಹದ ವಿಚಾರಣಾ ಕೈದಿಗಳಿಗೆ ತಂಬಾಕು ಹಾಗೂ ಮಾದಕ ವಸ್ತುಗಳ ಸೇವನೆಯನ್ನು ಸಂಪೂರ್ಣವಾಗಿ ತ್ಯಜಿಸಲು ಯಶಸ್ವಿಗೊಳಿಸಲಾಗಿದೆ. ಕಾರ್ಯಾಗೃಹದಲ್ಲಿ ಯಾವುದೇ ಪ್ರಕಾರದ ತಂಬಾಕು ಇತರ ಮಾದಕ ವಸ್ತುಗಳ ಪೂರೈಕೆ ಮತ್ತು ಬಳಕೆ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಹಾಗಾಗಿ ಕಾರ್ಯಾಗೃಹ ತಂಬಾಕು ಮುಕ್ತ ಕಾರ್ಯಾಗೃಹ ಎಂದು ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಮಾಜ ಕಾರ್ಯಕರ್ತರಾದ ಕು. ಕವಿತಾ ರಾಜಣ್ಣವರ ಇವರು ಪ್ರಪಂಚದಾದ್ಯಂತ ಪ್ರತಿ ವರ್ಷ 80 ಲಕ್ಷಕ್ಕೂ ಹೆಚ್ಚು ಜನರು ತಂಬಾಕು ಸೇವನೆಯಿಂದ ಮತ್ತು ಧೂಮಪಾನ ಕಾರಣಗಳಿಂದ ಸಾಯುತ್ತಿದ್ದಾರೆ. ತಂಬಾಕು ಬಳಸುವರು ತಂಬಾಕು ಸೇವಿಸದವರಿಗಿಂತ ಅಂದಾಜು 10 ವರ್ಷ ವಯಸ್ಸು ಕುಂಟಿತರಾಗಿ ಅಕಾಲಿಕ ಮರಣ ಹೊಂದಿದ್ದಾರೆ. ನೂರಕ್ಕೂ ಹೆಚ್ಚು ರಾಸಾಯನಿಕಗಳಿದ್ದು ಅನೇಕ ಕ್ಯಾನ್ಸರ್ ರೋಗಕ್ಕೆ ಒಳಗಾಗುತ್ತಾ ಇದ್ದಾರೆ ಆದ್ದರಿಂದ ಪ್ರತಿಯೊಬ್ಬರೂ ದುಶ್ಚಟದಿಂದ ದೂರವಿರಬೇಕು ಮತ್ತು CTPA2003 ಕಾಯ್ದೆ ಕುರಿತು ವಿಚಾರಣಾ ಕೈದಿಗಳಿಗೆ ತಿಳಿಹೇಳಿದರು.
ಶ್ರೀಮತಿ ಆಶಾ ಹಿರೇಮಠ ಇವರು ಜಿಲ್ಲಾ ತಂಬಾಕು ವ್ಯಸನ ಮುಕ್ತ ಕೇಂದ್ರದಲ್ಲಿ ದೊರೆಯುವ ಸೇವಾ ಸೌಲಭ್ಯದ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶ್ರೀಯುತ ಸುರೇಶ ಮೇಲ್ಮನಿ ಸಹಾಯಕ ಜೈಲರ ಹಾಗೂ ಎಲ್ಲ ಸಿಬ್ಬಂದಿ ವರ್ಗದವರು ವಿಚಾರಣಾ ಕೈದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
