ಮಧ್ಯಪ್ರಾಚ್ಯ ಯುದ್ಧಿದಾಗಿ ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿನ ಅಟೋ ಎಲ್ ಪಿ ಜಿ ಅಭಾವತೆ ಸಮಸ್ಯೆ ಹಾಗೂ ದರ ಏರಿಕೆ, ಹಿನ್ನಲೆ ಇಂದು ಧಾರವಾಡ ಜಿಲ್ಲಾಧಿಕಾರಿಗಳ ಅಟೋ ಚಾಲಕರ ಸಂಘಗಳ ಪ್ರಮುಖರ ಸಭೆ ನಡೆಸಿ ಚಾಲಕರ ಸಮಸ್ಯೆ ಆಲಿಸಿದರು.

ನಗರದ ಜಿಲ್ಲಾಧಿಕಾರಿ ಸಭಾಭವನದಲ್ಲಿ ಉತ್ತರ ಕರ್ನಾಟಕ ಅಟೋ ಮತ್ತು ರಿಕ್ಷಾ ಚಾಲಕರ ಸಂಘಗಳ ಸಭೆ ಮಾಡಿದ ಜಿಲ್ಲಾಧಿಕಾರಿ ಸ್ನೇಹಲ್ ಆರ್ ಅವರು, ಚಾಲಕರಿ ಆಗುತ್ತಿರುವ ತೊಂದರೆ ಹಾಗೂ ದರ ಏರಿಕೆಯ ಸಮಸ್ಯ ಕುರಿತು ಚರ್ಚೆ ನಡೆಸಿದರು. ಈ ವೇಳೆ ತ್ತರ ಕರ್ನಾಟಕ ಅಟೋ ರಿಕ್ಷಾ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಮಾತನಾಡಿ ಶೇಖರ್ಯಾ ಮಠಪತಿ ಮಾತನಾಡಿ ತಮ್ಮ ಪ್ರಮುಖ ಬೇಡಿಕೆಗಳಾದ, ಅಟೋ ಎಲ್‌ಪಿಜಿ ಅಭಾವತೆ ಉಟಾಗಿರುವ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರಬೇಕು, ಅವಳಿನಗರದಲ್ಲಿರುವ ಎಲ್ಲ ಎಲ್ ಪಿ ಜಿ ಬಂಕ್‌ಗಳಲ್ಲಿ ಎಲ್ ಪಿಜಿ ಸಿಗುವಂತೆ ಕ್ರಮ ಕೈಗೊಳ್ಳಿ. ಇದರ ಜತೆಗೆ ದರಗಳ ಸಮಸ್ಯೆ ದೊಡ್ಡದಾಗಿದೆ. ಪೆಟ್ರೋಲ್ ಡಿಸೇಲ್ ಬಂಕ್‌ಗಳು ಹೇಗೆ ಒಂದೇ ದರದಲ್ಲಿ ತೈಲ ನೀಡುತ್ತವೆ ಅದೇ ಮಾದರಿಯಲ್ಲಿ ಅಟೋ ಎಲ್ ಪಿ ಜಿ ಬಂಕ್‌ಗಳ ದರ ನಿಗದಿ ಮಾಡ ಬೇಕು. ಒಂದೊಂದು ಅಟೋ ಎಲ್.ಪಿಜಿ ಬಂಕನಲ್ಲಿ ಒಂದೊಂದು ದರ ಮಾಡಲಾಗುತ್ತಿದೆ. ಇದರಿಂದ ಬಡ ಅಟೋ ಚಾಲಕರಿಗೆ ತುಂಬಾ ತೊಂದರೆಯಾಗುತ್ತಿದೆ. ಎಲ್ಲ ಅಟೋ ಎಲ್ಲ ಪಿ ಜಿ ಬಂಕ್‌ಗಳಲ್ಲಿ ಅಂದಿನ ಪ್ರೈಸ್ ಎಷ್ಟೀದೆ ಎಮಬುವುದುನ್ನು ರೇಟ್ ಕಾರ್ಡ್ ಹಚ್ಚಬೇಕು ಎಂದು ಆಗ್ರಹಿಸಿದರು. ಅಟೋ ಚಾಲಜರ ಸಂಘಗಳ ಸಮಸ್ಯ ಆಲಿಸಿದ ಬಳಿಕ ಜಿಲ್ಲಾಧಿಕಾರಿ ಸ್ನೇಹಲ್ ಆರ್ ಅವರು ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಆದಷ್ಟು ಬೇಗ ಸಮಸ್ಯೆ ಪರಿಹಾರಕ್ಕೆ ಒತ್ತು ನೀಡುವುದಾಗಿ ಭರವಸೆ ನೀಡಿದ್ದರು.
