Bagalkot

ಚುನಾವಣಾ ಅಬ್ಬರಕ್ಕೆ ಬ್ರೇಕ್: ಫ್ಯಾಮಿಲಿ ಜೊತೆ ಅಭ್ಯರ್ಥಿಗಳ ‘ರಿಲ್ಯಾಕ್ಸ್’ ಮೂಡ್

Share

ಬಾಗಲಕೋಟೆ ಉಪಚುನಾವಣೆಯ ಅಖಾಡದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆದಿದ್ದ ಧೂಳೆಬ್ಬಿಸುವ ಪ್ರಚಾರಕ್ಕೆ ಕೊನೆಗೂ ತೆರೆ ಬಿದ್ದಿದೆ. ಸತತ ಓಡಾಟದಿಂದ ಸುಸ್ತಾಗಿದ್ದ ಪ್ರಮುಖ ಅಭ್ಯರ್ಥಿಗಳು ಈಗ ಫಲಿತಾಂಶದ ಒತ್ತಡದ ನಡುವೆಯೂ ಕುಟುಂಬದವರೊಂದಿಗೆ ಸಮಯ ಕಳೆಯುತ್ತಾ ನಿಟ್ಟುಸಿರು ಬಿಡುತ್ತಿದ್ದಾರೆ.

ಬಾಗಲಕೋಟೆ ಉಪಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡ ಬೆನ್ನಲ್ಲೇ, ಕ್ಷೇತ್ರದ ಪ್ರಮುಖ ಅಭ್ಯರ್ಥಿಗಳಾದ ಕಾಂಗ್ರೆಸ್‌ನ ಉಮೇಶ್ ಮೇಟಿ ಹಾಗೂ ಬಿಜೆಪಿಯ ವೀರಣ್ಣ ಚರಂತಿಮಠ ಅವರು ಪ್ರಚಾರದ ಅಬ್ಬರದಿಂದ ದೂರ ಸರಿದು ವಿಶ್ರಾಂತಿಗೆ ಶರಣಾಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ಕ್ಷೇತ್ರದ ಮೂಲೆ ಮೂಲೆಗಳಲ್ಲಿ ಸಂಚರಿಸಿ ಮತ ಬೇಟೆಯಾಡಿದ್ದ ನಾಯಕರು, ಇಂದು ತಮ್ಮ ಮನೆಯವರೊಂದಿಗೆ ಕಾಲ ಕಳೆಯುತ್ತಾ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ. ಒಂದೆಡೆ ಸೋಲು-ಗೆಲುವಿನ ಲೆಕ್ಕಾಚಾರಗಳು ಬಿರುಸಿನಿಂದ ಸಾಗುತ್ತಿದ್ದರೂ, ಮೇ 4ರ ಫಲಿತಾಂಶದವರೆಗಿನ ಈ ಬಿಡುವಿನ ವೇಳೆಯನ್ನು ಅಭ್ಯರ್ಥಿಗಳು ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ. ಅಭ್ಯರ್ಥಿಗಳು ಮನೆಯಲ್ಲಿದ್ದರೆ, ಇತ್ತ ಕಾರ್ಯಕರ್ತರು ಮಾತ್ರ ಕಟ್ಟೆಗಳ ಮೇಲೆ ಕುಳಿತು ಗೆಲುವಿನ ಅಂತರದ ಬಗ್ಗೆ ಚರ್ಚೆಯಲ್ಲಿ ಮುಳುಗಿರುವುದು ಕಂಡುಬರುತ್ತಿದೆ.

Tags:

error: Content is protected !!