Vijaypura

ವಿಜಯಪುರ ನಗರದ ರವೀಂದ್ರನಾಥ ಠಾಗೋರ್ ಸಿಬಿಎಸ್‌ಇ & ಪಿಯು ಕಾಲೇಜಿನ ವಿದ್ಯಾರ್ಥಿಗಳ ಅಮೋಘ ಸಾಧನೆ

Share

ಇಂದು ಪ್ರಕಟವಾದ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ವಿಜಯಪುರ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಛತ್ರಪತಿ ಶಿವಾಜಿ ಮಹಾರಾಜ ಶಿಕ್ಷಣ ಸಂಸ್ಥೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರವೀಂದ್ರನಾಥ ಠಾಗೋರ್ ಸಿಬಿಎಸ್ಇ ಸ್ಕೂಲ್ ಮತ್ತು ಪಿಯು ಕಾಲೇಜು, ಇಂದಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ 100% ಕ್ಕೆ ನೂರರಷ್ಟು ಸಾಧನೆ ಮಾಡಿ ಕೀರ್ತಿಯ ಕಿರೀಟ ಧರಿಸಿದೆ. ಜ್ಞಾನ ದೀಪ ಬೆಳಗಿದ ಮಂದಿರದಲ್ಲಿ, ಪರಿಶ್ರಮದ ಫಲಗಳು ಹೂವಾಗಿ ಅರಳಿದಂತಾಗಿದೆ‌. ಪ್ರತಿಯೊಬ್ಬ ವಿದ್ಯಾರ್ಥಿಯ ಸಾಧನೆ, ಗುರುಗಳ ಮಾರ್ಗದರ್ಶನದ ಮಧುರ ಸಂಗೀತವಾಗಿ ಮೂಡಿ ಬಂದಿದೆ‌. ಇಂದು ಪ್ರಕಟವಾದ ಫಲಿತಾಂಶದಲ್ಲಿ ಪ್ರತೀಕ್ಷಾ ಕಾಂಬಳೆ(93), ಶ್ರೀನಿವಾಸ ಪವಾರ(92), ಮಲ್ಲಿಕಾರ್ಜುನ ಬ್ಯಾಲ್ಯಾಳ(91) ಶಶಿಕುಮಾರ ಕಂಬಳಿ(90) ಮಾನಸಾ ಶಿಂಧೆ(90) ಹೀಗೆ ಹಲವು ಸಾಧನೆ ಮಾಡಿದ್ದಾರೆ. ಡಿಸ್ಟಿಂಕ್ಷನ್ 30 ಪ್ರಥಮ ದರ್ಜೆ 63 ದ್ವೀತಿಯ 02 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಯಿಂದ ಅತಿ ಹೆಚ್ಚು ಅಂಕಗಳ ಹೊನಲು ಹರಿದು ಕಾಲೇಜಿನ ಪ್ರತಿಷ್ಠೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ. ಈ ಸಾಧನೆಯ ಕುರಿತು ಮಾತನಾಡಿದ ಸಂಸ್ಥೆಯ ಚೇರ್ಮನ್ ಶಿವಾಜಿ ಗಾಯಕವಾಡ, ಕಳೆದ 25 ವರ್ಷಗಳಿಂದ ಮಧ್ಯಮ ವರ್ಗದ ವಿದ್ಯಾರ್ಥಿಗಳ ಕನಸುಗಳಿಗೆ ಬೆಳಕು ನೀಡುವುದು ನಮ್ಮ ಧ್ಯೇಯ. ಈ ಯಶಸ್ಸು ವಿದ್ಯಾರ್ಥಿಗಳ ಪರಿಶ್ರಮ, ಶಿಕ್ಷಕರ ನಿಷ್ಠೆ ಮತ್ತು ಪಾಲಕರ ವಿಶ್ವಾಸದ ಸಮನ್ವಯ ಎಂದು ಹರ್ಷ ವ್ಯಕ್ತಪಡಿಸಿದರು. ಇದೆ ವೇಳೆ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸಿಹಿ ತಿನ್ನಿಸಿ ಅಭಿನಂದಿಸಿದ ಅವರು, ಸಾಧನೆಗೆ ಸ್ಪೂರ್ತಿ ನೀಡಿದ ಉಪನ್ಯಾಸಕರು ಹಾಗೂ ಸಿಬ್ಬಂದಿಯ ಸೇವೆಯನ್ನು ಹೃದಯಪೂರ್ವಕವಾಗಿ ಶ್ಲಾಘಿಸಿದರು. ಇನ್ನೂ ಸಿಬಿಎಸ್‌ಇ ಮಾನ್ಯತೆ ಪಡೆದು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಈ ಶಿಕ್ಷಣ ಮಂದಿರ, ಸಾಧನೆಯ ಸುವರ್ಣಪಥದಲ್ಲಿ ಮತ್ತೊಂದು ಮೈಲುಗಲ್ಲು ನೆಟ್ಟಿದೆ. ಶ್ರಮವೇ ಶ್ರೀಮಂತಿಕೆ, ವಿದ್ಯೆಯೇ ವೈಭವ ಎಂಬ ಮಂತ್ರದೊಂದಿಗೆ, ವಿದ್ಯಾರ್ಥಿಗಳ ಭವಿಷ್ಯವನ್ನು ಬೆಳಗಿಸುತ್ತಿರುವ ಈ ಸಂಸ್ಥೆ, ಮುಂದಿನ ದಿನಗಳಲ್ಲೂ ಸಾಧನೆಯ ಪ್ರಯಾಣ ಮುಂದುವರಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ರೀತಾ ಗಾಯಕವಾಡ, ಪ್ರಿನ್ಸಿಪಲ್ ಅಭಿಜಿತ್ ಗಾಯಕವಾಡ, ವೈಸ್ ಪ್ರಿನ್ಸಿಪಲ್ ಜುಬೇರ ಸಯ್ಯದ್, ಆಡಳಿತಾಧಿಕಾರಿ ರಾಜು ಪವಾರ, ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ವಿಜಯಕುಮಾರ ಸಾರವಾಡ, ಸೇರಿದಂತೆ ಉಪನ್ಯಾಸಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Tags:

error: Content is protected !!