Chikkodi

ಸುಳ್ಳೇ ಬಿಜೆಪಿಗರ ಮನೆ ದೇವ್ರು…

Share

ಸುಳ್ಳೇ ಬಿಜೆಪಿಗರ ಮನೆ ದೇವರು. ಚುನಾವಣಾ ಆಯೋಗ ರಾಜ್ಯದ ಮಹಿಳೆಯರ ಮೇಲೆ ಅನ್ಯಾಯ ಮಾಡುತ್ತಿದೆ. ಆದರೇ, ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಚಿಕ್ಕೋಡಿಗೆ ಆಗಮಿಸಿದ ಸಚಿವರು ಮಾಧ್ಯಮಗಳೊಂದಿಗೆ ಮಾತನಾಡುತ್ತ, ದಾವಣೆಗೆರೆಯಲ್ಲಿ ಕಾಂಗ್ರೆಸ್ ಪರ ಅಲೆಯಿದ್ದು, ಗ್ಯಾರಂಟಿಗಳು ಮನೆ ಮನೆಗೆ ತಲುಪಿವೆ. ಅಲ್ಲದೇ ಇನ್ನೊಂದೆಡೆ ಶಾಮನೂರು ಶಿವಶಂಕರಪ್ಪನವರು ಮಾಡಿದ ಕೆಲಸವನ್ನು ಜನರು ಸ್ಮರಿಸುತ್ತಿದ್ದಾರೆ. ಇನ್ನು ಬಾಗಲಕೋಟೆಯಲ್ಲಿಯೂ ಪೂರಕ ವಾತಾವರಣವಿದೆ. ಎರಡು ಕ್ಷೇತ್ರದಲ್ಲಿನ ಗೆಲುವು ರಾಜ್ಯ ರಾಜಕಾರಣಕ್ಕೆ ದಿಕ್ಸೂಚಿಯಾಗಲಿದೆ. ಬಹಳಷ್ಟು ಅಂತರದಿಂದ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದರು.

ಇನ್ನು ಚುನಾವಣೆ ವೇಳೆಯೇ ಎರಡು ಕ್ಷೇತ್ರದಲ್ಲಿ ಗೃಹಲಕ್ಷ್ಮೀ ಹಣ ಬಿಡುಗಡೆ ಮಾಡಲಾಗಿದೆ ಎಂಬ ಬಿಜೆಪಿ ಆರೋಪಕ್ಕೆ ಬಿಜೆಪಿಯವರ ಮನೆ ದೇವರೇ ಸುಳ್ಳು. ಕೇವಲ ಎರಡೇ ಕ್ಷೇತ್ರದಲ್ಲಿ ಅಲ್ಲ. ಇಡೀ ರಾಜ್ಯದ 1 ಕೋಟಿ 25 ಲಕ್ಷ ಮನೆ ಯಜಮಾನಿಗಳಿಗೆ ಪ್ರತಿ ತಿಂಗಳಂತೆ ಈ ಬಾರಿಯೂ ಹಣ ಬಿಡುಗಡೆ ಮಾಡಿದ್ದೇವೆ. ಕರ್ನಾಟಕದಲ್ಲಿ ಕಾಂಗ್ರೆಸ್’ ಸುಭದ್ರವಾಗಿದೆ. ಚುನಾವಣಾ ಆಯೋಗ ಕರ್ನಾಟಕದ ಮಹಿಳೆಯರ ಮೇಲೆ ಅನ್ಯಾಯ ಮಾಡುತ್ತಿದೆ. ಬರಿ ಎರಡು ಕ್ಷೇತ್ರಕ್ಕಾಗಿ ಹಣ ಹಾಕಿದ್ದೇವೆ ಅನ್ನೋದು ಸುಳ್ಳು.ಚುನಾವಣಾ ಆಯೋಗ ಅನ್ಯಾಯ ಮಾಡುತ್ತಿದೆ. ಬಿಜೆಪಿ ಸರ್ಕಾರ ಇರುವ ಕಡೆಗಳಲ್ಲೂ ಗ್ಯಾರಂಟಿ ಯೋಜನೆಗಳಿದ್ದಾವೆ.ಅಲ್ಲಿ ಮಾತ್ರ ಹಾಕಲು ಬಿಟ್ಟು ಮೂರು ತಿಂಗಳ ಹಣ ಮುಂಗಡ ಹಾಕಲು ಬಿಟ್ಟಿದ್ದಾರೆ.ಎಂದರು.

ಇನ್ನು ಜಯಮೃತ್ಯುಂಜಯ ಸ್ವಾಮಿಜೀಗಳ ಕೇಸ್’ಗೆ ಸಂಬಂಧಿಸಿದಂತೆ ನಮಗೆ ನಮ್ಮ ಸ್ವಾಮೀಜಿಗಳ ಮೇಲೆ ಗೌರವವಿದೆ. ಆದರೇ, ಇದರಲ್ಲಿ ಓರ್ವ ಹೆಣ್ಣುಮಗಳ ಹೆಸರು ಬರುತ್ತಿದೆ. ಈ ಕುರಿತು ಕೂಲಂಕೂಷವಾಗಿ ತನಿಖೆಯಾದ ಮೇಲೆ ಮಾತನಾಡುತ್ತೆ ಎಂದ ಅವರು ಚಿಕ್ಕೋಡಿ ಮತ್ತು ಗೋಕಾಕಿನಲ್ಲಿ ಅಕ್ಕ ಪಡೆಯನ್ನು ಸ್ಥಾಪಿಸಲಾಗುವುದು ಎಂದರು.

Tags:

error: Content is protected !!