BELAGAVI

ಬೆಳೆಗಾರನ ಕಣ್ಣಲ್ಲಿ ನೀರು ತಂದ ತಂದ ಈರುಳ್ಳಿ

Share

ಒಂದೆಡೆ ಯುದ್ಧದ ಕಾರ್ಮೋಡ, ಇನ್ನೊಂದೆಡೆ ಎಲ್.ಪಿ.ಜಿ ಕೊರತೆಯಿಂದ ಕಂಗಾಲಾದ ಹೋಟೆಲ್ ಉದ್ಯಮ. ಇವೆಲ್ಲದರ ನೇರ ಹೊಡೆತ ಬಿದ್ದಿರುವುದು ಮಾತ್ರ ಅನ್ನದಾತನಿಗೆ. ಬೆಳಗಾವಿ ಎಪಿಎಂಸಿಯಲ್ಲಿ ಈರುಳ್ಳಿ ಬೆಳೆಗಾರರ ಆರ್ತನಾದ ಕೇಳಿಬರುತ್ತಿದೆ. ಪಾತಾಳಕ್ಕೆ ಕುಸಿದ ಬೆಲೆಯಿಂದಾಗಿ ಈರುಳ್ಳಿ ಬೆಳೆಗಾರ ರೈತರ ಪಾಡು ಹೇಳತೀರದಾಗಿದೆ. ಈ ಕುರಿತದಾ ಸಂಪೂರ್ಣ ವರದಿ ಇಲ್ಲಿದೆ ನೋಡಿ.

ಅಂತರಾಷ್ಟ್ರೀಯ ಮಟ್ಟದ ರಣಾಂಗಣದ ಕಿಚ್ಚು ಇಂದು ಬೆಳಗಾವಿಯ ಈರುಳ್ಳಿ ಮಾರುಕಟ್ಟೆಯನ್ನು ಸುಡುತ್ತಿದೆ. ನೆರೆರಾಜ್ಯ ಮಹಾರಾಷ್ಟ್ರದ ಸೊಲ್ಲಾಪುರ ಹಾಗೂ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಿಂದ ಸಾವಿರಾರು ರೂಪಾಯಿ ಖರ್ಚು ಮಾಡಿ ಈರುಳ್ಳಿ ಹೊತ್ತು ತಂದ ರೈತರಿಗೆ ಇಂದು ಬೆಳಗಾವಿ ಎಪಿಎಂಸಿಯಲ್ಲಿ ಮಣ್ಣಿನ ಬೆಲೆ ಸಿಗುತ್ತಿದೆ. ಯುದ್ಧದ ಹಿನ್ನೆಲೆಯಲ್ಲಿ ಎದುರಾಗಿರುವ ಎಲ್.ಪಿ.ಜಿ ಅನಿಲದ ತೀವ್ರ ಕೊರತೆಯಿಂದಾಗಿ ರಾಜ್ಯದ ಬಹುತೇಕ ಹೋಟೆಲ್‌ಗಳು ಬಾಗಿಲು ಹಾಕಿವೆ. ಹೋಟೆಲ್ ಉದ್ಯಮವೇ ಸ್ತಬ್ಧವಾಗಿರುವುದರಿಂದ ದೊಡ್ಡ ಗಾತ್ರದ ಈರುಳ್ಳಿಗೆ ಬೇಡಿಕೆಯಿಲ್ಲದೆ ಮಾರುಕಟ್ಟೆಯಲ್ಲಿ ದರ ಪಾತಾಳಕ್ಕೆ ಕುಸಿದಿದೆ.

ಮಹಾರಾಷ್ಟ್ರದ ಸೊಲ್ಲಾಪುರದಿಂದ ಬೆಳಗಾವಿಯ ಎಪಿಎಂಸಿಗೆ ಈರುಳ್ಳಿ ತೆಗೆದುಕೊಂಡು ಬಂದಿದ್ದೇವೆ. ಆದರೇ ಇಲ್ಲಿಯ ದರ ಕುಸಿತ ಕಂಡಿದೆ. ಬೇಡಿಕೆ ಕಡಿಮೆ ಹಿನ್ನೆಲೆ ದರ ಸಿಗುತ್ತಿಲ್ಲ. ಯುದ್ಧದಿಂದಾಗಿ ಎಲ್.ಪಿ.ಜಿ ಕೊರತೆಯಾಗಿದೆ. ಇದರಿಂದಾಗಿ ಹೊಟೇಲ್’ಗಳು ಬಂದ್ ಆಗಿದ್ದು, ತರಕಾರಿಗಳನ್ನು ಖರೀದಿಸಲಾಗುತ್ತಿಲ್ಲ. ದೂರದಿಂದ ಬಂದಿರುವ ನಮಗೆ ಖರ್ಚು ಕೂಡ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.

ಸುಮಾರು 2500 ರೂಪಾಯಿ ಕ್ವಿಂಟಲ್ ಈರುಳ್ಳಿ ಖರೀದಿಸಿದರೇ, ನಮಗೆ ಲಾಭವಾಗುತ್ತದೆ. ಅಷ್ಟು ಬೆಲೆ ಸಿಗದಿದ್ದರೇ ಸಮಸ್ಯೆಯಾಗುತ್ತದೆ. ಬಂದ ಬೆಲೆಗೆ ನೀಡಿ ಹೋದರೇ, ಈರುಳ್ಳಿ ಬೆಳೆಗಾರ ಸಂಕಷ್ಟಕ್ಕೆ ಸಿಲುಕುತ್ತಾನೆ ಎನ್ನುವುದು ರೈತರ ಹೇಳಿಕೆ.

ಇನ್ನು ಈರುಳ್ಳಿ ಸಗಟು ವ್ಯಾಪಾರಿಯೊಬ್ಬರೂ ಯುದ್ಧದ ಹಿನ್ನೆಲೆ ಈರುಳ್ಳಿ ಬೆಲೆ ಕುಸಿತಗೊಂಡಿದೆ. ಬೆಳಗಾವಿ ಎಪಿಎಂಸಿಯಿಂದ ಹೊರ ದೇಶಕ್ಕೂ ಈರುಳ್ಳಿ ಕಳುಹಿಸಲಾಗುತ್ತದೆ. ಇಂದು ಪ್ರತಿ ಕ್ವಿಂಟಲ್’ಗೆ 800 ರಿಂದ 1200 ರೂಪಾಯಿಗೆ ಖರೀದಿಸಲಾಗುತ್ತಿದೆ. ಹೊಟೇಲ್ ವ್ಯವಸಾಯ ಬಂದ್ ಆದ ಹಿನ್ನೆಲೆ ಅದರ ಪರಿಣಾಮ ಬಿರುತ್ತಿದೆ ಎಂದರು.

5 ರಿಂದ 15 ರೂಪಾಯಿ ಕಿಲೋಗೆ ಈರುಳ್ಳಿ ಮಾರಾಟವಾಗುತ್ತಿದೆ. ಹೊಟೇಲ್ ಬಂದ್ ಆಗಿರುವುದರಿಂದ ದೊಡ್ಡ ಗಾತ್ರದ ಈರುಳ್ಳಿಗೆ ಬೆಲೆಯೇ ಇಲ್ಲದಾಗಿದೆ. ಪುಣೆ, ಕಾಮತೆವಾಡಿ, ಪಾಡಗಾಂವ, ಶಿರೂರು ಇನ್ನುಳಿದ ಕಡೆಯಿಂದ ಈರುಳ್ಳಿ ಬರುತ್ತದೆ. ಯುದ್ಧದ ಹಿನ್ನೆಲೆ ಬೇಡಿಕೆ ಕಡಿಮೆಯಾಗಿದೆ. ಉತ್ಪಾದನೆ ಹೆಚ್ಚು ಬೇಡಿಕೆಯಾದ ಹಿನ್ನೆಲೆ ಬೆಲೆ ಕುಸಿದಿದೆ ಎಂದು ವ್ಯಾಪಾರಿಗಳು ತಿಳಿಸಿದರು.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಿಂದ ಬೆಳಗಾವಿ ಎಪಿಎಂಸಿಗೆ ಈರುಳ್ಳಿ ತೆಗೆದುಕೊಂಡು ಬಂದ ರೈತ ವಾಹನದ ಸಾಗಾಟ ಬಾಡಿಗೆ 2300 ರೂಪಾಯಿಯಾಗಿದೆ. ಪ್ರತಿ ಕ್ವಿಂಟಲ್ 7 ರಿಂದ 800 ರೂಪಾಯಿಗೆ ಖರೀದಿಯಾಗಿದೆ. ಅದಕ್ಕೆ 25 ರೂಪಾಯಿ ಚೀಲಗಳಿಗೆ, ಕೆಲಸಗಾರರಿಗೆ 600 ರೂಪಾಯಿ ನೀಡಿದರೇ, ಬೆಳೆಗಾರನಿಗೆ ಉಳಿಯುವುದೇಷ್ಟು? ಎಂದು ಪ್ರಶ್ನಿಸಿದರು. ಕನಿಷ್ಠ ಪಕ್ಷ 1500 ರೂಪಾಯಿ ಕ್ವಿಂಟಲ್ ಆದ್ರೂ ಖರೀದಿಸಿದ್ರೇ ಬೆಳೆಗಾರರಿಗೆ ಒಳ್ಳೆಯದಾಗುತ್ತದೆ ಎಂದರು.

Tags:

error: Content is protected !!