Dharwad

ಲವ್ ಜಿಹಾದ್ ಇನ್ನಷ್ಟು ಪ್ರಕರಣಗಳು ಹೊರ ಬರಲಿವೆ- ಚಕ್ರವರ್ತಿ ಸೂಲಿಬೆಲೆ.

Share

ಲವ್‌ ಜಿಹಾದ್‌ಗಳು ರಾಜ್ಯದಲ್ಲಿ ಅನೇಕ ಕಡೆಗಳಲ್ಲಿ ನಡೆದಿದ್ದು, ಅವು ಹೆಚ್ಚಿನ ಪ್ರಮಾಣದಲ್ಲಿ ಇನ್ನಷ್ಟು ಹೊರಬರಲಿವೆ ಎಂದು ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಧಾರವಾಡದಲ್ಲಿ ಮಂಗಳವಾರ ಮಾತನಾಡಿದ ಅವರು, ರಾಜ್ಯದಲ್ಲಿ ಅನೇಕ ಲವ್‌ ಜಿಹಾದ್‌ಗಳು ನಡೆದಿವೆ. ಹುಬ್ಬಳ್ಳಿ, ಧಾರವಾಡದಲ್ಲಿ ನಡೆದಿರುವ ಈ ಪ್ರಕರಣಗಳು ಭಿನ್ನ ಸ್ವರೂಪ ಪಡೆದುಕೊಂಡಿವೆ. ಹೀಗಾಗಿ ಸಮಾಜವನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತಿದ್ದೇವೆ. ಪಂಚಮಸಾಲಿ, ಬ್ರಾಹ್ಮಣ, ಕುರುಬ, ಮರಾಠ, ಸಾವಜಿ ಸಮಾಜದ ಹೆಣ್ಣು ಮಕ್ಕಳೂ ಲವ್ ಜಿಹಾದ್‌ಗೆ ಒಳಗಾಗಿದ್ದಾರೆ. ಇಂತಹ ಅನೇಕ ಪ್ರಕರಣ ತೆಗೆದುಕೊಂಡು ಪೊಲೀಸರ ಬಳಿ ಹೋದರೆ ಅದಕ್ಕೆ ಸ್ಪಂದನೆ ಸಿಕ್ಕಿಲ್ಲ. ಪೊಲೀಸರಿಗೆ ಯಾವುದಾದರೂ ಒತ್ತಡ ಇರಬೇಕು ಅಥವಾ ಬೇರೆ ಏನಾದರೂ ಅನಿಸಿರಬಹುದು. ಅದಕ್ಕಾಗಿ ಸ್ಪಂದನೆ ಸಿಗದ ಹಿನ್ನೆಲೆ ಪ್ರತಿಭಟನೆ ಮಾಡಿದ್ದೇವೆ. ಜಿಮ್‌ನಲ್ಲಿ ಹಿಂದೂ ಹೆಣ್ಣು ಮಕ್ಕಳನ್ನು ಏರೋಬಿಕ್ಸ್ ಮಾಡಿಸುತ್ತೇವೆ ಎಂದು ಹೇಳಿ ಭಿನ್ನ ವೀಡಿಯೋ ಮಾಡಿದ್ದನ್ನು ನಾವು ನೋಡಿದ್ದೇವೆ. ಅದಕ್ಕಾಗಿ ಹೆಣ್ಣು ಮಕ್ಕಳೇ ಈಗ ದೂರು ನೀಡುತ್ತಿದ್ದಾರೆ. ಅತ್ಯಂತ ಕೆಟ್ಟದಾಗಿ ಬ್ಲಾಕ್‌ಮೇಲ್ ಮಾಡುವ ಕೆಲಸ ನಡೆದಿದೆ, ಮುಂದಿನ ದಿನಗಳಲ್ಲಿ ಗಂಭೀರ ಪ್ರಕರಣಗಳು ಹೊರ ಬರಲಿವೆ. ಶ್ರೀಮಂತ ಗಂಡು ಮಕ್ಕಳನ್ನು ಹನಿಟ್ರ್ಯಾಪ್‌ಗೆ ಒಳಪಡಿಸಿ ದೊಡ್ಡ ಮೊತ್ತದ ಹಣ ಪೀಕಿದ ಪ್ರಕರಣ ಹೊರ ಬಂದಿವೆ. ಇದು ಹುಬ್ಬಳ್ಳಿ, ಧಾರವಾಡದ ಪೊಲೀಸರಿಗೆ ದೊಡ್ಡ ಚಾಲೆಂಜ್ ಇದೆ. ಹುಬ್ಬಳ್ಳಿ, ಧಾರವಾಡ ಯಾವಾಗಲೂ ಶಾಂತ. ಅಲ್ಲಲ್ಲಿ ಗಲಾಟೆ ನಡೆದಿದೆಯಾದರೂ ಇಷ್ಟು ದೊಡ್ಡ ಮಟ್ಟದಲ್ಲಿ ತನ್ನ ನೆಮ್ಮದಿ ಕಳೆದುಕೊಂಡಿಲ್ಲ. ಆ ಶಾಂತತೆಯನ್ನ ವಾಪಸ್‌ ತರುವ ಅಗತ್ಯ ಇದೆ. ಮುಂದೆ ಇನ್ನೂ ಹೆಚ್ಚಿನ ಪ್ರಕರಣ ಹೊರ ಬರಲಿವೆ.

ಅದಕ್ಕೆ ಇವತ್ತಿಂದಲೇ ತಯಾರಿ ಮಾಡಿಕೊಳ್ಳಲು ಕಾರ್ಯಕ್ರಮ ಮಾಡಿದ್ದೇವೆ. ಪ್ರತಿಭಟನೆ ಮಾಡುವುದರಲ್ಲಿ ಅರ್ಥ ಇಲ್ಲ, ಇದಕ್ಕೊಂದು ಪರಿಹಾರ ಹುಡುಕಬೇಕು. ಪೊಲೀಸರಿಗೆ ಕೇಳಿ ಸಾಕಾಗಿದೆ, ಸಮೀ‌ರ್ ಮುಲ್ಲಾನ ಮೊಬೈಲ್ ಹಿಂದೂ ಕಾರ್ಯಕರ್ತರು ವಶಕ್ಕೆ ಪಡೆದು ನೋಡಿದಾಗ ಅದರಲ್ಲಿ ಇರುವ ಚಿತ್ರ ಎಲ್ಲಾ ತರಿಸದೇ ಇದ್ದಿದ್ದರೆ, ಹಿಂದೆ ಅಣವೇಕ‌ರ್ ಪ್ರಕರಣ ಮುಚ್ಚಿದಂತೆ ಅದೇ ರೀತಿ ಏನು ಇಲ್ಲ ಎಂದು ಮುಚ್ಚಿ ಹಾಕುತ್ತಿದ್ದರು. ಅನಿವಾರ್ಯವಾಗಿ ಹಿಂದೂ ಸಮಾಜ ಇವರನ್ನು ತಾವೇ ಹುಡುಕಿ ಮೊಬೈಲ್‌ನಲ್ಲಿ ಇರೋದನ್ನು ನೋಡುವ ಸ್ಥಿತಿ ಬಂದಿದೆ. ಪೊಲೀಸರ ನಿಷ್ಕ್ರಿಯತೆ ಮತ್ತು ಗೃಹ ಇಲಾಖೆಯ ನಿಷ್ಕ್ರಿಯತೆ ತೋರಿಸುತ್ತಿದೆ. ಶಖುನಿ ಇದ್ದದ್ದು ಕೌರವರನ್ನು ನಾಶ ಮಾಡಲು ಎಂದಿದೆ. ಕಾಂಗ್ರೆಸ್ ನಾಶ ಮಾಡಲು ಮಲ್ಲಿಕಾರ್ಜುನ ಖರ್ಗೆ ಅಲ್ಲಿ ಸೇರಿದ್ದಾರೆ. ನಮಾಜ್ ಬಿಟ್ಟು ಎಂತಹ ಸಂದರ್ಭದಲ್ಲೂ ಯಾರೂ ಏಳಬಾರದು ಎಂದು ಖುರಾನ್‌ನಲ್ಲಿ ಇದೆ. ಖುರಾನ್ ಆದೇಶ ಮುಸಲ್ಮಾನರಿಗೆ ಇದೆ, ಅದರಲ್ಲಿ ನೀವು ಬಿಜೆಪಿ ಆರ್‌ಎಸ್‌ಎಸ್‌ನವರನ್ನು ಕಂಡರೆ ನಮಾಜ್ ಅರ್ಧಕ್ಕೆ ನಿಲ್ಲಿಸಿ ಕೊಲ್ಲಿ ಎನ್ನುವ ಸ್ಥಿತಿ ಅದು ಮುಸಲ್ಮಾನರನ್ನು ಭಡಕಾಯಿಸುವ ತಂತ್ರ ಎಂದು ಹೇಳಿದರು.

Tags:

error: Content is protected !!