ಬೆಳಗಾವಿ ಜಿಲ್ಲೆಯ ಶಿಕ್ಷಕರ ವರ್ಗಾವಣೆ ಮತ್ತು ಜನಗಣತಿ ಕಾರ್ಯಕ್ಕೆ ಸಂಬಂಧಿಸಿದಂತೆ ಇದ್ದ ದೊಡ್ಡ ಗೊಂದಲವೊಂದು ಈಗ ಬಗೆಹರಿದಿದೆ. ಜನಗಣತಿ ಕಾರ್ಯದ ನೆಪದಲ್ಲಿ ವರ್ಗಾವಣೆಗೊಂಡ ಶಿಕ್ಷಕರ ಬಿಡುಗಡೆಯನ್ನು ಮುಂದೂಡಿದ್ದ ಆದೇಶದಿಂದ ಶಿಕ್ಷಕರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಕುರಿತು ಶಿಕ್ಷಕರ ಸಂಘ ನೀಡಿದ ಮನವಿಗೆ ಜಿಲ್ಲಾಧಿಕಾರಿಗಳು ಪೂರಕವಾಗಿ ಸ್ಪಂದಿಸಿದ್ದು, ಶಿಕ್ಷಕರ ಮೊಗದಲ್ಲಿ ಮಂದಹಾಸ ಮೂಡಿದೆ.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮತ್ತು ಪ್ರೌಢ ಶಾಲಾ ಶಿಕ್ಷಕರ ಸಂಘ ಬೆಳಗಾವಿ ಘಟಕದ ವತಿಯಿಂದ ಈ ಕುರಿತಾದ ಮನವಿಯನ್ನು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.
ಜನಗಣತಿಗೆ ಸಂಬಂಧಿಸಿದಂತೆ ವರ್ಗಾವಣೆಗೊಂಡ ಮತ್ತು ಪದೋನ್ನತಿ ಪಡೆದ ಪ್ರಧಾನ ಗುರುಗಳನ್ನು ಮೇ 15 ರ ನಂತರ ಬಿಡುಗಡೆ ಮಾಡುವಂತೆ ಆದೇಶವನ್ನು ನೀಡಲಾಗಿತ್ತು. ಆದರೇ ಇದು ಶಿಕ್ಷಕರಿಗೆ ಅನಾನೂಕೂಲವಾಗಲಿದೆ. ವರ್ಗಾವಣೆಗೊಂಡವರು ಅವರ ಸ್ಥಳಕ್ಕೆ ಹೋಗಿ ಹಾಜರಾಗಿ, ಬಳಿಕ ಜನಗಣತಿಯ ಪ್ರಕ್ರಿಯೆಯನ್ನು ಶೇ. 100 ರಷ್ಟು ಪೂರ್ಣಗೊಳಿಸುವುದಾಗಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಬಿಡುಗಡೆ ಹಾಜರಾತಿ ಕ್ರಮವನ್ನು ಜಿಲ್ಲಾಧಿಕಾರಿಗಳು ತಕ್ಷಣ ಸ್ಪಂದಿಸಿದ್ದಾರೆ. ಈ ಹಿನ್ನೆಲೆ ಅವರಿಗೆ ಸಂಘದ ಜಿಲ್ಲಾಧ್ಯಕ್ಷ ಜಯಕುಮಾರ್ ಹೆಬಳಿ ಅವರು ಪ್ರಶಂಸೆಯನ್ನು ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷರಾದ ಜಯಕುಮಾರ ಹೆಬಳಿ, ಪ್ರಧಾನ ಕಾರ್ಯದರ್ಶಿ ರಮೇಶ ಗೋಣಿ, ಸಹಕಾರ್ಯದರ್ಶಿ ಕೆ ಎಸ್ ರಾಚಣ್ಣವರ, ಬಾಬು ಸೊಗಲನ್ನವರ, ಶಿವಾನಂದ ರೋಡ ಬಸಣ್ಣವರ,ಅದೃಶ್ಯ ಹೈಬತ್ತಿ, ಚಂದ್ರು ಕೋಲಕಾರ, ಮೈಲಾರ ಹೊರಕೇರಿ
ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಗಜಾನನ ಸೊಗಲನ್ನವರ
ಅಶೋಕ ಖೋತ ಜಿಲ್ಲಾ ಕಾರ್ಯದರ್ಶಿ
ಮಂಜುನಾಥ ಕಾಜಗಾರ ಅಧ್ಯಕ್ಷರು ಸವದತ್ತಿ
ಪ್ರವೀಣ ಹೊಸೂರ ಅಧ್ಯಕ್ಷರು ಬೆಳಗಾವಿ ನಗರ
ಸುರೇಶ ಏಣಿ ಅಧ್ಯಕ್ಷರು ರಾಮದುರ್ಗ
ಸದಾಶಿವ ಧೂಳಪ್ಪನವರ ಕಾರ್ಯದರ್ಶಿ
ಆನಂದ ಆಗನೂರ ರಾ.ಪ.ಸದಸ್ಯರು
ಮಹಾಂತೇಶ ಮುದ್ದನ್ನವರ ಕಾರ್ಯದರ್ಶಿ
ಉಪಸ್ಥಿತರಿದ್ದರು
