BELAGAVI

ಬೆಳಗಾವಿ ಆಟೋಗಳಿಗೆ ಶೀಘ್ರವೇ ಐಡಿ ಕಾರ್ಡ್‌: ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಮಹತ್ವದ ಸಭೆ!

Share

ಬೆಳಗಾವಿ ನಗರದಲ್ಲಿ ಸಂಚಾರ ಮಾಡುವ ಅಧಿಕೃತ ಆಟೋಗಳಿಗೆ ಗುರುತಿನ ಚೀಟಿ ಅಳವಡಿಸುವ ಕುರಿತು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಆಟೋ ಚಾಲಕರ ಸಭೆ ಕರೆದಿದ್ದ ಭೂಷಣ್ ಬೋರಸೆ ಗುರುತಿನ ಚೀಟಿ ಅಳವಡಿಸಿಕೊಳ್ಳಲು ಸುಧೀರ್ಘ ಸಭೆ ನಡೆಸಿದರು.

ನಗರದಲ್ಲಿ ಸಂಚರಿಸುವ ಆಟೋಗಳಿಗೆ ಐಡಿ ಕಾಡ್೯ ಅಳವಡಿಸುವುದು ಕಡ್ಡಾಯವಾಗಿದೆ. ಇದರಿಂದ ಆಟೋ ಚಾಲಕರಿಗೆ ಅನುಕೂಲವಾಗಲಿದೆ ಎಂದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆಟೋ ಚಾಲಕ ವಾಸು ಮಾತನಾಡಿ, ನಗರ ಪೊಲೀಸ್ ಆಯುಕ್ತರು ಆಟೋ ಚಾಲಕರ ಸಭೆ ಕರೆದು ಐಡಿ ಕಾಡ್೯ ಕೊಡುವ ಕುರಿತು ಚಿಂತನೆ ನಡೆಸಿದ್ದಾರೆ. ಇದಕ್ಕೆ ನಾವು ಎಲ್ಲ ಚಾಲಕರೊಂದಿಗೆ ಮಾತನಾಡಿಕೊಂಡು ಈ ಕುರಿತು ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದ್ದೇವೆ ಎಂದರು.

ನಗರದಲ್ಲಿ ಉದ್ಭವವಾಗಿರುವ ಪಿಎನ್ ಜಿ ಗ್ಯಾಸ್ ಸಮಸ್ಯೆ ಕುರಿತು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ಕರೆಯುವುದಾಗಿ ತಿಳಿಸಿದ್ದಾರೆ. ನಗರದಲ್ಲಿ ಎರಡು ಪಂಪ್ ಸರಕಾರದ್ದ ಇವೆ. ಖಾಸಗಿ ಪಂಪ್ ನವರು ಹೆಚ್ಚಿನ ದರಕ್ಕೆ ಗ್ಯಾಸ್ ಪೂರೈಸುತ್ತಿದ್ದಾರೆ. ಇದನ್ನು ತನಿಖೆ ಮಾಡಿ ಆಟೋ ಚಾಲಕರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದರು.
ಆಟೋ ಚಾಲಕ ಬಸವರಾಜ ಮಾತನಾಡಿ, ಚಿತ್ರದುರ್ಗ, ದಾವಣಗೆರೆ ಹಾಗೂ ಹಾವೇರಿಯಲ್ಲಿ ಆಟೋಗಳಿಗೆ ಗುರುತಿನ ಚೀಟಿ ಅಳವಡಿಸಿದ್ದಾರೆ. ಅದೇ ಮಾದರಿಯಲ್ಲಿ ಬೆಳಗಾವಿಯಲ್ಲಿಯೂ ಅಳವಡಿಸುತ್ತಾರಂತೆ ಅದರ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದಿದ್ದೇವೆ ಎಂದರು.

Tags:

error: Content is protected !!