ಗಂಡು ಮೆಟ್ಟಿದ ನಾಡು, ವಾಣಿಜ್ಯ ನಗರಿ ಎಂದೆಲ್ಲ ಕರೆಯಿಸಿಕೊಳ್ಳುವ ಹುಬ್ಬಳ್ಳಿಯಲ್ಲಿ ಈಗ ಲವ್ ಜಿಹಾದ್ ಪ್ರಕರಣಗಳ ಸದ್ದು ಜೋರಾಗಿದೆ. ಎರಡನೇ ಲವ್ ಜಿಹಾದ್ ಆರೋಪ ಪ್ರಕರಣಕ್ಕೆ ಕುರಿತು ಸಂತ್ರಸ್ತೆಯ ಹಳೇ ವಿಡಿಯೋ ಹೇಳಿಕೆ ಈಗ ವೈರಲಾಗಿದ್ದು, ಪ್ರಕರಣಕ್ಕೆ ಒಂದರ ಮೇಲೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ.

ವಾಣಿಜ್ಯ ನಗರಿ ಹಾಗೂ ಗಂಡು ಮೆಟ್ಟಿದ ನಾಡು ಎಂದೆ ಖ್ಯಾತಿ ಪಡೆದುಕೊಂಡಿರುವ ಹುಬ್ಬಳ್ಳಿಯಲ್ಲಿ ಈಗ ಲವ್ ಜಿಹಾದ ಪ್ರಕರಣಗಳು ಸದ್ದು ಮಾಡುತ್ತಿವೆ. ಹುಬ್ಬಳ್ಳಿ ಕುಸುಗಲ್ ರೋಡ ಯುವತಿಯು, ನಗರದ ಕಮರಿಪೇಟ್ ಗವಿ ಓಣಿ ನಿವಾಸಿ ಮುಫೀಸ್ ಮಿಯಾನ್ನವರ ವಿರುದ್ಧ ಲವ್ ಜಿಹಾದ ಆರೋಪ ಮಾಡಿ, ಹುಬ್ಬಳ್ಳಿ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಭಾನುವಾರ ದೂರು ದಾಖಲು ಮಾಡಿದ್ದಾರೆ. ಈ ಪ್ರಕರಣ ದಾಖಲಾಗಿ 12 ಗಂಟೆ ಕಳೆವುಷ್ಟರಲ್ಲಿ ಈಗ ಸಂತ್ರಸ್ತೆ ಯುವತಿಯ ಹಳೇ ವಿಡಿಯೋ ಹೇಳಿಕೆ ವೈರಾಲಾಗಿದ್ದು, ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿಸಿದೆ. ಇನ್ನೂ ಹಳೇ ವಿಡಿಯೋ ವೈರಲ್ ಕುರಿತು ಸ್ಪಷ್ಟನೆ ನೀಡಿರುವ ಸಂತ್ರಸ್ತೆ ಯುವತಿ. ಅದೂ ಒಂದು ವರ್ಷದ ಹಿಂದಿನ ವಿಡಿಯೋ ಆಗಿದೆ. ಅದನ್ನು ಮುಫೀಸ್ ಹಾಗೂ ಸ್ನೇಹಿತರ ಲೈಂಗಿಕ ದೌರ್ಜನ್ಯ ವಿಡಿಯೋ ಇಟ್ಟುಕೊಂಡು ಬೆದರಿಕೆ ಹಾಕಿ ಮಾಡಿಸಿದ್ದಾರೆ. ಜತೆಗೆ ಈ ಹಳೇ ವಿಡಿಯೋ ವೈರಲಾಗುತ್ತಿರುವುದರ ಹಿಂದೆ ಹುಬ್ಬಳ್ಳಿ ಕಾಂಗ್ರೆಸ್ ಯುವ ಮುಖಂಡನ ಕೈವಾಡವಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾಳೆ. ಜತೆಗೆ ಇಷ್ಟೇಲ್ ನನಗೆ ಸಮಸ್ಯೆಗಳಾಗಿದ್ದರು, ಒಂದೇ ಒಂದು ದಿನ ಯುವ ನಾಯಕ ಕೇಳಲಿಲ್ಲ. ಈಗ ನಾನು ನನಗೆ ಆದ ಅನ್ಯಾಯದ ಕುರಿತು ಕಂಪ್ಲೀಟ್ ಕೊಟ್ಟ ಕೆಲವೆ ಗಂಟೆಗಳಲ್ಲಿ ಹಳೇ ವಿಡಿಯೋಗಳನ್ನು ವೈರಲ ಮಾಡುತ್ತಿದ್ದಾರೆ. ಕೈ ಪಕ್ಷದ ನಾಯಕ ನಿಮ್ಮ ತಂಗಿಗೆ ಇದೇ ಅನ್ಯಾಯ ನಡೆದಿದ್ದರೆ ಸುಮ್ನಿರುತ್ತಿದ್ದೇಯಾ ಎಂದು ಸಂತ್ರಸ್ತೆ ಯುವತಿ ಪ್ರಶ್ನೆ ಮಾಡಿದ್ದಾಳೆ.
ಇನ್ನೂ ವೈರಲಾದ ಹಳೇ ವಿಡಿಯೋದಲ್ಲಿ ಸಂತ್ರಸ್ತೆ ಯುವತಿಯು ನಮ್ಮ ಕುಟುಂಬದಲ್ಲಿ ಮದುವೆ ವಿಷಯ ತಿಳಿಸದೆ. ಮುಫೀಸ್ ಮಿಯಾನ್ನವರ ನಾನು ಕಳೆದ ವರ್ಷ ಧಾರವಾಡ ರೆಜಿಸ್ಟರ್ ಕಚೇರಿಯಲ್ಲಿ ಮದುವೆಗೆ ಮುಂದಾಗಿದ್ವಿ. ಈ ವಿಚಾರವಾಗಿ ಮುಫೀಸ್ ಅರ್ಜಿ ಹಾಕಿದ್ದರು. ಅರ್ಜಿ ಹಾಕಿದ ನಂತರ ಮೊದಲ ಸಹಿ ಮಾಡಲಾಯಿತು. ಇದರ ಮಧ್ಯ ವಿಷಯ ಆರ್ಎಸ್ಎಸ್ನ ಗಂಗಾಧರ, ಮಂಜುನಾಥ ಮತ್ತು ಇನ್ನೋರ್ವರಿಗೆ ತಿಳುದುಕೊಂಡು ನಮ್ಮ ಮನೆ ಪತ್ತೆ ಮಾಡಿ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದರು. ಇದರ ನಂತರ ನನಗೆ ಕೌನ್ಸಲಿಂಗ್ ಮಾಡಿ ಕೆಲವು ವಿಚಾರ ತಿಳುವಳಿಕೆ ನೀಡಿದರು. ಆದರೂ ನಾನು ಮುಫೀಸ್ ಕುಟುಂಬಸ್ಥರ ವಿರೋಧ ಮಧ್ಯ ಮದುವೆಗೆ ಮುಂದಾಗಿದ್ವಿ. ನಾವಿಬ್ಬರು ಸಾಯುತ್ತೇವೆ ಅಂದ್ಮೇಲೆ ಮುಫೀಸ್ ಕುಟುಂಬಸ್ಥರು ಒಪ್ಪಿಗೆ ಸೂಚಿಸಿ ಸಹಿ ಹಾಕಲು ಬರುವುದಾಗಿ ಹೇಳಿದ್ದರು ಎಂಬ ಎರಡು ವಿಡಿಯೋಗಳು ಈಗ ದೂರು ದಾಖಲಾದ ಬಳಿಕ ವೈರಲಾಗಿವೆ.
ಒಟ್ಟನಲ್ಲಿ ನೇಹಾ ಹಿರೇಮಠ ಲವ್ ಜಿಹಾದ್ ಹತ್ಯೆಯ ಹತ್ಯೆ ಘಟನೆಯ ನಂತರ ಶಾಂತವಾಗಿದ್ದ ಹುಬ್ಬಳ್ಳಿಯಲ್ಲಿ ಈಗ ಒಂದಾದ್ಮೇಲೊಂದು ಲವ್ ಜಿಹಾದ್ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಒಂದೇ ವಾರದಲ್ಲಿ ಎರಡು ಲವ್ ಜಿಹಾದ ಪ್ರಕರಣಗಳು ದಾಖಲಾಗಿದ್ದು ಹುಬ್ಬಳ್ಳಿಯ ಜನರನ್ನು ಬೆಚ್ಚಿಬಿಳಿಸಿದೆ. ಸದ್ಯ ಕೇಶ್ವಾಪುರ ಪೊಲೀಸ ಠಾಣೆಯಲ್ಲಿ ಮುಫೀಸ್ ವಿರುದ್ಧ ಸಂತ್ರಸ್ತೆ ದೂರು ದಾಖಲುಸಿದ್ದು, ಪೊಲೀಸರ್ ನಿಷ್ಪಕ್ಷಪಾತ ತನಿಖೆಯ ಬಳಿಕ ಅಸಲಿ ಸತ್ಯ ಏನು ಎಂಬುವುದು ಹೊರ ಬರಬೇಕಾಗಿದೆ.
