BELAGAVI

ಬೆಳಗಾವಿಯಲ್ಲಿ ಭೂಮಾಪಕರ ಬೃಹತ್ ಗರ್ಜನೆ: ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ ಆಗ್ರಹ; ರೈತ ಸಂಘದಿಂದಲೂ ಸಾಥ್!

Share

ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂಮಾಪಕರ ಸಂಘದ ವತಿಯಿಂದ ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ ಇಂದು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆಗೆ ರೈತ ಸಂಘ ಕೂಡ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗಿಯಾಯಿತು.

ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದು ಆಗ್ರಹಿಸಿ ಇಂದು ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂಮಾಪಕರ ಸಂಘದ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ರೈತ ಸಂಘ ಕೂಡ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿ ಘೋಷಣೆಗಳನ್ನು ಕೂಗಿತು. ನಗರ ರಾಣಿ ಚೆನ್ನಮ್ಮ ವೃತ್ತದಲ್ಲಿ ಕೆಲ ಕಾಲ ಧರಣಿಯನ್ನು ನಡೆಸಲಾಯಿತು.

ಈ ವೇಳೆ ಮಾತನಾಡಿದ ರೈತ ಹೋರಾಟಗಾರ ಶಶಿಕಾಂತ ಗುರುಜೀ ಅವರು. ಗ್ಯಾರಂಟಿಗಳಿಂದ ರಾಜ್ಯ ಹಾಳಾಗುತ್ತಿದೆ. ಅವುಗಳನ್ನು ಸ್ಥಗಿತಗೊಳಿಸಿ ಭೂಮಾಪಕರ ಖಾಯಂಮಾತಿಯನ್ನು ಮಾಡಬೇಕು. ಸರ್ವೆ ಕೈಗೊಂಡ ಭೂಮಾಲೀಕರಿಗೆ ಕೇವಲ 3750 ರಿಂದ 5000 ರೂಪಾಯಿ ಸಿಗುತ್ತದೆ. ಇದರಲ್ಲಿ ಬದುಕು ಸಾಗಿಸುವುದು ಹೇಗೆ ಎಂದು ಪ್ರಶ್ನಿಸಿದರು. 224 ಶಾಸಕರು 3 ಲಕ್ಷ ರೂಪಾಯಿ ವೇತನವನ್ನು ಸಿಎಂ ಖಾತೆಗೆ ಹಾಕಿ , ಭೂಮಾಪಕರಿಗೆ 10-15 ಸಾವಿರ ರೂಪಾಯಿ ವೇತನ ನೀಡಿ. 2 ಲಕ್ಷ 86 ಸಾವಿರ ಖಾಲಿ ಹುದ್ಧೆಗಳನ್ನು ನೇಮಕ ಮಾಡಲಿ. ಕೆಪಿಎಸಸಿ ಭ್ರಷ್ಟಾಚಾರದ ತನಿಖೆ ನಡೆಸಿ ಅಕ್ರಮ ಹಣವನ್ನು ಮರಳಿ ಪಡೆದು ಭೂಮಾಪಕರಿಗೆ ವೇತನ ನೀಡಿ. ನಮ್ಮ ಬೇಡಿಕೆ ಶೀಘ್ರದಲ್ಲೇ ಈಡೇರದಿದ್ದರೇ, ಬೆಂಗಳೂರು ಬಂದ್ ಮಾಡಿ ಹೋರಾಟ ನಡೆಸಲಾಗುವುದಾಗಿ ಎಚ್ಚರಿಕೆಯನ್ನು ನೀಡಿದರು.

ಸಂಘದ ಗೌರವಾಧ್ಯಕ್ಷ ಭಾರ್ಗವ ಅವರು ಸುಮಾರು 25 ವರ್ಷದಿಂದ ಪರವಾನಗಿ ಭೂಮಾಪಕರಾಗಿ ಸರ್ಕಾರದ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಯಾವುದೇ ಸೇವಾಭದ್ರತೆ ನೀಡದೇ, ಜೀತದಾಳಾಗಿಸಿದೆ. ಯಾವುದೇ ಸವಲತ್ತುಗಳನ್ನು ನೀಡದೇ ಅನ್ಯಾಯ ಮಾಡುತ್ತಿದೆ. ಇಲಾಖೆಯೂ ಸರ್ಕಾರದ ದಾರಿ ತಪ್ಪಿಸಿದೆ ಎಂಬ ಅನುಮಾನಗಳು ಕಾಡುತ್ತಿದೆ ಎಂದು ಆರೋಪಿಸಿದರು.

ರಾಯಚೂರು ತಾಲೂಕಿನ ಮಹಿಳಾ ಭೂಮಾಪಕರು ಮಾತನಾಡಿ, ಸರ್ಕಾರಿ ಭೂಮಾಪಕರಂತೆ ಸಮಾನವಾಗಿ ನಾವು ಕೆಲಸ ಮಾಡುತ್ತಿದ್ದು, ನಮಗೂ ಸಮಾನ ಕೆಲಸಕ್ಕೆ ಸಮಾನ ವೇತನವನ್ನು ನೀಡಬೇಕು. ರಜೆ ಪಡೆದರೇ, ಮತ್ತೇ ಪರೀಕ್ಷೆ ಬರೆದು ಪರವಾನಗಿ ಪಡೆಯುವ ಪರಿಸ್ಥಿತಿ ಎದುರಾಗಿದೆ. ಮಹಿಳಾ ಭೂಮಾಪಕರು ಇದರಲ್ಲಿದ್ದು, ಯಾವುದೇ ಭದ್ರತೆ ಸುರಕ್ಷತೆಯಿಲ್ಲ, ವೈದ್ಯಕೀಯ ಸೌಲಭ್ಯಗಳು ದೊರೆಯುತ್ತಿಲ್ಲ ಎಂದರು.

ಈ ಸಂದರ್ಭದಲ್ಲಿ ರಾಜ್ಯದ ವಿವಿಧೆಡೆಯ ಪರವಾನಗಿ ಭೂಮಾಪಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.

ಇನ್ನು ರೈತ ಸಂಘದ ಪ್ರಮುಖ ಚೂನಪ್ಪ ಪೂಜೇರಿ ಅವರು ಭೂಮಾಪಕರ ಪ್ರತಿಭಟನೆಗೆ 31 ಜಿಲ್ಲೆಯ ರೈತ ಸಂಘದ ಬೆಂಬಲ ಸದಾ ಇರಲಿದೆ. ಉಪಚುನಾವಣೆಯೊಳಗೆ ಸಿಎಂ ಅವರು ಭೂಮಾಪಕರಿಗೆ ಒಳ್ಳೆಯ ಸಂದೇಶವನ್ನು ನೀಡಬೇಕು. ಇಲ್ಲದಿದ್ದರೇ, ಬೃಹತ್ ಉಗ್ರ ಹೋರಾಟವನ್ನು ಬೆಂಗಳೂರಿನಲ್ಲಿ ನಡೆಸಲಾಗುವುದು. ಕಳೆದ 23 ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿರುವ ಭೂಮಾಪಕರಿಗೆ ಸರ್ಕಾರ ನ್ಯಾಯವನ್ನು ಒದಗಿಸಬೇಕೆಂದರು.

Tags:

error: Content is protected !!