Bagalkot

ಬಾಗಲಕೋಟೆ ಬೈಎಲೆಕ್ಷನ್ ಅಖಾಡಕ್ಕೆ ಜಮೀರ್ ಎಂಟ್ರಿ: ವಾಂಬೆ ಕಾಲನಿಯಲ್ಲಿ ಕಾಂಗ್ರೆಸ್ ಪರ ಸಚಿವರ ‘ಕೈ’ ಅಬ್ಬರ!

Share

ಬಾಗಲಕೋಟೆ ಉಪಚುನಾವಣೆಯ ಕಣ ಈಗ ಹೈವೋಲ್ಟೇಜ್ ಪಡೆದುಕೊಂಡಿದೆ. ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಪರವಾಗಿ ಸಚಿವ ಜಮೀರ್ ಅಹ್ಮದ್ ಇಂದು ಅಖಾಡಕ್ಕಿಳಿದಿದ್ದು, ಅಲ್ಪಸಂಖ್ಯಾತ ಮತಗಳ ಭದ್ರಕೋಟೆಯಲ್ಲಿ ಮತಬೇಟೆ ಆರಂಭಿಸಿದ್ದಾರೆ. ಅದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

ಬಾಗಲಕೋಟೆ ಉಪಚುನಾವಣೆಯ ಹಿನ್ನೆಲೆಯಲ್ಲಿ ನವನಗರದ ವಾಂಬೆ ಕಾಲನಿಯಲ್ಲಿ ಇಂದು ಸಚಿವ ಜಮೀರ್ ಅಹ್ಮದ್ ಅಬ್ಬರದ ಪ್ರಚಾರ ನಡೆಸಿದರು. ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಪರವಾಗಿ ಮತಯಾಚಿಸಿದ ಸಚಿವರು, ಮುಸ್ಲಿಂ ಸಮುದಾಯದ ಪ್ರಮುಖ ನಾಯಕರೊಂದಿಗೆ ಸೇರಿ ಬೃಹತ್ ರೋಡ್ ಶೋ ನಡೆಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿದರು. ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಮತದಾರರು ಹೆಚ್ಚಾಗಿರುವ ಈ ಭಾಗದಲ್ಲಿ ಜಮೀರ್ ಅವರ ಎಂಟ್ರಿ ಕಾಂಗ್ರೆಸ್ ಪಾಳೆಯದಲ್ಲಿ ಹೊಸ ಸಂಚಲನ ಮೂಡಿಸಿದೆ.

ವಾಂಬೆ ಕಾಲೋನಿಯ ಮನೆ ಮನೆಗೆ ತೆರಳಿ ಮತಯಾಚಿಸಿದ ಸಚಿವರಿಗೆ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು. ಈ ವೇಳೆ ಮಾತನಾಡಿದ ಅವರು, ಸರ್ಕಾರದ ಜನಪರ ಯೋಜನೆಗಳು ಕೈ ಹಿಡಿಯಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಪ್ರಮುಖ ಮತಬ್ಯಾಂಕ್ ಆಗಿರುವ ವಾಂಬೆ ಕಾಲೋನಿಯ ಮತಗಳನ್ನು ಸೆಳೆಯಲು ಜಮೀರ್ ಅಹ್ಮದ್ ನಡೆಸಿದ ಈ ರೋಡ್ ಶೋ, ಎದುರಾಳಿ ಪಾಳೆಯದಲ್ಲಿ ನಡುಕ ಹುಟ್ಟಿಸಿದ್ದು, ಚುನಾವಣೆ ಕಣ ಮತ್ತಷ್ಟು ರಂಗೇರುವಂತೆ ಮಾಡಿದೆ.

Tags:

error: Content is protected !!