Hukkeri

ಹುಕ್ಕೇರಿ ಬಸ್ ನಿಲ್ದಾಣ ಹತ್ತಿರ ಪುರುಷನ ಶವ ಪತ್ತೆ.

Share

ಹುಕ್ಕೇರಿ ನಗರದ ಹೋಸ ಬಸ್‌ ನಿಲ್ದಾಣದ ಹತ್ತಿರ ಸುಮಾರು 45 ವರ್ಷದ ಪುರುಷನ ಶವ ಪತ್ತೆಯಾಗಿದೆ.
ಬಡಕುಂದ್ರಿ ಗ್ರಾಮದ ಶಂಕರ ಬಡಿಗೇರ ಎಂಬ ಯುವಕ ಟೇಲರಿಂಗ ಕೇಲಸ ಮಾಡುತ್ತಿದ್ದನು ಎನ್ನಲಾಗಿದೆ,ಕಳೆದ ಹಲವಾರು ದಿನದಿಂದ ಮದ್ಯದ ಅಮಲಿನಲ್ಲಿ ಹುಕ್ಕೇರಿ ಬಸ್ ನಿಲ್ದಾಣದಲ್ಲಿ ವಾಸವಾಗಿದ್ದನು ಎನ್ನಲಾಗುತ್ತಿದೆ.
ಕಳೆದ ರಾತ್ರಿ ವಿಪರೀತ ಮದ್ಯ ಸೇವನೆ ಮಾಡಿ ಮೃತ ಹೊಂದಿರ ಬಹುದು ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಹುಕ್ಕೇರಿ ಪೋಲಿಸರು ಆಗಮಿಸಿ ಮೃತ ದೇಹವನ್ನು ಶವಾಗಾರಕ್ಕೆ ರವಾನಿಸಿದ್ದಾರೆ.
ಪೋಲಿಸರು ಕುಟುಂಬಸ್ಥರ ದೂರಿನನ್ವಯ ತನಿಖೆ ನಡೆಸಿ ಸಾವಿಗೆ ಕಾರಣ ತಿಳಿಯಬಹುದಾಗಿದೆ.

Tags:

error: Content is protected !!