BELAGAVI

ಬೆಳಗಾವಿ ಗ್ರಾಮೀಣ ಠಾಣೆಗೆ ಯಲ್ಲಮ್ಮನ ಭಕ್ತರ ಮುತ್ತಿಗೆ: ಪಿಡಿಓ ವಿರುದ್ಧ ‘ಉಧೋ ಉಧೋ’ ಎನ್ನುತ್ತಾ ಭಕ್ತರ ಆಕ್ರೋಶ!

Share

ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ತೆರಳಿದ್ದ ಭಕ್ತರಿಗೆ ವಾಟರ್ ಟ್ಯಾಂಕರ್ ವಿಚಾರದಲ್ಲಿ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ನಾಗೇನಹಟ್ಟಿ ಗ್ರಾಮದ ಪಿಡಿಓ ಮತ್ತು ಪೊಲೀಸರ ವರ್ತನೆಯನ್ನು ಖಂಡಿಸಿ, ನೂರಾರು ಭಕ್ತರು ನೇರವಾಗಿ ಗ್ರಾಮೀಣ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.

ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ನಾಗೇನಹಟ್ಟಿ ಗ್ರಾಮದ ಶ್ರೀ ರೇಣುಕಾ ಯಲ್ಲಮ್ಮಾದೇವಿಯ ಭಕ್ತರು ವಡಗಾಂವನಲ್ಲಿರುವ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಉಧೋ ಉಧೋ ಎನ್ನುತ್ತ ವಿಶೇಷವಾಗಿ ಪ್ರತಿಭಟಿಸಿದರು.

ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮನ ದವನ ಹುಣ್ಣಿಮೆ ಜಾತ್ರೆಗೆ ತೆರಳುವ ಭಕ್ತರು ಕುಡಿಯುವ ನೀರಿಗಾಗಿ ವಾಟರ್ ಟ್ಯಾಂಕರ್ ತೆಗೆದುಕೊಂಡು ಹೋಗುತ್ತೇವೆಂದು ಹೇಳಿದಾಗ ಗ್ರಾಮದ ಅಭಿವೃದ್ಧಿ ಅಧಿಕಾರಿಗಳು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಆದರೇ, ಮಾರನೇ ದಿನ ಬಂದ ಪಿಡಿಓ ಗ್ರಾಮೀಣ ಠಾಣೆಗೆ ಬಂದು ತಕರಾರು ಮಾಡಿದ್ದು, 1 ಗಂಟೆಯೊಳಗೆ ಟ್ಯಾಂಕರ್ ಮರಳಿ ನೀಡಬೇಕೆಂದು ಒತ್ತಡ ಹೇರಿದ್ದಾರೆ. ಈ ಹಿನ್ನೆಲೆ ಗ್ರಾಮೀಣ ಪೊಲೀಸರು 1 ಗಂಟೆಯೊಳಗೆ ಟ್ಯಾಂಕರ್ ಮರಳಿ ನೀಡದಿದ್ದರೇ, ಒಳಗೆ ಹಾಕುತ್ತೇವೆಂದು ಗ್ರಾಮದ ಕೆಲ ಜನರಿಗೆ ಫೋನ್ ಕರೆ ಮಾಡಿ ಗದರಿಸಿದ್ದಾರೆ. ಪೊಲೀಸರ ನೀತಿಯನ್ನು ಖಂಡಿಸಿ ಯಲ್ಲಮ್ಮನಗುಡ್ಡದಿಂದ ನೇರವಾಗಿ ಭಕ್ತರು ಗ್ರಾಮೀಣ ಠಾಣೆಗೆ ಭೇಟಿಗೆ ನೀಡಿದ್ದೇವೆ. ಮೊದಲೂ ಅನುಮತಿ ನೀಡಿ ನಂತರ ದೂರು ದಾಖಲಿಸಿದ ಸಂಬಂಧಿಸಿದ ಪಿಡಿಓ ವಿರುದ್ಧ ಕ್ರಮಕೈಗೊಂಡು ಸೇವೆಯಿಂದ ವಜಾಗೊಳಿಸಬೇಕೆಂದು ಧನಂಜಯ ಜಾಧವ್ ಆಗ್ರಹಿಸಿದರು.

ಈ ಸಂದರ್ಭದಲ್ಲಿ ನಾಗೇನಹಟ್ಟಿ ಗ್ರಾಮದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.

Tags:

error: Content is protected !!