ಈ ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಬಿಸಿಲಿನ ತಾಪ ತಣಿಸಿಕೊಳ್ಳಲು ಜನರು ಈಜುಕೊಳದತ್ತ ಮುಖ ಮಾಡಿದ್ದಾರೆ. ಸರ್ಕಾರದಿಂದ ನಿರ್ಮಿಸಿದ ಈ ಈಜುಕೊಳದಲ್ಲಿ ಪುಟ್ಟ ಮಕ್ಕಳು ಸೇರಿದಂತೆ ಯುವಕ ಯುವತಿಯರು ಸಹಿತ ಹೆಚ್ಚಿನ ಸಂಖ್ಯೆಯಲ್ಲಿ ಈಜ ಕೊಳದತ್ತ ಆಗನಿಸುತ್ತಿದ್ದಾರೆ. ಈ ಕುರಿತಾದ ಒಂದು ಕಂಪ್ಲೀಟ್ ವರದಿ ಇಲ್ಲಿದೆ ನೋಡಿ…
ಹೌದು ವಿಜಯಪುರ ನಗರದ ಕನಕದಾಸ ಬಡಾವಣೆಯಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಿಂದ ಹೈಟೆಕ್ ಈಜುಕೊಳ ನಿರ್ಮಿಸಿದ್ದು, ಫೆಬ್ರವರಿ ತಿಂಗಳಿಂದಲೇ ಬಿಸಿಲು ಆರಂಭವಾಗಿರೋ ಹಿನ್ನೆಲೆಯಲ್ಲಿ ಈಜುಕೊಳಕ್ಕೆ ಹೆಚ್ಚಿನ ಸಂಖ್ಯೆಯ ಜನರು ಆಗಮಿಸುತ್ತಿದ್ದಾರೆ. ಪ್ರತಿ ದಿನ 200 ಕ್ಕೂ ಹೆಚ್ಚು ಜನ ಈಜುಕೊಳಕ್ಕೆ ಬರ್ತಿದ್ದು, ಈಜುಕೊಳಕ್ಕೆ ಆಗಮಿಸುವ ಮಕ್ಕಳಿಗೆ ತಿಂಗಳಿಗೆ 600ದರ, ವಯಸ್ಕರಿಗೆ 1200, ಸಾಧಕ ಕ್ರೀಡಾಪಟುಗಳಿಗೆ 1200 ದರ ನಿಗದಿ ಮಾಡಲಾಗಿದೆ…
ಈ ಹೈಟೆಕ್ ಈಜುಕೊಳದಲ್ಲಿ ಸರ್ಕಾರಿ ನೌಕರರಿಗೂ 600 ದರ ನಿಗದಿ ಮಾಡಿದ್ದಾರೆ. ನೌಕರರಿಗೆ ಹೆಚ್ಚಿನ ದರ ನಿಗದಿಪಡಿಸಲಿ ಸಾಧಕ ಕ್ರೀಡಾಪಟುಗಳಿಗೆ ರಿಯಾಯಿತಿ ದರ ನೀಡಬೇಕು, ಇನ್ನು ಈಜುಕೊಳದಲ್ಲಿ ನುರಿತ ಅರ್ಹ ತರಬೇತಿದಾರರಿಲ್ಲ. ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ತರಬೇತಿದಾರರ ನೇಮಕವಾಗೇಕು ಎಂದು ಜನರು ಆಗ್ರಹಿಸಿದ್ದಾರೆ. ಇನ್ನು ಬೇಸಿಗೆ ಹಿನ್ನೆಲೆಯಲ್ಲಿ ಮಕ್ಕಳನ್ನು ಈಜುಕೊಳಕ್ಕೆ ಕರೆತಂದು ಪೋಷಕರು ಮಸ್ತ್ ಎಂಜಾಯ್ ಮಾಡುತ್ತಿದ್ದಾರೆ. ಇಷ್ಟು ದಿನ ಶಾಲೆಗಳಲ್ಲಿ ಓದಿನಲ್ಲಿದ್ದ ಮಕ್ಕಳು ಈಜುಕೊಳದಲ್ಲಿ ಈಜಾಡಿ ಮಾನಸಿಕ ದೈಹಿಕ ಒತ್ತಡ ನಿವಾರಣೆಗೆ ಸಹಕಾರಿ ಆಗುತ್ತಿದೆ ಎಂದು ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ. ವಿಜಯಪುರ ನಗರದಲ್ಲಿ ಖಾಸಗಿ ಈಜುಕೊಳದ ಸಂಖ್ಯೆಯೂ ಹೆಚ್ಚಿದೆ. ಕಡಿಮೆ ದರ ಅನುಕೂಲಕರ ವಾತಾವರಣ, ಉತ್ತಮವಾಗಿ ಈಜುಕೊಳ ನಿರ್ವಹಣೆ ಮಾಡುತ್ತಿದ್ದು, ನೀರು ನಿರ್ವಹಣೆ, ಸೂಕ್ತ ಭದ್ರತೆ ಜೊತೆಗೆ ಮಕ್ಕಳಿಗೆ ಪ್ರತ್ಯೇಕ ಈಜು ಕೊಳವಿದೆ…
ಒಟ್ಟಿನಲ್ಲಿ ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಾದ ಕಾರಣ ಬಿಸಿಲಿಗೆ ಬೇಗೆ ತಣಿಸಿಕೊಳ್ಳಲು ಜನರು ಸ್ವಿಮ್ಮಿಂಗ್ ಪೂಲ್ ಮೊರೆ ಹೊಗಿದ್ದಾರೆ. ಆದರೆ ಯುವಜನ ಮತ್ತು ಕ್ರೀಡಾ ಇಲಾಖೆಯಿಂದ ನಡೆಯುವ ಸ್ವೀಮ್ಮಿಂಗ್ ಪೂಲ್ ನಲ್ಲಿ ಪರಿಣತಿ ಈಜು ತರಬೇತು ದಾರರ ನೇಮಕ ಮಾಡಬೇಕಾಗಿದೆ.
