BELAGAVI

ಇಮ್ಮಾಕುಲೇಟ್ ಕಾನ್ಸೆಪ್ಶನ್ ಚರ್ಚ್‌ನಲ್ಲಿ ‘ಲೈವ್ ಪ್ಯಾಶನ್ ಆಫ್ ಕ್ರೈಸ್ಟ್’ ಪ್ರದರ್ಶನ

Share

ಬೆಳಗಾವಿಯ ಐತಿಹಾಸಿಕ ಇಮ್ಮಾಕುಲೇಟ್ ಕಾನ್ಸೆಪ್ಶನ್ ಚರ್ಚ್ ಆವರಣದಲ್ಲಿ ಯೇಸುಕ್ರಿಸ್ತರ ಜೀವನದ ಕೊನೆಯ ಘಟ್ಟಗಳನ್ನು ಸಾರುವ ‘ಲೈವ್ ಪ್ಯಾಶನ್ ಆಫ್ ಕ್ರೈಸ್ಟ್’ ಪ್ರದರ್ಶನವು ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿತು. ಚರ್ಚ್‌ನ ಧರ್ಮಗುರುಗಳ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮವು ಕ್ರಿಸ್ತರ ತ್ಯಾಗ ಮತ್ತು ಕರುಣೆಯ ಸಂದೇಶವನ್ನು ಜನಮಾನಸಕ್ಕೆ ತಲುಪಿಸಿತು.

ಬೆಳಗಾವಿ ನಗರದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಇಮ್ಮಾಕುಲೇಟ್ ಕಾನ್ಸೆಪ್ಶನ್ ಚರ್ಚ್ ಆವರಣದಲ್ಲಿ ಗುಡ್’ ಪ್ರೈಡೆ ನಿಮಿತ್ಯ ಆಯೋಜಿಸಲಾಗಿದ್ದ ಈ ಪ್ರದರ್ಶನಕ್ಕೆ ಪ್ಯಾರಿಷ್ ಪ್ರೀಸ್ಟ್ ಫಾದರ್ ದಿನೇಶ್ ರೊಡ್ರಿಗ್ಸ್, ಫಾದರ್ ಸಿರಿಲ್ ಬ್ರ್ಯಾಗ್ಸ್ ಹಾಗೂ ಫಾದರ್ ವಿಜಯ್ ಡಿಸೋಜಾ ಅವರು ಚಾಲನೆ ನೀಡಿ ಮಾರ್ಗದರ್ಶನ ನೀಡಿದರು. ಯೇಸುಕ್ರಿಸ್ತರ ಶಿಲುಬೆಗೆರಿದ ಘಟನೆಗಳನ್ನು ನೈಜವಾಗಿ ಅಭಿನಯಿಸುವ ಮೂಲಕ ಭಕ್ತರಲ್ಲಿ ಆಧ್ಯಾತ್ಮಿಕ ಸಂಚಲನ ಮೂಡಿಸಲಾಯಿತು.

ಈ ಬೃಹತ್ ಕಾರ್ಯಕ್ರಮದ ಸಂಘಟನೆಯಲ್ಲಿ ರೇಮನ್ ವಾಜ್, ಸಿರಿಲ್ ಕಾರ್ವಾಲೋ, ನಿಕಿ ಕಾರ್ವಾಲೋ, ಥಾಮಸ್ ಲೋಬೋ, ಆಗ್ನೆಲ್ ರೊಡ್ರಿಕ್ಸ್‌, ಫ್ರಾನ್ಸಿಸ್ ಲೋಬೋ, ಕ್ಯಾಸಿಟನ್ ಡಿಸೋಜಾ ಮತ್ತು ವಿಲಿಯಂ ಪಚಾಕೋ ಅವರು ಸಕ್ರಿಯವಾಗಿ ಪಾಲ್ಗೊಂಡು ಶ್ರಮಿಸಿದರು. ಇಮ್ಮಾಕುಲೇಟ್ ಕಾನ್ಸೆಪ್ಶನ್ ಚರ್ಚ್’ನ ಯುವ ಘಟಕದ ಸದಸ್ಯರ ಪರಿಶ್ರಮದಿಂದ ಇಡೀ ಚರ್ಚ್ ಆವರಣವು ಯೇಸುವಿನ ಬಲಿದಾನದ ಸ್ಮರಣೆಗೆ ಸಾಕ್ಷಿಯಾಯಿತು.

ಕಾರ್ಯಕ್ರಮದ ಉದ್ದಕ್ಕೂ ಸಾವಿರಾರು ಭಕ್ತರು ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿದರು. ಕ್ರಿಸ್ತರ ಜೀವನದ ಶ್ರಮದ ಹಾದಿಯನ್ನು ಕಣ್ಣಿಗೆ ಕಟ್ಟುವಂತೆ ಪ್ರದರ್ಶಿಸಿದ ಕಲಾವಿದರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಯಿತು. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಪ್ರೀತಿ ನೆಲೆಸಲಿ ಎಂಬ ಆಶಯದೊಂದಿಗೆ ಈ ಬಾರಿಯ ಲೈವ್ ಪ್ಯಾಶನ್ ಆಫ್ ಕ್ರೈಸ್ಟ್ ಕಾರ್ಯಕ್ರಮವನ್ನು ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಲಾಗಿತ್ತು.

Tags:

error: Content is protected !!